Covid Update :
ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 94,372 ಕೋವಿಡ್ ಪ್ರಕರಣಗಳು ಪತ್ತೆ!
ನವದೆಹಲಿ :ದೇಶದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿದ್ದು ಕಳೆದ ಇಪ್ಪತ್ತನಾಲ್ಕು ಗಂಟೆಗಳಲ್ಲಿ 94,372 ಕೋವಿಡ್ ಸೋಂಕಿನ ಪ್ರಕರಣಗಳು ದಾಖಲಾಗಿವೆ ಎಂದು ಅರೋಗ್ಯ ಇಲಾಖೆ ದೃಢಪಡಿಸಿದೆ.
ಇದುವರೆಗೂ ದೇಶದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 47,54,357 ಗೆ ಏರಿಕೆಯಾಗಿದೆ, ಕಳೆದ ಇಪ್ಪತ್ತನಾಲ್ಕು ಗಂಟೆಗಳಲ್ಲಿ ಸೋಂಕಿಗೆ 1,114 ಮಂದಿ ಸಾವನ್ನಪ್ಪಿದ್ದು ಇದರೊಂದಿಗೆ ಒಟ್ಟು ಸಾವಿನ ಸಂಖ್ಯೆಯು 78,586ಕ್ಕೆ ಏರಿಕೆಯಾಗಿದೆ.
ಇದುವರೆಗೂ ಕೋವಿಡ್ ಸೋಂಕಿನಿಂದ 37,02,596 ಮಂದಿ ಗುಣಮುಖರಾಗಿದ್ದಾರೆ, ಸದ್ಯ ದೇಶದಲ್ಲಿ ಒಟ್ಟು 9,73,175 ಸಕ್ರೀಯ ಪ್ರಕರಣಗಳಿವೆ.
0 التعليقات: