Tuesday, 15 September 2020

ನಿಶ್ಚಿತಾರ್ಥಕ್ಕಾಗಿ 5.78 ಕೋಟಿ ಬೆಲೆಯ ಉಂಗುರ ನೀಡಿದ ಕ್ರಿಸ್ಟಿಯಾನೊ ರೊನಾಲ್ಡೊ

 


ನಿಶ್ಚಿತಾರ್ಥಕ್ಕಾಗಿ 5.78 ಕೋಟಿ ಬೆಲೆಯ ಉಂಗುರ ನೀಡಿದ ಕ್ರಿಸ್ಟಿಯಾನೊ ರೊನಾಲ್ಡೊ

ಖ್ಯಾತ ಫುಟ್​ಬಾಲ್​ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ತಾವು ವಿವಾಹವಾಗಲಿರುವ ಗೆಳತಿಗಾಗಿ ಭಾರೀ ಬೆಲೆಯ ನಿಶ್ಚಿತಾರ್ಥದ ಉಂಗುರ ಕೊಟ್ಟು ಸುದ್ದಿಯಲ್ಲಿದ್ದಾರೆ. ಗೆಳತಿ, ಭಾವಿ ಪತ್ನಿ ಜಾರ್ಜಿನಾ ರಾಡ್ರಿಗಜ್ ಗೆ ರೊನಾಲ್ಡೊ ನಿಡಿರುವ ಉಂಗುರದ ಬೆಲೆ  5.78 ಕೋಟಿ ರೂ ಇದೆ!

ಹೀಗೆ ತಮ್ಮ ನಿಶ್ಚಿತಾರ್ಥಕ್ಕೆ ಅತ್ಯಂತ ಹೆಚ್ಚು ಖರ್ಚು ಮಾಡಿರುವ ರೊನಾಲ್ಡೋ  ಫುಟ್​ಬಾಲ್​  ಆಟಗಾರರ ಪೈಕಿ ಉಂಗುರಕ್ಕಾಗಿ ಹೆಚ್ಚು ಖರ್ಚು ಮಾಡಿರುವವರಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. 

ಬ್ರಿಟಿಷ್ ಟ್ಯಾಬ್ಲಾಯ್ಡ್, ದಿ ಸನ್ ವರದಿ ಪ್ರಕಾರ, ರೊನಾಲ್ಡೊ ಈ  ವಜ್ರದ ಉಂಗುರಕ್ಕಾಗಿ ಜಿಬಿಪಿ 615,000 (ಅಂದಾಜು 5.78 ಕೋಟಿ ರೂ.)  ನೀಡಿದ್ದಾರೆ. ಫುಟ್​ಬಾಲ್​ ಆಟಗಾರರಲ್ಲಿ ನಿಶ್ಚಿತಾರ್ಥದ ಉಂಗುರಗಳಿಗಾಗಿ ಅತಿದೊಡ್ಡ ಖರ್ಚು ಮಾಡುವವರ ಪಟ್ಟಿಯಲ್ಲಿ ರೊನಾಲ್ಡೊ ಅಗ್ರಪಂಕ್ತಿಯಲ್ಲಿದ್ದು ಇವರನ್ನು ಇಂಗ್ಲೆಂಡಿನ ಜೋರ್ಡಾನ್ ಪಿಕ್ಫೋರ್ಡ್ ಸಹ ಅನುಸರಿಸಿದ್ದಾರೆ. . ಪಿಕ್ಫೋರ್ಡ್ ಪತ್ನಿ ಮೆಗಾನ್ ಡೇವಿಸನ್ ಗಾಗಿ ಜಿಬಿಪಿ 500,000 (ಅಂದಾಜು ರೂ. 4.70 ಕೋಟಿ) ವೆಚ್ಚದ ಉಂಗುರವನ್ನು ಖರೀದಿಸಿದ್ದರು.

ಇನ್ನು ರೊನಾಲ್ಡೋ  ನಾಲ್ಕು ಮಕ್ಕಳ ತಂದೆಯಾಗಿದ್ದು  ಜಾರ್ಜಿನಾ ರಾಡ್ರಿಗಜ್ ಅವರ ಎರಡನೇ ಪತ್ನಿಯಾಗಲಿದ್ದಾರೆ. ಈ ಹಿಂದೆ ರಷ್ಯಾದ ಇರಿನಾ ಶ್ಯಾಕ್​ ಅವರನ್ನು ವಿವಾಹವಾಗಿದ್ದ ರೊನಾಲ್ಡೋ 2015ರಲ್ಲಿ ಅವರಿಂದ ವಿಚ್ಚೇದನ ಪಡೆದಿದ್ದರು. 
     SHARE THIS

    Author:

    0 التعليقات: