Thursday, 17 September 2020

ಪ್ರಧಾನಿಯ 70 ನೇ ಹುಟ್ಟುಹಬ್ಬ ಸಾಮಾಜಿಕ ಜಾಲತಾಣದಲ್ಲಿ ' ರಾಷ್ಟ್ರೀಯ ನಿರುದ್ಯೋಗ ದಿನ ' ಟ್ರೆಂಡಿಂಗ್

 


ಪ್ರಧಾನಿಯ 70 ನೇ ಹುಟ್ಟುಹಬ್ಬ ಸಾಮಾಜಿಕ ಜಾಲತಾಣದಲ್ಲಿ ' ರಾಷ್ಟ್ರೀಯ ನಿರುದ್ಯೋಗ ದಿನ ' ಟ್ರೆಂಡಿಂಗ್

ಹೊಸದಿಲ್ಲಿ : ಇಂದು ಪ್ರಧಾನಿ ನರೇಂದ್ರ ಮೋದಿ ತಮ್ಮ 70 ನೇ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ . ಈ ದಿನವನ್ನು ಸಾಮಾಜಿಕ ಜಾಲತಾಣಿಗರು ವಿಶಿಷ್ಟವಾಗಿ , ಅಂದರೆ ರಾಷ್ಟ್ರೀಯ ನಿರುದ್ಯೋಗ ದಿನವನ್ನಾಗಿ ಆಚರಿಸುತ್ತಿದ್ದಾರೆ . ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಪ್ರಮಾಣವನ್ನು ವಿರೋಧಿಸಿ ಹಾಗೂ ನಿರುದ್ಯೋಗಿ ಯುವಜನತೆಗೆ ಬೆಂಬಲವಾಗಿ ನಿಲ್ಲುವ ಸಲುವಾಗಿ ರಾಷ್ಟ್ರೀಯ ನಿರುದ್ಯೋಗ ದಿನ ಅಥವಾ ರಾಷ್ಟ್ರೀಯ ಬೇರೊಜಾರ್ ದಿವಸ್ ಇಂದು ಟ್ವಿಟರಲ್ಲಿ ಟ್ರೆಂಡಿಂಗ್ ಆಗಿದೆ . ಅಂತೆಯೇ ರಾಷ್ಟ್ರೀಯ ಬೇರೊಜಾರ್ ಸಪ್ತಾಹ ಕೂಡ ಇಂದು ಅಂತ್ಯವಾಗುತ್ತಿದೆ . ಈ ವಾರದಾದ್ಯಂತ ಯುವಜನತೆ ತಾವು ಎದುರಿಸುತ್ತಿರುವ ಸಮಸ್ಯೆಗಳ ಕುರಿತಂತೆ ಸರಕಾರಕ್ಕೆ ವಿವಿಧ ರೀತಿಯಲ್ಲಿ ಮನವರಿಕೆ ಮಾಡಲು ಪ್ರಯತ್ನಿಸಿದೆ . #NationalUnemploymentDay ಹ್ಯಾಶ್ ಟ್ಯಾಗ್ ನಡಿ 20 ಲಕ್ಷಕ್ಕೂ ( 2.3 ಮಿಲಿಯನ್ ) ಹೆಚ್ಚು ಟೀಟ್ ಗಳನ್ನು ಮಾಡಲಾಗಿದೆ .


SHARE THIS

Author:

0 التعليقات: