ಭಾರತೀಯ ಸೇನೆಯಿಂದ ಪೂರ್ವ ಲಡಾಖ್ ನ ಎಲ್ಎಸಿ ಬಳಿ ಆರು ಬೆಟ್ಟ ಪ್ರದೇಶಗಳು ವಶಕ್ಕೆ
ಹೊಸದಿಲ್ಲಿ : ಪೂರ್ವ ಲಡಾಖ್ ವಲಯದಲ್ಲಿ ಚೀನಾ ಸೇನೆಯೊಂದಿಗಿನ ಸಂಘರ್ಷದ ಸಂದರ್ಭದಲ್ಲಿ ಭಾರತೀಯ ಸೇನೆ ಕಳೆದ ಮೂರು ವಾರಗಳಲ್ಲಿ ಗಡಿ ನಿಯಂತ್ರಣ ರೇಖೆಯ ಆರು ಪ್ರಮುಖ ಬೆಟ್ಟಪ್ರದೇಶಗಳನ್ನು ಆಕ್ರಮಿಸಿಕೊಂಡಿದೆ.
'ಆಗಸ್ಟ್ 29ರಿಂದ ಸೆಪ್ಟೆಂಬರ್ ಎರಡನೇ ವಾರದವರೆಗೆ ಭಾರತೀಯ ಸೇನೆ ಆರು ಹೊಸ ಎತ್ತರಗಳನ್ನು ಆಕ್ರಮಿಸಿಕೊಂಡಿದೆ. ನಮ್ಮ ಸೈನಿಕರು ಆಕ್ರಮಿಸಿಕೊಂಡಿರುವ ಹೊಸ ಬೆಟ್ಟದ ವೈಶಿಷ್ಟ್ಯಗಳೆಂದರೆ ಮಾಗರ್ ಬೆಟ್ಟ, ಗುರುಂಗ್ ಹಿಲ್, ರೆಸೆಹೆನ್ ಲಾ, ರೆಜಾಂಗ್ ಲಾ, ಮೊಖ್ಪರಿ ಮತ್ತು ಫಿಂಗರ್ 4 ಸಮೀಪದ ಚೀನಾ ಸ್ಥಾನಗಳ ಮೇಲೆ ಪ್ರಾಬಲ್ಯ ಹೊಂದಿರುವ ಎತ್ತರದ ಪ್ರದೇಶಗಳು ಎಂದು ಕೇಂದ್ರ ಸರ್ಕಾರದ ಉನ್ನತ ಮೂಲಗಳಿಂದ ತಿಳಿದು ಬಂದಿದೆ.
0 التعليقات: