Sunday, 20 September 2020

ಕೊರೊನಾ ಅಟ್ಟಹಾಸಕ್ಕೆ ರಾಜ್ಯ ಶೇಕ್ : ಬೆಂಗಳೂರಿನಲ್ಲಿ ಇಂದು 3322 ಪಾಸಿಟಿವ್ ಕೇಸ್ ಪತ್ತೆ

 


ಕೊರೊನಾ ಅಟ್ಟಹಾಸಕ್ಕೆ ರಾಜ್ಯ  ಶೇಕ್ : ಬೆಂಗಳೂರಿನಲ್ಲಿ ಇಂದು 3322 ಪಾಸಿಟಿವ್ ಕೇಸ್ ಪತ್ತೆ

ಬೆಂಗಳೂರು : ರಾಜ್ಯದ ರಾಜಧಾನಿಯಲ್ಲಿ ಕೊರೋನಾ ಸ್ಪೋಟ ಇಂದು ಕೂಡ ಮುಂದುವರೆದಿದೆ. ಬೆಂಗಳೂರಿನಲ್ಲಿ ಇಂದು 3322 ಜನರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 194760 ಕ್ಕೆ ಏರಿಕೆಯಾಗಿದೆ..

ಬೆಂಗಳೂರಿನಲ್ಲಿ ಕೊರೊನಾ ಸೋಂಕಿಗೆ ಇಂದು 32 ಮಂದಿ ಸೋಂಕಿತರು ಬಲಿಯಾಗಿದ್ದು, ಇದುವರೆಗೆ ಬೆಂಗಳೂರಿನಲ್ಲಿ ಮೃತಪಟ್ಟ ಸೋಂಕಿತರ ಸಂಖ್ಯೆ 2657 ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಕಿಲ್ಲರ್ ಕೊರೊನಾಗೆ ರಾಜ್ಯದಲ್ಲಿ ಇಂದು 101 ಜನರು ಬಲಿಯಾಗಿದ್ದು, ಈ ಮೂಲಕ ಕೊರೊನಾ ಸಾವಿನ ಸಂಖ್ಯೆ 8023 ಕ್ಕೇರಿದೆ. ರಾಜ್ಯದಲ್ಲಿ ಕೊರೊನಾ ಮಹಾಸ್ಪೋಟವಾಗಿದ್ದು, ಇಂದು 8191 ಜನರಿಗೆ ಕೊರೊನಾ ಸೋಂಕು ಧೃಡವಾಗಿದೆ, ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 519537 ಕ್ಕೆ ಏರಿಕೆಯಾಗಿದೆ. ಐಸಿಯುನಲ್ಲಿ 811 ಮಂದಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.




SHARE THIS

Author:

0 التعليقات: