Tuesday, 15 September 2020

ದೇಶದಲ್ಲಿ 50 ಲಕ್ಷ ದಾಟಿದ ಸೊಂಕಿತರ ಸಂಖ್ಯೆ: ಒಂದೇ ದಿನದಲ್ಲಿ 1,290 ಜನರು ಬಲಿ

 


ದೇಶದಲ್ಲಿ 50 ಲಕ್ಷ ದಾಟಿದ ಸೊಂಕಿತರ ಸಂಖ್ಯೆ: ಒಂದೇ ದಿನದಲ್ಲಿ 1,290 ಜನರು ಬಲಿ

ನವದೆಹಲಿ: ದೇಶದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ತ್ವರಿತಗತಿಯಲ್ಲಿ ಏರಿಕೆ ಕಾಣುತ್ತಿದ್ದು, ಕಳೆದ 24 ಗಂಟೆಗಳಲ್ಲಿ 901,123 ಹೊಸ ಪ್ರಕರಣಗಳು ಪತ್ತೆಯಾಗಿದೆ. ಮಾತ್ರವಲ್ಲದೆ ಸೊಂಕಿನಿಂದು ಸುಮಾರು 1,290 ಜನರು ಪ್ರಾಣ ತ್ಯೆಜಿಸಿದ್ದಾರೆ.

ಭಾರತದಲ್ಲಿ ಇದೀಗ ಒಟ್ಟು ಸೋಂಕಿತರ ಸಂಖ್ಯೆ 50ಲಕ್ಷದ ಗಡಿ ದಾಟಿದ್ದು, ಅಂಕಿ ಅಂಶಗಳ ಪ್ರಕಾರ 50,202,360 ಜನರು ವೈರಾಣು ಪೀಡಿತರಾಗಿದ್ದಾರೆ. ಇದರಲ್ಲಿ ಸುಮಾರು 39,42,361 ಜನರು ಗುಣಮುಖರಾಗಿದ್ದು, 9,95,933 ಸಕ್ರೀಯ ಪ್ರಕರಣಗಳಿವೆ.

ದೇಶದಲ್ಲಿ 78.28% ಚೇತರಿಕೆ ಪ್ರಮಾಣವಿದ್ದು ಇದೊಂದು ಅಶಾದಾಯಕ ಬೆಳವಣಿಗೆಯಾಗಿದೆ.   ಜಗತ್ತಿನ ಇತರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಮೃತರ ಪ್ರಮಾಣ 1.64% ನಷ್ಟಿದೆ.

ಮಹಾರಾಷ್ಟ್ರದಲ್ಲಿ ಕೋವಿಡ್ ಆರ್ಭಟ ಮುಂದುವರೆದಿದೆ. ಈ ರಾಜ್ಯವೊಂದರಲ್ಲೆ ಸುಮಾರು 17 ಸಾವಿರ ಪ್ರಕರಣಗಳು ಪ್ರತಿದಿನ ಪತ್ತೆಯಾಗುತ್ತಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 10.7ಲಕ್ಷಕ್ಕೆ ತಲುಪಿದೆ. ಮಹಾರಾಷ್ಟ್ರ ಹೊರತುಪಡಿಸಿದರೆ ಆಂಧ್ರಪ್ರದೇಶ, ತಮಿಳುನಾಡು, ಕರ್ನಾಟಕ, ಉತ್ತರ ಪ್ರದೇಶದಲ್ಲಿ ಸೊಂಕಿತರ ಸಂಖ್ಯೆ ದ್ವಿಗುಣವಾಗುತ್ತಿದೆ.

ಈ ನಾಲ್ಕು ರಾಜ್ಯಗಳಲ್ಲಿ 60.3% ಸಕ್ರೀಯ ಪ್ರಕರಣಗಳಿವೆ.  37% ರಷ್ಟು ಮರಣ ಪ್ರಮಾಣ ಮಹಾರಾಷ್ಟ್ರವೊಂದರಲ್ಲೇ ದಾಖಲಾಗುತ್ತಿವೆ.


SHARE THIS

Author:

0 التعليقات: