Sunday, 27 September 2020

ಯಡಿಯೂರಪ್ಪ ಕುಟುಂಬ ಭ್ರಷ್ಟಾಚಾರದಲ್ಲಿ, ಸಾಕ್ಷಿಗಳು ಲಭ್ಯ ಮಾಜಿ ಸಿಎಂ ಸಿದ್ದರಾಮಯ್ಯ

ಯಡಿಯೂರಪ್ಪ ಕುಟುಂಬ ಭ್ರಷ್ಟಾಚಾರದಲ್ಲಿ, ಸಾಕ್ಷಿಗಳು ಲಭ್ಯ ಮಾಜಿ ಸಿಎಂ ಸಿದ್ದರಾಮಯ್ಯ

 

ಯಡಿಯೂರಪ್ಪ ಕುಟುಂಬ ಭ್ರಷ್ಟಾಚಾರದಲ್ಲಿ   ಭಾಗಿಯಾಗಿರುವುದಕ್ಕೆ ಮಹತ್ವದ ಸಾಕ್ಷಿಗಳು   ಲಭ್ಯ : ಮಾಜಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು : ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕುಟುಂಬ ಮತ್ತೊಮ್ಮೆ ಭ್ರಷ್ಟಾಚಾರ ಪ್ರಕರಣದಲ್ಲಿ ಭಾಗಿಯಾಗಿದೆ ಎನ್ನುವುದಕ್ಕೆ ಮಹತ್ವದ ಸಾಕ್ಷಿಗಳು ಲಭ್ಯವಾಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.


ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕುಟುಂಬ ಮತ್ತೊಮ್ಮೆ ಭ್ರಷ್ಟಾಚಾರ ಪ್ರಕರಣದಲ್ಲಿ ಭಾಗಿಯಾಗಿದೆ ಎನ್ನುವುದಕ್ಕೆ ಮಹತ್ವದ ಸಾಕ್ಷಿಗಳು ಲಭ್ಯವಾಗಿದೆ. ಮುಖ್ಯಮಂತ್ರಿಗಳು ತಾವು ಪ್ರಾಮಾಣಿಕರಾಗಿದ್ದರೆ ಈ ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ತಂಡಕ್ಕೆ ವಹಿಸಲು ಏಕೆ ನಿರಾಕರಿಸುತ್ತಿದ್ದರು? ಎಂದು ಪ್ರಶ್ನಿಸಿದ್ದಾರೆ.


ರಾಜ್ಯ ಬಿಜೆಪಿ ಸರ್ಕಾರ ಸಾಲದ ಮೇಲೆ ಸಾಲ ಮಾಡಿ ರಾಜ್ಯವನ್ನು ದಿವಾಳಿ ಮಾಡಲು ಹೊರಟಿದೆ. ಕೇಂದ್ರದಿಂದ ಬರಬೇಕಾದ ಯಾವ ಅನುದಾನವನ್ನೂ ಕೇಳುವ ಧೈರ್ಯ ಬಿಜೆಪಿ ಸಚಿವರಿಗಾಗಲೀ, ಶಾಸಕರಿಗಾಗಲೀ ಅಥವಾ ಸಂಸದರಿಗಾಗಲೀ ಇಲ್ಲ. ನಾಡಿನ ಜನರ ಪರ ಧ್ವನಿ ಎತ್ತಲಾಗದ ಹೇಡಿ ಸರ್ಕಾರ ರಾಜ್ಯದಲ್ಲಿ ಅಸ್ತಿತ್ವದಲ್ಲಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.


ಒಂದೆಡೆ ಕೊರೊನಾದಿಂದ ಜನ ಸಾಯುತ್ತಿದ್ದಾರೆ, ಇತ್ತ ಸರ್ಕಾರ ಲೂಟಿಯಲ್ಲಿ ತೊಡಗಿದೆ. ಬಡ ವಿದ್ಯಾರ್ಥಿಗಳಿಗೆ ವಿತರಿಸುವ ಲ್ಯಾಪ್‌ಟಾಪ್‌, ವೈದ್ಯಕೀಯ ಉಪಕರಣಗಳ ಖರೀದಿ ಸೇರಿ ಎಲ್ಲಿ ಸಾಧ್ಯವೋ ಅಲ್ಲೆಲ್ಲಾ ಬರೀ ಭ್ರಷ್ಟಾಚಾರ. ಹೆಣಗಳ ಮೇಲೆ ದುಡ್ಡು ಮಾಡುವ ಇಂಥ ಸರ್ಕಾರವನ್ನು ನನ್ನ 40 ವರ್ಷಗಳ ರಾಜಕೀಯ ಜೀವನದಲ್ಲಿ ಇದೇ ಮೊದಲು ನೋಡುತ್ತಿರೋದು ಎಂದು ಹೇಳಿದ್ದಾರೆ.


ರಾಜ್ಯ ಬಿಜೆಪಿ ಸರ್ಕಾರದ ದುರಾಡಳಿತ, ಜನವಿರೋಧಿ ನೀತಿಗಳಿಂದಾಗಿ ನಾಡಿನ ಜನ ಯಾಕಾದ್ರೂ ಕಾಂಗ್ರೆಸ್ ಪಕ್ಷವನ್ನು ಸೋಲಿಸಿ ಬಿಜೆಪಿಯನ್ನು ಅಧಿಕಾರಕ್ಕೆ ತಂದೆವೋ ಎಂದು ಪರಿತಪಿಸುತ್ತಿದ್ದಾರೆ. ಮತ್ತೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂಬ ಚರ್ಚೆ ರಾಜ್ಯದ ಉದ್ದಗಲಕ್ಕೂ ಆರಂಭವಾಗಿದೆ ಎಂದು ಹೇಳಿದ್ದಾರೆ.

 ಕರ್ನಾಟಕ ಬಂದ್ : ಇಂದು ನಡೆಯಬೇಕಿದ್ದ ಕರ್ನಾಟಕ ವಿವಿ ಪರೀಕ್ಷೆ ಮುಂದೂಡಿಕೆ

ಕರ್ನಾಟಕ ಬಂದ್ : ಇಂದು ನಡೆಯಬೇಕಿದ್ದ ಕರ್ನಾಟಕ ವಿವಿ ಪರೀಕ್ಷೆ ಮುಂದೂಡಿಕೆ

 

ಕರ್ನಾಟಕ ಬಂದ್ : ಇಂದು ನಡೆಯಬೇಕಿದ್ದ       ಕರ್ನಾಟಕ ವಿವಿ ಪರೀಕ್ಷೆ ಮುಂದೂಡಿಕೆ


ಬೆಂಗಳೂರು : ಕೇಂದ್ರ ಹಾಗೂ ರಾಜ್ಯ ಸರ್ಕಾರದ ರೈತ ವಿರೋಧಿ ವಿಧೇಯಕಗಳನ್ನು ವಿರೋಧಿಸಿ, ರಾಜ್ಯದ ವಿವಿಧ ರೈತಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಗಳಿಂದ ಇಂದು ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದೆ


ಈ ಹಿನ್ನೆಲೆ ಕರ್ನಾಟಕ ವಿವಿಯ ಇಂದು ನಡೆಯಬೇಕಿದ್ದ, ಅಂತಿಮ ಪದವಿ ಮತ್ತು ಸ್ನಾತಕೋತ್ತರ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಮುಂದೂಡಿದ ದಿನಾಂಕವನ್ನು ಶೀಘ್ರದಲ್ಲೇ ಘೋಷಣೆ ಮಾಡಲಾಗುವುದು ಎಂದು ಕರ್ನಾಟಕ ವಿವಿಯಿಂದ ಆದೇಶ ಹೊರಡಿಸಲಾಗಿದೆ.

ಇಂದು ರೈತ ಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಗಳ ಬೆಂಬಲದೊಂದಿಗೆ ಕರ್ನಾಟಕ ಬಂದ್ ನಡೆಸಲಾಗುತ್ತಿದೆ. ಬೆಂಗಳೂರು ನಗರ ಸೇರಿದಂತೆ ರಾಜ್ಯಾಧ್ಯಂತ ಎಲ್ಲಾ ಸಂಘಟನೆಗಳು ಕರ್ನಾಟಕ ಬಂದ್ ಗೆ ಬೆಂಬಲ ನೀಡಲಿದೆ ಎನ್ನಲಾಗಿದೆ.

ಸೋಮವಾರ ರಾಜ್ಯಾದ್ಯಂತ ಸರ್ಕಾರಿ ಬಸ್ ಸಂಚಾರ : ಸಾರ್ವಜನಿಕ ಆಸ್ತಿಗೆ ಹಾನಿಯಾದ್ರೆ ಕಠಿಣ ಕ್ರಮ

Saturday, 26 September 2020

ಡ್ರಗ್ಸ್ ಕೇಸ್ : ದೀಪಿಕಾ ಸೇರಿ ಬಾಲಿವುಡ್ ನಟಿಯರ ಫೋನ್ ಜಪ್ತಿ

ಡ್ರಗ್ಸ್ ಕೇಸ್ : ದೀಪಿಕಾ ಸೇರಿ ಬಾಲಿವುಡ್ ನಟಿಯರ ಫೋನ್ ಜಪ್ತಿ


ಡ್ರಗ್ಸ್ ಕೇಸ್ : ದೀಪಿಕಾ ಸೇರಿ ಬಾಲಿವುಡ್ ನಟಿಯರ ಫೋನ್ ಜಪ್ತಿ

ನವದೆಹಲಿ, ಸೆ.27-ಬಾಲಿವುಡ್ ಖ್ಯಾತ ನಟ ಸುಶಾಂತ್ ಸಿಂಗ್ ರಜಪೂತ್ ಸಾವು ಪ್ರಕರಣ ಮತ್ತು ಮಾದಕ ವಸ್ತು ಜಾಲಕ್ಕೆ ಸಂಬಂಸಿದಂತೆ ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಿರುವ ಮಾದಕವಸ್ತು ನಿಯಂತ್ರಣ ಮಂಡಳಿ (ಎನ್‍ಸಿಬಿ) ಬಿ-ಟೌನ್ ಖ್ಯಾತ ನಟಿಮಣಿಯರಾದ ದೀಪಿಕಾ ಪಡುಕೋಣೆ, ಶ್ರದ್ಧಾಕಪೂರ್, ರಾಕುಲ್ ಪ್ರೀತ್ ಮತ್ತು ಸಾರಾ ಅಲಿ ಖಾನ್ ಅವರ ಮೊಬೈಲ್ ಫೋನ್‍ಗಳನ್ನು ಜಪ್ತಿ ಮಾಡಿದ್ದು, ಹೆಚ್ಚಿನ ಪರಿಶೀಲನೆಗಾಗಿ ವಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಿದೆ.


ಸುದೀರ್ಘ ವಿಚಾರಣೆ ವೇಳೆ ಕೆಲವು ಮಹತ್ವದ ಸಂಗತಿಗಳು ಬೆಳಕಿಗೆ ಬಂದಿದ್ದು, ಈ ಹಿನ್ನೆಲೆಯಲ್ಲಿ ಅವರ ಮೊಬೈಲ್ ಫೋನ್‍ಗಳನ್ನು ವಶಪಡಿಸಿಕೊಂಡು ಫೋರೆನ್ಸಿಕ್ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ., ಎಂದು ಎನ್‍ಸಿಪಿ ಉನ್ನತ ಮೂಲಗಳು ತಿಳಿಸಿವೆ.


ನಟಿಮಣಿಯರಲ್ಲದೇ, ದೀಪಿಕಾ ವಹಿವಾಟು ನೋಡಿಕೊಳ್ಳುವ ವ್ಯವಸ್ಥಾಪಕಿ ಕರಿಷ್ಮಾ ಪ್ರಕಾಶ್ ಮತ್ತು ಟ್ಯಾಲೆಂಟ್ ಮ್ಯಾನೇಜರ್ ಜಯಾ ಸಹ ಅವರ ಫೋನ್‍ಗಳನ್ನು ಕೂಡ ವಶಪಡಿಸಿಕೊಳ್ಳಲಾಗಿದೆ. ದೀಪಿಕಾ ಪಡುಕೋಣೆ ವಾಟ್ಸಾಪ್ ಮೂಲಕ ಡ್ರಗ್ಸ್‍ಗೆ ಸಂಬಂಸಿದಂತೆ ಗೋಪ್ಯವಾಗಿ ನಡೆಸಿದರೆಂದು ಹೇಳಲಾದ ಸಂದೇಶಗಳು ಬೆಳಕಿಗೆ ಬಂದಿರುವ ಹಿನ್ನಲೆಯಲ್ಲಿ ಈ ಬೆಳವಣಿಗೆ ಭಾರೀ ಪ್ರಾಮುಖ್ಯತೆ ಪಡೆದುಕೊಂಡಿದೆ.


ಪದ್ಮಾವತ್ ಖ್ಯಾತಿಯ ನಟಿ ದೀಪಿಕಾ ಪಡುಕೋಣೆ ನಿನ್ನೆ ಬೆಳಗ್ಗೆ 10 ಗಂಟೆಗೆ ಮುಂಬೈನ ಎನ್‍ಸಿಬಿ ಕಚೇರಿಗೆ ಆಗಮಿಸಿ ಆರು ತಾಸುಗಳ ಕಾಲ ತನಿಖೆಗೆ ಒಳಪಟ್ಟರು. ವಿಚಾರಣೆ ವೇಳೆ ಡಿಪ್ಪಿ ಮೂರು ಬಾರಿ ಗಳಗಳನೆ ಅತ್ತರೆಂದು ಎನ್‍ಸಿಬಿ ಮೂಲಗಳು ತಿಳಿಸಿವೆ. ಶ್ರದ್ಧಾ ಕಪೂರ್ ಮತ್ತು ಸಾರಾ ಅಲಿಖಾನ್ ಬೆಳಗ್ಗೆ 10.30ಕ್ಕೆ ವಿಚಾರಣೆಗೆ ಹಾಜರಾದರು. ಖ್ಯಾತ ತಾರೆಯರ ವಿಚಾರಣೆ ಹಿನ್ನೆಲೆಯಲ್ಲಿ ಕಚೇರಿ ಸುತ್ತಮುತ್ತ ವ್ಯಾಪಕ ಬಂದೋಬಸ್ತ್ ಮಾಡಲಾಗಿತ್ತು.


ಈ ಮೂವರು ನಟಿಯರನ್ನು ಪ್ರತ್ಯೇಕವಾಗಿ ವಿಚಾರಣೆಗೆ ಒಳಪಡಿಸಲಾಗಿದೆ. ನಿನ್ನೆ ಬಹುಭಾಷಾ ನಟಿ ರಾಕುಲ್ ಪ್ರೀತ್ ಮತ್ತು ದೀಪಿಕಾ ಪಡುಕೋಣೆ ಅವರ ವ್ಯವಸ್ಥಾಪಕಿ ಕರಿಷ್ಮಾ ಪ್ರಕಾಶ್ ಅವರು ಎನ್‍ಸಿಬಿ ಅಕಾರಗಳ ಮುಂದೆ ಬಾಯ್ಬಿಟ್ಟ ಕೆಲವು ಮಾಹಿತಿಗಳು ಮತ್ತು ವಾಟ್ಸಾಪ್ ಸಂಪರ್ಕ ಜಾಲದ ಹಿನ್ನೆಲೆಯಲ್ಲಿ ಈ ನಟಿಯರನ್ನು ಎನ್‍ಸಿಬಿ ಉನ್ನತಾಕಾರಿಗಳು ಪ್ರತ್ಯೇಕವಾಗಿ ವಿಚಾರಣೆಗೆ ಒಳಪಡಿಸಿ ಕೆಲವು ಮಹತ್ವದ ಸಂಗತಿಗಳನ್ನು ಕೆಲ ಹಾಕಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.


ವಿಚಾರಣೆ ನಂತರ ಈ ನಟಿಯರ ಮೇಲಿನ ಆರೋಪಗಳು ಸಾಬೀತಾದರೆ ಅವರನ್ನು ವಶಕ್ಕೆ ತೆಗೆದುಕೊಳ್ಳುವ ಸಾಧ್ಯತೆಯೂ ಇದೆ ಎಂದು ಉನ್ನತ ಮೂಲಗಳು ಹೇಳಿವೆ. ಬಹುಭಾಷಾ ನಟಿ ರಾಕುಲ್ ಪ್ರೀತ್ ಅವರನ್ನು ನಿನ್ನೆ ಎನ್‍ಸಿಬಿ ಅಕಾರಿಗಳು ನಾಲ್ಕು ತಾಸುಗಳಿಗೂ ಹೆಚ್ಚು ಕಾಲ ವಿಚಾರಣೆಗೆ ಒಳಪಡಿಸಿ ಕೆಲವು ಹೊಸ ಮಾಹಿತಿಗಳನ್ನು ಕಲೆ ಹಾಕಿದೆ.


ಮುಂಬೈನಲ್ಲಿರುವ ಎನ್‍ಸಿಬಿ ಕೇಂದ್ರ ಕಚೇರಿಯಲ್ಲಿ ಅಕಾರಿಗಳು ನಿನ್ನೆ ಬೆಳಗ್ಗೆಯಿಂದ ರಾಕುಲ್ ಪ್ರೀತ್ ಮತ್ತು ಕರಿಷ್ಮಾ ಪ್ರಕಾಶ್ ಅವರನ್ನು ಸುೀರ್ಘ ವಿಚಾರಣೆ ನಡೆಸಿದೆ. ಬಾಲಿವುಡ್ ಸೂಪರ್‍ಸ್ಟಾರ್ ನಟಿಯರಾದ ದೀಪಿಕಾ ಪಡುಕೋಣೆ ಮತ್ತು ಶ್ರದ್ಧಾ ಕಪೂರ್ ಅವರನ್ನು ಇಮದು ಎನ್‍ಸಿಬಿ ತೀವ್ರ ವಿಚಾರಣೆಗೆ ಗುರಿಪಡಿಸಿರುವುದರಿಂದ ಬಿ-ಟೌನ್‍ನ ಇತರ ನಟ-ನಟಿಯರಿಗೂ ಆತಂಕ ಶುರುವಾಗಿದೆ.


ಸುಶಾಂತ್ ಸಾವು ಪ್ರಕರಣದಲ್ಲಿ ಡ್ರಗ್ಸ್ ಜಾಲದ ಸಂಪರ್ಕ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಮತ್ತು ಮಾದಕವಸ್ತು ಬಳಕೆ ಸಂಬಂಧ ದೀಪಿಕಾ, ಶ್ರದ್ಧಾ, ರಾಕುಲ್, ಸಾರಾ ಅಲಿ ಖಾನ್, ಕರಿಷ್ಮಾ ಪ್ರಕಾಶ್ ಮತ್ತು ಫ್ಯಾಷನ್ ಡಿಸೈನರ್ ಸೈಮೊನೆ ಕಂಬಾಟಾ ಅವರಿಗೆ ಎನ್‍ಸಿಬಿ ಬುಧುವಾರ ನೋಟಿಸ್ ಮತ್ತು ಸಮನ್ಸ್‍ಗಳನ್ನು ಜಾರಿಗೊಳಿಸಿತ್ತು.


ಈ ನಟಿ ಮಣಿಯರು ಹೆಸರನ್ನು ಸುಶಾಂತ್ ಮಾಜಿ ಗೆಳತಿ ಮತ್ತು ನಟಿ ರಿಯಾ ಚಕ್ರವರ್ತಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದು, ಇವರು ವಾಟ್ಸ್‍ಆಫ್‍ಗಳಲ್ಲಿ ಡ್ರಗ್ಸ್ ಬಗ್ಗೆ ರಹಸ್ಯ ಸಂಕೇತದಲ್ಲಿ ಸಂದೇಶ ರವಾನಿಸಿದ ಪ್ರಕರಣದ ಸಂಬಂಧ ಎನ್‍ಸಿಬಿ ತನಿಖೆ ತೀವ್ರಗೊಳಿಸಿದೆ. ಈ ಪ್ರಕರಣದಲ್ಲಿ ರಿಯಾ, ಆಕೆಯ ಸಹೋದರ ಸೌವಿಕ್ ಸೇರಿದಂತೆ ಈವರೆಗೆ 20ಕ್ಕೂ ಹೆಚ್ಚು ಜನರನ್ನು ಬಂಸಲಾಗಿದ್ದು, ವಿಚಾರಣೆ ಮತ್ತಷ್ಟು ತೀವ್ರಗೊಂಡಿದೆ.


ಸುಶಾಂತ್‍ಗೆ ಡ್ರಗ್ಸ್ ಪೂರೈಸುತ್ತಿದ್ದ ಆರೋಪದ ಸಂಬಂಧ ಬಂತರಾದ ಚಿತ್ರನಟಿ ರಿಯಾ ಚಕ್ರವರ್ತಿ ವಿಚಾರಣೆ ವೇಳೆ ಮಾದಕ ವಸ್ತು ನಿಯಂತ್ರಣ ಮಂಡಳಿ (ಎನ್‍ಸಿಬಿ) ಅಕಾರಿಗಳ ಮುಂದೆ ಮತ್ತಷ್ಟು ಸಂಗತಿಗಳನ್ನು ಈಗಾಗಲೇ ಬಹಿರಂಗಗೊಳಿಸಿದ್ದಾರೆ.


ಈ ಬಗ್ಗೆ ತನಿಖೆ ತೀವ್ರಗೊಳಿಸಿರುವ ತನಿಖಾ ಸಂಸ್ಥೆ ಪ್ರಕರಣದಲ್ಲಿ ಹೆಸರಿಸಲ್ಪಟ್ಟಿರುವವರ ಜಾಡು ಹಿಡಿದು ತನಿಖೆ ನಡೆಸುತ್ತಿದ್ದು, ಇನ್ನೂ ಕೆಲವರು ಬಂಧನಕ್ಕೆ ಒಳಗಾಗುವ ನಿರೀಕ್ಷೆ ಇದೆ. ಸುಶಾಂತ್ ಸಾವು ಪ್ರಕರಣದಲ್ಲಿ ಡಗ್ಸ್ ಜಾಲದ ನಂಟು ಕೇಳಿ ಬಂದ ನಂತರ ತನಿಖೆಯ ಆಳ ಅಗೆದಷ್ಟು ಹೊಸ ಸಂಗತಿಗಳು ಬೆಳಕಿಗೆ ಬರುತ್ತಿವೆ.

ನವದೆಹಲಿ, ಸೆ.27-ಬಾಲಿವುಡ್ ಖ್ಯಾತ ನಟ ಸುಶಾಂತ್ ಸಿಂಗ್ ರಜಪೂತ್ ಸಾವು ಪ್ರಕರಣ ಮತ್ತು ಮಾದಕ ವಸ್ತು ಜಾಲಕ್ಕೆ ಸಂಬಂಸಿದಂತೆ ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಿರುವ ಮಾದಕವಸ್ತು ನಿಯಂತ್ರಣ ಮಂಡಳಿ (ಎನ್‍ಸಿಬಿ) ಬಿ-ಟೌನ್ ಖ್ಯಾತ ನಟಿಮಣಿಯರಾದ ದೀಪಿಕಾ ಪಡುಕೋಣೆ, ಶ್ರದ್ಧಾಕಪೂರ್, ರಾಕುಲ್ ಪ್ರೀತ್ ಮತ್ತು ಸಾರಾ ಅಲಿ ಖಾನ್ ಅವರ ಮೊಬೈಲ್ ಫೋನ್‍ಗಳನ್ನು ಜಪ್ತಿ ಮಾಡಿದ್ದು, ಹೆಚ್ಚಿನ ಪರಿಶೀಲನೆಗಾಗಿ ವಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಿದೆ.


ಸುದೀರ್ಘ ವಿಚಾರಣೆ ವೇಳೆ ಕೆಲವು ಮಹತ್ವದ ಸಂಗತಿಗಳು ಬೆಳಕಿಗೆ ಬಂದಿದ್ದು, ಈ ಹಿನ್ನೆಲೆಯಲ್ಲಿ ಅವರ ಮೊಬೈಲ್ ಫೋನ್‍ಗಳನ್ನು ವಶಪಡಿಸಿಕೊಂಡು ಫೋರೆನ್ಸಿಕ್ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ., ಎಂದು ಎನ್‍ಸಿಪಿ ಉನ್ನತ ಮೂಲಗಳು ತಿಳಿಸಿವೆ.


ನಟಿಮಣಿಯರಲ್ಲದೇ, ದೀಪಿಕಾ ವಹಿವಾಟು ನೋಡಿಕೊಳ್ಳುವ ವ್ಯವಸ್ಥಾಪಕಿ ಕರಿಷ್ಮಾ ಪ್ರಕಾಶ್ ಮತ್ತು ಟ್ಯಾಲೆಂಟ್ ಮ್ಯಾನೇಜರ್ ಜಯಾ ಸಹ ಅವರ ಫೋನ್‍ಗಳನ್ನು ಕೂಡ ವಶಪಡಿಸಿಕೊಳ್ಳಲಾಗಿದೆ. ದೀಪಿಕಾ ಪಡುಕೋಣೆ ವಾಟ್ಸಾಪ್ ಮೂಲಕ ಡ್ರಗ್ಸ್‍ಗೆ ಸಂಬಂಸಿದಂತೆ ಗೋಪ್ಯವಾಗಿ ನಡೆಸಿದರೆಂದು ಹೇಳಲಾದ ಸಂದೇಶಗಳು ಬೆಳಕಿಗೆ ಬಂದಿರುವ ಹಿನ್ನಲೆಯಲ್ಲಿ ಈ ಬೆಳವಣಿಗೆ ಭಾರೀ ಪ್ರಾಮುಖ್ಯತೆ ಪಡೆದುಕೊಂಡಿದೆ.


ಪದ್ಮಾವತ್ ಖ್ಯಾತಿಯ ನಟಿ ದೀಪಿಕಾ ಪಡುಕೋಣೆ ನಿನ್ನೆ ಬೆಳಗ್ಗೆ 10 ಗಂಟೆಗೆ ಮುಂಬೈನ ಎನ್‍ಸಿಬಿ ಕಚೇರಿಗೆ ಆಗಮಿಸಿ ಆರು ತಾಸುಗಳ ಕಾಲ ತನಿಖೆಗೆ ಒಳಪಟ್ಟರು. ವಿಚಾರಣೆ ವೇಳೆ ಡಿಪ್ಪಿ ಮೂರು ಬಾರಿ ಗಳಗಳನೆ ಅತ್ತರೆಂದು ಎನ್‍ಸಿಬಿ ಮೂಲಗಳು ತಿಳಿಸಿವೆ. ಶ್ರದ್ಧಾ ಕಪೂರ್ ಮತ್ತು ಸಾರಾ ಅಲಿಖಾನ್ ಬೆಳಗ್ಗೆ 10.30ಕ್ಕೆ ವಿಚಾರಣೆಗೆ ಹಾಜರಾದರು. ಖ್ಯಾತ ತಾರೆಯರ ವಿಚಾರಣೆ ಹಿನ್ನೆಲೆಯಲ್ಲಿ ಕಚೇರಿ ಸುತ್ತಮುತ್ತ ವ್ಯಾಪಕ ಬಂದೋಬಸ್ತ್ ಮಾಡಲಾಗಿತ್ತು.


ಈ ಮೂವರು ನಟಿಯರನ್ನು ಪ್ರತ್ಯೇಕವಾಗಿ ವಿಚಾರಣೆಗೆ ಒಳಪಡಿಸಲಾಗಿದೆ. ನಿನ್ನೆ ಬಹುಭಾಷಾ ನಟಿ ರಾಕುಲ್ ಪ್ರೀತ್ ಮತ್ತು ದೀಪಿಕಾ ಪಡುಕೋಣೆ ಅವರ ವ್ಯವಸ್ಥಾಪಕಿ ಕರಿಷ್ಮಾ ಪ್ರಕಾಶ್ ಅವರು ಎನ್‍ಸಿಬಿ ಅಕಾರಗಳ ಮುಂದೆ ಬಾಯ್ಬಿಟ್ಟ ಕೆಲವು ಮಾಹಿತಿಗಳು ಮತ್ತು ವಾಟ್ಸಾಪ್ ಸಂಪರ್ಕ ಜಾಲದ ಹಿನ್ನೆಲೆಯಲ್ಲಿ ಈ ನಟಿಯರನ್ನು ಎನ್‍ಸಿಬಿ ಉನ್ನತಾಕಾರಿಗಳು ಪ್ರತ್ಯೇಕವಾಗಿ ವಿಚಾರಣೆಗೆ ಒಳಪಡಿಸಿ ಕೆಲವು ಮಹತ್ವದ ಸಂಗತಿಗಳನ್ನು ಕೆಲ ಹಾಕಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.


ವಿಚಾರಣೆ ನಂತರ ಈ ನಟಿಯರ ಮೇಲಿನ ಆರೋಪಗಳು ಸಾಬೀತಾದರೆ ಅವರನ್ನು ವಶಕ್ಕೆ ತೆಗೆದುಕೊಳ್ಳುವ ಸಾಧ್ಯತೆಯೂ ಇದೆ ಎಂದು ಉನ್ನತ ಮೂಲಗಳು ಹೇಳಿವೆ. ಬಹುಭಾಷಾ ನಟಿ ರಾಕುಲ್ ಪ್ರೀತ್ ಅವರನ್ನು ನಿನ್ನೆ ಎನ್‍ಸಿಬಿ ಅಕಾರಿಗಳು ನಾಲ್ಕು ತಾಸುಗಳಿಗೂ ಹೆಚ್ಚು ಕಾಲ ವಿಚಾರಣೆಗೆ ಒಳಪಡಿಸಿ ಕೆಲವು ಹೊಸ ಮಾಹಿತಿಗಳನ್ನು ಕಲೆ ಹಾಕಿದೆ.


ಮುಂಬೈನಲ್ಲಿರುವ ಎನ್‍ಸಿಬಿ ಕೇಂದ್ರ ಕಚೇರಿಯಲ್ಲಿ ಅಕಾರಿಗಳು ನಿನ್ನೆ ಬೆಳಗ್ಗೆಯಿಂದ ರಾಕುಲ್ ಪ್ರೀತ್ ಮತ್ತು ಕರಿಷ್ಮಾ ಪ್ರಕಾಶ್ ಅವರನ್ನು ಸುೀರ್ಘ ವಿಚಾರಣೆ ನಡೆಸಿದೆ. ಬಾಲಿವುಡ್ ಸೂಪರ್‍ಸ್ಟಾರ್ ನಟಿಯರಾದ ದೀಪಿಕಾ ಪಡುಕೋಣೆ ಮತ್ತು ಶ್ರದ್ಧಾ ಕಪೂರ್ ಅವರನ್ನು ಇಮದು ಎನ್‍ಸಿಬಿ ತೀವ್ರ ವಿಚಾರಣೆಗೆ ಗುರಿಪಡಿಸಿರುವುದರಿಂದ ಬಿ-ಟೌನ್‍ನ ಇತರ ನಟ-ನಟಿಯರಿಗೂ ಆತಂಕ ಶುರುವಾಗಿದೆ.


ಸುಶಾಂತ್ ಸಾವು ಪ್ರಕರಣದಲ್ಲಿ ಡ್ರಗ್ಸ್ ಜಾಲದ ಸಂಪರ್ಕ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಮತ್ತು ಮಾದಕವಸ್ತು ಬಳಕೆ ಸಂಬಂಧ ದೀಪಿಕಾ, ಶ್ರದ್ಧಾ, ರಾಕುಲ್, ಸಾರಾ ಅಲಿ ಖಾನ್, ಕರಿಷ್ಮಾ ಪ್ರಕಾಶ್ ಮತ್ತು ಫ್ಯಾಷನ್ ಡಿಸೈನರ್ ಸೈಮೊನೆ ಕಂಬಾಟಾ ಅವರಿಗೆ ಎನ್‍ಸಿಬಿ ಬುಧುವಾರ ನೋಟಿಸ್ ಮತ್ತು ಸಮನ್ಸ್‍ಗಳನ್ನು ಜಾರಿಗೊಳಿಸಿತ್ತು.


ಈ ನಟಿ ಮಣಿಯರು ಹೆಸರನ್ನು ಸುಶಾಂತ್ ಮಾಜಿ ಗೆಳತಿ ಮತ್ತು ನಟಿ ರಿಯಾ ಚಕ್ರವರ್ತಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದು, ಇವರು ವಾಟ್ಸ್‍ಆಫ್‍ಗಳಲ್ಲಿ ಡ್ರಗ್ಸ್ ಬಗ್ಗೆ ರಹಸ್ಯ ಸಂಕೇತದಲ್ಲಿ ಸಂದೇಶ ರವಾನಿಸಿದ ಪ್ರಕರಣದ ಸಂಬಂಧ ಎನ್‍ಸಿಬಿ ತನಿಖೆ ತೀವ್ರಗೊಳಿಸಿದೆ. ಈ ಪ್ರಕರಣದಲ್ಲಿ ರಿಯಾ, ಆಕೆಯ ಸಹೋದರ ಸೌವಿಕ್ ಸೇರಿದಂತೆ ಈವರೆಗೆ 20ಕ್ಕೂ ಹೆಚ್ಚು ಜನರನ್ನು ಬಂಸಲಾಗಿದ್ದು, ವಿಚಾರಣೆ ಮತ್ತಷ್ಟು ತೀವ್ರಗೊಂಡಿದೆ.


ಸುಶಾಂತ್‍ಗೆ ಡ್ರಗ್ಸ್ ಪೂರೈಸುತ್ತಿದ್ದ ಆರೋಪದ ಸಂಬಂಧ ಬಂತರಾದ ಚಿತ್ರನಟಿ ರಿಯಾ ಚಕ್ರವರ್ತಿ ವಿಚಾರಣೆ ವೇಳೆ ಮಾದಕ ವಸ್ತು ನಿಯಂತ್ರಣ ಮಂಡಳಿ (ಎನ್‍ಸಿಬಿ) ಅಕಾರಿಗಳ ಮುಂದೆ ಮತ್ತಷ್ಟು ಸಂಗತಿಗಳನ್ನು ಈಗಾಗಲೇ ಬಹಿರಂಗಗೊಳಿಸಿದ್ದಾರೆ.


ಈ ಬಗ್ಗೆ ತನಿಖೆ ತೀವ್ರಗೊಳಿಸಿರುವ ತನಿಖಾ ಸಂಸ್ಥೆ ಪ್ರಕರಣದಲ್ಲಿ ಹೆಸರಿಸಲ್ಪಟ್ಟಿರುವವರ ಜಾಡು ಹಿಡಿದು ತನಿಖೆ ನಡೆಸುತ್ತಿದ್ದು, ಇನ್ನೂ ಕೆಲವರು ಬಂಧನಕ್ಕೆ ಒಳಗಾಗುವ ನಿರೀಕ್ಷೆ ಇದೆ. ಸುಶಾಂತ್ ಸಾವು ಪ್ರಕರಣದಲ್ಲಿ ಡಗ್ಸ್ ಜಾಲದ ನಂಟು ಕೇಳಿ ಬಂದ ನಂತರ ತನಿಖೆಯ ಆಳ ಅಗೆದಷ್ಟು ಹೊಸ ಸಂಗತಿಗಳು ಬೆಳಕಿಗೆ ಬರುತ್ತಿವೆ.


ಕಲಬುರಗಿ : ಲಾರಿಗೆ ಕಾರು ಡಿಕ್ಕಿ, ಭೀಕರ ಅಪಘಾತ ಗರ್ಭಿಣಿ ಸೇರಿ 7 ಮಂದಿಸಾವು..!

ಕಲಬುರಗಿ : ಲಾರಿಗೆ ಕಾರು ಡಿಕ್ಕಿ, ಭೀಕರ ಅಪಘಾತ ಗರ್ಭಿಣಿ ಸೇರಿ 7 ಮಂದಿಸಾವು..!

 

ಕಲಬುರಗಿ : ಲಾರಿಗೆ ಕಾರು ಡಿಕ್ಕಿ,                         ಭೀಕರ ಅಪಘಾತ ಗರ್ಭಿಣಿ ಸೇರಿ                           7 ಮಂದಿಸಾವು..!


ಕಲಬುರ್ಗಿ, ಸೆ.27;  ಗರ್ಭಿಣಿಯನ್ನು ಹೆರಿಗೆಗೆ ಕರೆದೊಯ್ಯುತ್ತಿದ್ದ ಕಾರು ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಗರ್ಭಿಣಿ ಸೇರಿ ಏಳು ಮಂದಿ ಸ್ಥಳದಲ್ಲೇ ಸಾವನ್ನಪ್ಪಿರುವ ಧಾರುಣ ಘಟನೆ ತಾಲ್ಲೂಕಿನ ಆಳಂದ ರಸ್ತೆಯ ಸಾವಳಗಿ ಕ್ರಾಸ್ ಬಳಿ ಇಂದು ಬೆಳಗಿನ ಜಾವ 4.30ರ ಸುಮಾರಿಗೆ ಸಂಭವಿಸಿದೆ.


ಆಳಂದ ನಿವಾಸಿಗಳಾದ ಗರ್ಭಿಣಿ ಇರ್ಫಾನಾ ಬೇಗಂ (25), ರುಬಿಯಾ ಬೇಗಂ (50), ಅಬೇದಾಬಿ ಬೇಗಂ (50), ಜಯಚುನಬಿ (60) ಹಾಗೂ ಮುನೀರ್ (28), ಮಹಮ್ಮದ್ ಅಲಿ (38), ಶೌಕತ್ ಅಲಿ (29) ಎಂಬುವವರೇ ಮೃತಪಟ್ಟ ದುರ್ದೈವಿಗಳು.


ತುಂಬು ಗರ್ಭಿಣಿ ಇರ್ಫಾನಾ ಬೇಗಂಗೆ ಹೆರಿಗೆ ನೋವು ಕಾಣಿಸಿಕೊಂಡ ಪರಿಣಾಮ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲು ಪತಿ ಮತ್ತು ಕುಟುಂಬದವರು ಕಾರಿನಲ್ಲಿ ತೆರಳುತ್ತಿದ್ದರು. ಕಾರ್ ಚಾಲಕ ಅವಸರದಲ್ಲಿ ವಾಹನ ಓಡಿಸುವಾಗ ರಸ್ತೆ ಪಕ್ಕ ಎದುರಿಗೆ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಲಾರಿ ಕೂಡ ಉರುಳಿ ರಸ್ತೆ ಪಕ್ಕದ ತಗ್ಗಿನಲ್ಲಿ ಬಿದ್ದಿದೆ.


ಸಾವಳಗಿ ಗ್ರಾಮಸ್ಥರು ಸ್ಥಳಕ್ಕೆ ದೌಡಾಯಿಸಿದರು. ಯಾರಾದರೂ ಬದುಕಿದ್ದರೆ ಆಸ್ಪತ್ರೆಗೆ ಸೇರಿಸಬೇಕೆಂದು ಪ್ರಯತ್ನ ಮಾಡಿದರೂ, ಅಪಘಾತದ ರಭಸಕ್ಕೆ ನಜ್ಜುಗುಜ್ಜಾಗಿದ್ದ ಕಾರಿನಲ್ಲಿ ಎಲ್ಲರ ದೇಹಗಳೂ ಸಿಕ್ಕಿಕೊಂಡಿದ್ದವು. ಹೀಗಾಗಿ ರಕ್ಷಣಾ ಕಾರ್ಯ ಸಾಧ್ಯವಾಗಲಿಲ್ಲ.


ಕೆಲ ಸಮಯದ ನಂತರ ಕಲಬುರಗಿ ಸಂಚಾರ ಠಾಣೆ ಪೊಲೀಸರು ಸ್ಥಳಕ್ಕೆ ಬಂದು ಗ್ರಾಮಸ್ಥರ ಸಹಾಯದಿಂದ ಕಾರ್ ಬಾಗಿಲುಗಳನ್ನು ಮುರಿದು ಶವಗಳನ್ನು ಹೊರತೆಗೆದರು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

 ಒಂದೇ ದಿನ 88600 ಮಂದಿಗೆ ಕೋವಿಡ್ ಸೇರಿ  59.60ಲಕ್ಷಕ್ಕೇರಿದ ಸೋಂಕಿತರ ಸಂಖ್ಯೆ

ಒಂದೇ ದಿನ 88600 ಮಂದಿಗೆ ಕೋವಿಡ್ ಸೇರಿ 59.60ಲಕ್ಷಕ್ಕೇರಿದ ಸೋಂಕಿತರ ಸಂಖ್ಯೆ


 ಒಂದೇ ದಿನ 88600 ಮಂದಿಗೆ ಕೋವಿಡ್ ಸೇರಿ   59.60ಲಕ್ಷಕ್ಕೇರಿದ ಸೋಂಕಿತರ ಸಂಖ್ಯೆ

ನವದಹೆಲಿ, ಸೆ.27 : ಕಳೆದ 24 ಗಂಟೆಗಳಲ್ಲಿ 88 ಸಾವಿರದ 600 ಮಂದಿಯಲ್ಲಿ ವೈರಸ್ ದೃಢಪಟ್ಟಿದ್ದು, ಈ ಮೂಲಕ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 59 ಲಕ್ಷದ 92 ಸಾವಿರದ 533ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಇಂದು ಮಾಹಿತಿ ನೀಡಿದೆ.


ಒಂದೇ ದಿನ ಬರೋಬ್ಬರಿ 1,124 ಮಂದಿ ಬಲಿಯಾಗಿದ್ದು, ಸಾವಿನ ಸಂಖ್ಯೆ 93,379ಕ್ಕೆ ತಲುಪಿದೆ. 59,92,533 ಮಂದಿ ಸೋಂಕಿತರ ಪೈಕಿ 49,41,628 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ದೇಶದಲ್ಲಿನ್ನೂ 9,56,402 ಸಕ್ರಿಯ ಪ್ರಕರಣಗಳು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ವರದಿಯಾಗಿದೆ.


ದೇಶಾದ್ಯಂತ 24 ಗಂಟೆಗಳಲ್ಲಿ 9,87,861 ಕೋವಿಡ್ ಪರೀಕ್ಷೆ: ಐಸಿಎಂಆರ್ ಮಾರಕ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ದೇಶದಲ್ಲಿ ಗಣನೀಯವಾಗಿ ಏರಿಕೆಯಾಗುತ್ತಿರುವಂತೆಯೇ ಇತ್ತ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ 24 ಗಂಟೆಗಳಲ್ಲಿ ದೇಶಾದ್ಯಂತ 9,87,861 ಕೋವಿಡ್-19 ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಮಾಹಿತಿ ನೀಡಿದೆ.


ಕೇಂದ್ರ ಸರ್ಕಾರದ ನಡೆ ವಿರೋಧಿಸಿ ರೈತಪರ  ಸಂಘಟನೆ ;ನಾಳೆ ಕರ್ನಾಟಕ ಬಂದ್

ಕೇಂದ್ರ ಸರ್ಕಾರದ ನಡೆ ವಿರೋಧಿಸಿ ರೈತಪರ ಸಂಘಟನೆ ;ನಾಳೆ ಕರ್ನಾಟಕ ಬಂದ್

 

ಕೇಂದ್ರ ಸರ್ಕಾರದ ನಡೆ ವಿರೋಧಿಸಿ ರೈತಪರ   ಸಂಘಟನೆ ;ನಾಳೆ ಕರ್ನಾಟಕ ಬಂದ್ 

ಬೆಂಗಳೂರು :ನಾಳೆ ಕರ್ನಾಟಕ ಸಂಪೂರ್ಣ ಬಂದ್ ಆಗಿರಲಿದೆ. ರೈತ ವಿರೋಧಿ ನೀತಿಯನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರ ಜಾರಿಗೊಳಿಸುತ್ತಿದೆ ಎಂದು ಆರೋಪಿಸಿ ರೈತ ಸಂಘಟನೆಗಳು ಹಾಗೂ ಕನ್ನಡಪರ ಸಂಘಟನೆಗಳು ಬಂದ್ ಗೆ ಕರೆ ನೀಡಿವೆ.

ಹೀಗಾಗಿ ಸೋಮವಾರ ರಾಜ್ಯ ಸಂಪೂರ್ಣ ಬಂದ್ ಆಗಿರಲಿದೆ. ಸರ್ಕಾರಕ್ಕೆ ಬಿಸಿ ಮುಟ್ಟಿಸುವ ನಿಟ್ಟಿನಲ್ಲಿ ರೈತರು ಈ ಹೋರಾಟ ಕೈಗೊಂಡಿದ್ದಾರೆ. ರೈತರೊಂದಿಗೆ ವಿವಿಧ ಸಂಘಟನೆಗಳು ಕೂಡ ಕೈ ಜೋಡಿಸಿದ್ದರಿಂದಾಗಿ ನಾಳೆ ರಾಜ್ಯವು ಸಂಪೂರ್ಣವಾಗಿ ಬಂದ್ ಆಗಿರಲಿದೆ.


35 ರೈತ ಪರ ಸಂಘಟನೆಗಳೊಂದಿಗೆ ಐಕ್ಯ ಹೋರಾಟ ಸಮಿತಿ, ರೈತ ಹೋರಾಟ ಸಂಘಟನೆಗಳು, ಕನ್ನಡಪರ ಹೋರಾಟ ಸಂಘಟನೆಗಳು, ನಾರಾಯಣಗೌಡರ ಕರವೇ ಸಂಘಟನೆ, ಪ್ರವೀಣ್ ಶೆಟ್ಟಿ ಕರವೇ ಬಣ, 25ಕ್ಕೂ ಹೆಚ್ಚು ಕಾರ್ಮಿಕ ಸಂಘಟನೆಗಳು, ದಲಿತ ಸಂಘಟನೆಗಳು, ದಲಿತ ಸಂಘರ್ಷ ಸಮಿತಿ, ಉತ್ತರ ಕರ್ನಾಟಕ, ಮುಂಬೈ ಕರ್ನಾಟಕದ ವಿವಿಧ ಸಂಘಟನೆಗಳು, ಮಹಾದಯಿ ಹೋರಾಟ ಸಂಘಟನೆ, ಓಲಾ, ಊಬರ್, ಕ್ಯಾಬ್, ಆಟೋ,ಟ್ಯಾಕ್ಸಿ ಅಸೋಸಿಯೇಶನ್, ಆಟೋ ಮಿತ್ರ, ಪೀಸ್ ಆಟೋ ಸಂಘಟನೆ, ಖಾಸಗಿ ಟೂರಿಸ್ಟ್ ಮತ್ತು ಟ್ಯಾಕ್ಸಿ ಮಾಲೀಕರ ಸಂಘಗಳು ಹೋರಾಟಕ್ಕೆ ಬೆಂಬಲ ನೀಡಿವೆ. ಹೀಗಾಗಿ ಹೋರಾಟ ನಾಳೆ ತೀವ್ರ ಸ್ವರೂಪ ಪಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.


  ಎಪಿಎಂಸಿ ಹಾಗೂ ಭೂಸುಧಾರಣಾ ತಿದ್ದುಪಡಿ ಕಾಯ್ದೆ ವಿರೋಧಿಸಿ ರೈತಪರ ಸಂಘಟನೆಗಳು ಹಾಗೂ ಕಾರ್ಮಿಕ ಸಂಘಟನೆಗಳಿಂದ ನಾಳೆ ರಾಜ್ಯ ಬಂದ್ ಗೆ ಕರೆ ನೀಡಲಾಗಿದೆ. ನಾಳೆಯ ಕರ್ನಾಟಕ ಬಂದ್ ಗೆ 40 ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ನೀಡಿದ್ದು, ಓಲಾ, ಉಬರ್, ಟ್ಯಾಕ್ಸಿಗಳು ನಾಳೆ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಸಂಚರಿಸುವುದಿಲ್ಲ.

ಹಾಗಾದ್ರೆ ನಾಳೆಯ ಕರ್ನಾಟಕ ಬಂದ್ ವೇಳೆ ಏನಿರುತ್ತೆ? ಏನಿರಲ್ಲ ? ಇಲ್ಲಿದೆ ನೋಡಿ ಮಾಹಿತಿ

ಏನಿರುತ್ತೆ?

ನಾಳೆಯ ಕರ್ನಾಟಕ ಬಂದ್ ವೇಳೆ ಹಾಲು, ಹಣ್ಣು, ತರಕಾರಿ, ಮೆಡಿಕಲ್ ಸ್ಟೋರ್ಸ್, ಆಸ್ಪತ್ರೆ ಸೇವೆಗಳು ಇರಲಿವೆ. ಹೋಟೆಲ್ ಗಳು, ಬಾರ್ ಮತ್ತು ರೆಸ್ಟೋರೆಂಟ್ ಗಳು, ಎಂದಿನಂತೆ ಓಪನ್ ಇರಲಿದ್ದು, ಕೆಎಸ್‌ಆರ್ ಟಿಸಿ, ಬಿಎಂಟಿಸಿ, ಮೆಟ್ರೋ, ರೈಲು, ವಿಮಾನ ಸಂಚಾರ ಇರಲಿದೆ.


ಏನಿರಲ್ಲ?

ಓಲಾ-ಉಬರ್, ಆಟೋ-ಟ್ಯಾಕ್ಸಿ ಸಂಘಗಳು ಬಂದ್ ಗೆ ಬೆಂಬಲ ನೀಡಿದ್ದು, ಈ ಸೇವೆಗಳು ಇರುವುದಿಲ್ಲ. ಖಾಸಗಿ ಬಸ್, ಲಾರಿ ಸೇವೆಗಳು ಬಂದ್ ಇರಲಿವೆ ಎನ್ನಲಾಗಿದೆ.

ರೈತರ ಹೋರಾಟಕ್ಕೆ ಬೀದಿ ಬದಿ ವ್ಯಾಪಾರಿಗಳು ಬೆಂಬಲ ನೀಡಿದ್ದು, ಹೀಗಾಗಿ ನಾಳೆ ಮಾರ್ಕೆಟ್ ಬಂದ್ ಆಗುವ ಸಾಧ್ಯತೆ ಇದೆ.

'ಕಾನೂನಿನಡಿಯಲ್ಲಿ ವೇಶ್ಯಾವಾಟಿಕೆ  ಕ್ರಿಮಿನಲ್ ಅಪರಾಧವಲ್ಲ;  ಬಾಂಬೆ ಹೈಕೋರ್ಟ್

'ಕಾನೂನಿನಡಿಯಲ್ಲಿ ವೇಶ್ಯಾವಾಟಿಕೆ ಕ್ರಿಮಿನಲ್ ಅಪರಾಧವಲ್ಲ; ಬಾಂಬೆ ಹೈಕೋರ್ಟ್

 

'ಕಾನೂನಿನಡಿಯಲ್ಲಿ ವೇಶ್ಯಾವಾಟಿಕೆ 
 ಕ್ರಿಮಿನಲ್ ಅಪರಾಧವಲ್ಲ; 
 ಬಾಂಬೆ ಹೈಕೋರ್ಟ್

ಮುಂಬೈ: 'ಕಾನೂನಿನಡಿಯಲ್ಲಿ ವೇಶ್ಯಾವಾಟಿಕೆ ಕ್ರಿಮಿನಲ್ ಅಪರಾಧವಲ್ಲ   ಮತ್ತು ವಯಸ್ಕ ಮಹಿಳೆಗೆ ತನ್ನ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕಿದೆ,' ಎಂದು ಅಭಿಪ್ರಾಯಪಟ್ಟಿರುವ ಬಾಂಬೆ ಹೈಕರ‍್ಟ್, ಮುಂಬೈನಲ್ಲಿ ಬಂಧನಕ್ಕೊಳಗಾಗಿರುವ ಮೂವರು ಮಹಿಳಾ ಲೈಂಗಿಕ ಕರ‍್ಯರ‍್ತರನ್ನು ತಕ್ಷಣ ಬಿಡುಗಡೆ ಮಾಡುವಂತೆ ಆದೇಶ ಹೊರಡಿಸಿದೆ.

'1956ರ ಅನೈತಿಕ ಚಟುವಟಿಕೆ (ತಡೆಗಟ್ಟುವಿಕೆ) ಕಾಯ್ದೆಯ ಅಡಿಯಲ್ಲಿ ವೇಶ್ಯಾವಾಟಿಕೆಯನ್ನು ಕ್ರಿಮಿನಲ್ ಅಪರಾಧವೆಂದು ಪರಿಗಣಿಸಲಾಗಿಲ್ಲ,' ಎಂದೂ ನ್ಯಾಯಮರ‍್ತಿ ಪೃಥ್ವಿರಾಜ್ ಚೌಹಾಣ್‌ ಅವರ ನೇತೃತ್ವದ ನ್ಯಾಯಪೀಠವು ಆದೇಶದ ವೇಳೆ ತಿಳಿಸಿದೆ.

'ಮೂವರು ಮಹಿಳೆಯರು ವಯಸ್ಕರಾಗಿದ್ದಾರೆ. ಅವರು ಇಚ್ಚಿಸಿದಂತೆ ಬದುಕಲು, ಅವರು ಇಷ್ಟಪಟ್ಟ ವೃತ್ತಿ ಆಯ್ಕೆ ಮಾಡಿಕೊಳ್ಳಲು ಸ್ವತಂತ್ರರಿದ್ದಾರೆ. ಸ್ವತಃ ವೇಶ್ಯಾವಾಟಿಕೆ ಅಪರಾಧವಲ್ಲ. ಮತ್ತು ಶಿಕ್ಷೆಗೂ ಒಳಗಾಗುವುದಿಲ್ಲ. ಆದರೆ, ಅದರ ಸರ‍್ವಜನಿಕ ಒತ್ತಾಯವು ಕಾಯಿದೆಯಡಿ ಅಪರಾಧವೆನಿಸಿಕೊಂಡಿದೆ,' ಎಂದು ನ್ಯಾಯಮರ‍್ತಿ ತಿಳಿಸಿದ್ದಾರೆ.


ಯಾವುದು ಅಪರಾಧ?

'ವಾಣಿಜ್ಯ ಉದ್ದೇಶಕ್ಕಾಗಿ ವ್ಯಕ್ತಿಯನ್ನು ಲೈಂಗಿಕ ಶೋಷಣೆಗೆ ತಳ್ಳುವುದು, ನಿಂದಿಸುವುದು ಮತ್ತು ಅದನ್ನೇ ಜೀವನೋಪಾಯವನ್ನಾಗಿ ಮಾಡಿಕೊಳ್ಳುವುದು ೧೯೫೬ರ ಅನೈತಿಕ ಚಟುವಟಿಕೆ (ತಡೆಗಟ್ಟುವಿಕೆ) ಕಾಯ್ದೆಯ ಅಡಿಯಲ್ಲಿ ಅಪರಾಧವೆನಿಸಿಕೊಂಡಿದೆ. ಒಬ್ಬ ವ್ಯಕ್ತಿಯು ಸರ‍್ವಜನಿಕ ಸ್ಥಳದಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದರೆ, ಅಥವಾ ಇನ್ನೊಬ್ಬ ವ್ಯಕ್ತಿಯನ್ನು ಒತ್ತಾಯಪಡಿಸುತ್ತಿದ್ದರೆ, ಪ್ರಲೋಭನೆಗೆ ಒಳಪಡಿಸುತ್ತಿದ್ದರೆ ಅದೂ ಕೂಡ ಅಪರಾಧವೆನಿಸಿಕೊಳ್ಳುತ್ತದೆ,' ಎಂದು ಕರ‍್ಟ್‌ ಸ್ಪಷ್ಟವಾಗಿ ಹೇಳಿದೆ.

'ಅರ್ಜಿದಾರರು (ಬಂಧಿತ ಮೂವರು ಮಹಿಳೆಯರು) ವೇಶ್ಯಾವಾಟಿಕೆ ಉದ್ದೇಶದಿಂದ ಯಾವುದೇ ವ್ಯಕ್ತಿಯನ್ನು ಪ್ರಲೋಭನೆಗೆ ಒಳಪಡಿಸಿರುವುದಕ್ಕೆ ಅಥವಾ ಅವರು ವೇಶ್ಯಾಗೃಹವನ್ನು ನಡೆಸುತ್ತಿರುವುದಕ್ಕೆ ಈ ಪ್ರಕರಣದಲ್ಲಿ ದಾಖಲೆಗಳೇ ಇಲ್ಲ,' ಎಂದು ಅಭಿಪ್ರಾಯಪಟ್ಟ ಹೈಕೋರ್ಟ್  ಮೂವರು ಮಹಿಳೆಯರನ್ನು ಮಾಡುವಂತೆ ತಿಳಿಸಿತು.


ಏನಿದು ಪ್ರಕರಣ?

ಕಳೆದ ರ‍್ಷ, ಮಲಾಡ್ ಎಂಬಲ್ಲಿನ ಅತಿಥಿಗೃಹದ ಮೇಲೆ ದಾಳಿ ನಡೆಸಿದ್ದ ಪೊಲೀಸರು ೨೦ ರ‍್ಷ ವಯಸ್ಸಿನ ಮೂವರು ಮಹಿಳೆಯರನ್ನು ವೇಶ್ಯಾವಾಟಿಕೆ ಆರೋಪದ ಅಡಿಯಲ್ಲಿ ವಶಕ್ಕೆ ಪಡೆದಿದ್ದರು. ಅಲ್ಲದೆ, ಮಧ್ಯರ‍್ತಿಯೊಬ್ಬನನ್ನು ಪೊಲೀಸರು ಅನೈತಿಕ ಚಟುವಟಿಕೆ (ತಡೆಗಟ್ಟುವಿಕೆ) ಕಾಯ್ದೆಯ ಅಡಿಯಲ್ಲಿ ಬಂಧಿಸಿದ್ದರು. ಮಜಗಾಂವ್‌ ಮೆಟ್ರೋ ಪಾಲಿಟನ್‌ ನ್ಯಾಯಾಲಯವು ಮೂವರು ಮಹಿಳೆಯರ ಬಂಧನವನ್ನು ಎತ್ತಿ ಹಿಡಿದಿತ್ತು. ಇಚ್ಛೆಗೆ ವಿರುದ್ಧವಾಗಿ ತಮ್ಮನ್ನು ಬಂಧಿಸಿಡಲಾಗಿದೆ ಎಂದು ಆರೋಪಿಸಿ ಮೂವರೂ ಮಹಿಳೆಯರು ಮೆಟ್ರೊಪಾಲಿಟನ್‌ ನ್ಯಾಯಾಲಯದ ಆದೇಶವನ್ನು ಹೈಕರ‍್ಟ್‌ನಲ್ಲಿ ಪ್ರಶ್ನಿಸಿದ್ದರು. ಇದರ ವಿಚಾರಣೆ ನಡೆಸಿದ ನ್ಯಾಯಮರ‍್ತಿ ಚೌಹಾಣ್‌ ಮೇಲಿನ ಆದೇಶ ನೀಡಿದ್ದಾರೆ.

ವಿಶ್ವ ಸಂಸ್ಥೆಯಲ್ಲಿ ‌ಗುಡುಗಿದ ಪ್ರಧಾನಿ ಮೋದಿ

ವಿಶ್ವ ಸಂಸ್ಥೆಯಲ್ಲಿ ‌ಗುಡುಗಿದ ಪ್ರಧಾನಿ ಮೋದಿ


ವಿಶ್ವ ಸಂಸ್ಥೆಯಲ್ಲಿ ‌ಗುಡುಗಿದ 

 ಪ್ರಧಾನಿ ಮೋದಿ

ನವದೆಹಲಿ: ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಮತ್ತು 1.3 ಶತಕೋಟಿ ಜನರಿಗೆ ನೆಲೆಯಾಗಿರುವ ಭಾರತವನ್ನು ವಿಶ್ವಸಂಸ್ಥೆಯ ನಿರ್ಧಾರ ತೆಗೆದುಕೊಳ್ಳುವ ರಚನೆಗಳಿಂದ ಎಷ್ಟು ಸಮಯದವರೆಗೆ ಹೊರಗಿಡುತ್ತೀರಿ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಶ್ನಿಸಿದ್ದಾರೆ.


ವಿಶ್ವಸಂಸ್ಥೆ ಮಹಾ ಅಧಿವೇಶನ 75ನೇ ಅಧಿವೇಶನದಲ್ಲಿ ಪ್ರಧಾನಿ ಮೋದಿ ಅವರು ವಿಶ್ವಸಂಸ್ಥೆಯಲ್ಲಿ ಸ್ಥಿರತೆ ಮತ್ತು ವಿಶ್ವಸಂಸ್ಥೆಯ ಮಂಡಲಿಯ ಸಬಲೀಕರಣವು ವಿಶ್ವದ ಕಲ್ಯಾಣಕ್ಕಾಗಿ ಅವಶ್ಯಕವಾಗಿದೆ ಎಂದು ಹೇಳಿದರು.


2021ರ ಜನವರಿ 1ರಿಂದ 15 ಸದಸ್ಯರ ಪರಿಷತ್ತಿನ ಚುನಾಯಿತ ಖಾಯಂ ಸದಸ್ಯರಾಗಿ ಭಾರತ ತನ್ನ ಎರಡು ವರ್ಷಗಳ ಅವಧಿಯನ್ನು ಪ್ರಾರಂಭಿಸಲಿರುವುದರಿಂದ ವಿಶ್ವಸಂಸ್ಥೆಯ ಸುಧಾರಣೆಗಳಿಗಾಗಿ ಪ್ರಬಲ ಭದ್ರತಾ ಮಂಡಳಿಯನ್ನು ವಿಸ್ತರಿಸುವ ಸಮಯ ಬಂದಿದೆ ಎಂದರು.


ವಿಶ್ವಸಂಸ್ಥೆಯ ನಿರ್ಧಾರ ತೆಗೆದುಕೊಳ್ಳುವ ರಚನೆಗಳಿಂದ ಭಾರತವನ್ನು ಎಷ್ಟು ದಿನ ದೂರವಿಡಲಾಗುವುದು? ಆ ದೇಶದಲ್ಲಿ ಆಗುತ್ತಿರುವ ಪರಿವರ್ತನೆಯ ಬದಲಾವಣೆಗಳು ವಿಶ್ವದ ಬಹುಪಾಲು ಭಾಗದ ಮೇಲೆ ಪರಿಣಾಮ ಬೀರುವಾಗ ಒಂದು ದೇಶವು ಎಷ್ಟು ಸಮಯ ಕಾಯಬೇಕಾಗಿತ್ತು?" ಎಂದು ಮೋದಿ ಕೇಳಿದರು.


ವಿಶ್ವಸಂಸ್ಥೆಯ ಸುಧಾರಣೆಗಳು ಪೂರ್ಣಗೊಳ್ಳುವ ಪ್ರಕ್ರಿಯೆಗಾಗಿ ಭಾರತದ ಜನರು ಬಹಳ ಸಮಯದಿಂದ ಕಾಯುತ್ತಿದ್ದಾರೆ ಎಂಬುದು ನಿಜ. ಇಂದು ಈ ಸುಧಾರಣಾ ಪ್ರಕ್ರಿಯೆಯು ಎಂದಾದರೂ ತನ್ನ ತಾರ್ಕಿಕ ತೀರ್ಮಾನಕ್ಕೆ ತಲುಪುತ್ತದೆಯೇ ಎಂದು ಭಾರತದ ಜನರು ಕಳವಳ ವ್ಯಕ್ತಪಡಿಸಿದ್ದಾರೆ ಎಂದು ಮೋದಿ ಹೇಳಿದರು.


ವಿಶ್ವ ಸಂಘಟನೆಯಲ್ಲಿ ಭಾರತದ ಕೊಡುಗೆಯನ್ನು ನೋಡುವಾಗ ಪ್ರತಿಯೊಬ್ಬ ಭಾರತೀಯನೂ ವಿಶ್ವಸಂಸ್ಥೆಯಲ್ಲಿ ಭಾರತದ ವಿಸ್ತೃತ ಪಾತ್ರವನ್ನು ಆಶಿಸುತ್ತಾನೆ. ಪ್ರತಿಕ್ರಿಯೆಗಳಲ್ಲಿ, ಪ್ರಕ್ರಿಯೆಗಳಲ್ಲಿ ಮತ್ತು ವಿಶ್ವಸಂಸ್ಥೆಯ ಸ್ವರೂಪದಲ್ಲಿ ಸುಧಾರಣೆಯು ಸಮಯದ ಅವಶ್ಯಕತೆಯಾಗಿದೆ ಎಂದು ಮೋದಿ ಒತ್ತಿ ಹೇಳಿದರು.


ಭಾರತವು ಭದ್ರತಾ ಮಂಡಳಿಯನ್ನು ಸುಧಾರಿಸಲು ದಶಕಗಳಿಂದ ಪ್ರಯತ್ನಗಳನ್ನು ನಡೆಸುತ್ತಿದೆ. 1945ರಲ್ಲಿ ಸ್ಥಾಪಿಸಲಾದ ಒಂದು ರಚನೆಯು 21ನೇ ಶತಮಾನದ ಸಮಕಾಲೀನ ವಾಸ್ತವಗಳನ್ನು ಪ್ರತಿಬಿಂಬಿಸುವುದಿಲ್ಲ ಮತ್ತು ಪ್ರಸ್ತುತ ಸವಾಲುಗಳನ್ನು ಎದುರಿಸಲು ಸಜ್ಜುಗೊಂಡಿಲ್ಲ ಎಂದು ಹೇಳಿದರು. 

 ಕೇಂದ್ರದ ಮಾಜಿ ಸಚಿವ `ಜಸ್ವಂತ್ ಸಿಂಗ್'  ವಿಧಿವಶ

ಕೇಂದ್ರದ ಮಾಜಿ ಸಚಿವ `ಜಸ್ವಂತ್ ಸಿಂಗ್' ವಿಧಿವಶ


 ಕೇಂದ್ರದ ಮಾಜಿ ಸಚಿವ `ಜಸ್ವಂತ್ ಸಿಂಗ್'   ವಿಧಿವಶ

ನವದೆಹಲಿ : ಅನಾರೋಗ್ಯದಿಂದ ಬಳಲುತ್ತಿದ್ದ ಕೇಂದ್ರದ ಮಾಜಿ ಸಚಿವ ಜಸ್ವಂತ್ ಸಿಂಗ್ (82) ಅವರು ಇಂದು ನಿಧನರಾಗಿದ್ದಾರೆ.


ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಜಸ್ವಂತ್ ಸಿಂಗ್ ಅವರು ದೇಶಕ್ಕಾಗಿ ಮೊದಲು ಸೈನಿಕರಾಗಿ, ನಂತರ ರಾಜಕೀಯ ದೊಂದಿಗೆ ಸುದೀರ್ಘ ಒಡನಾಟ ಹೊಂದಿದ್ದರು. ಅಟಲ್ ಅವರ ಸರ್ಕಾರದ ಅವಧಿಯಲ್ಲಿ ಅವರು ಪ್ರಮುಖ ಖಾತೆಗಳನ್ನು ನಿಭಾಯಿಸಿ, ಹಣಕಾಸು, ರಕ್ಷಣೆ ಮತ್ತು ವಿದೇಶಾಂಗ ವ್ಯವಹಾರಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಅವರ ಈ ಸಾವನ್ನು ಕೇಳಿ ದುಃಖವಾಯಿತು ಎಂದು ಟ್ವೀಟ್ ಮಾಡಿದ್ದಾರೆ.

ಮುಹಿಮ್ಮಾತ್ ಅಹ್ದಲಿಯ್ಯಾ ಮತ್ತು ಆಥ್ಮಿಯ  ಮಜ್ಲಿಸ್ ನಾಳೆ

ಮುಹಿಮ್ಮಾತ್ ಅಹ್ದಲಿಯ್ಯಾ ಮತ್ತು ಆಥ್ಮಿಯ ಮಜ್ಲಿಸ್ ನಾಳೆ

 

ಮುಹಿಮ್ಮಾತ್ ಅಹ್ದಲಿಯ್ಯಾ  ಮತ್ತು  ಆಥ್ಮಿಯ   ಮಜ್ಲಿಸ್ ನಾಳೆ 

 

 ಮುಹಿಮ್ಮಾತ್ ಶಿಲ್ಪಿ ಹಾಗೂ ಆಧ್ಯಾತ್ಮಿಕ ನೇತಾರರಾದ   ಸಯ್ಯಿದ್ ತ್ವಾಹಿರುಲ್ ಅಹ್ದಲ್ ತಂಙಳರ ಅನುಸ್ಮರಣದ ಭಾಗವಾಗಿ ಎಲ್ಲಾ ತಿಂಗಳು ಮುಹಿಮ್ಮಾತ್ ನಲ್ಲಿ ನಡೆಸಿಕೊಂಡು ಬರುವಂತಹ 'ಅಹ್ದಲಿಯ್ಯಾ; ಆಥ್ಮಿಯ ಮಜ್ಲಿಸ್'  ನಾಳೆ ಸಂಜೆ ನಡೆಯಲಿದೆ.


3:೦೦ ಗಂಟೆಗೆ;

ಮರಣ ಹೊಂದಿದ ಸಂಸ್ಥೆಯ ಸಹಕಾರಿಗಳಿಗೆ ಹಾಗೂ ಸುನ್ನಿ ಚಳುವಳಿಯ ಸಂಬಂಧಿಕರಿಗೆ ಬೇಕಾಗಿ ನಡೆಸುವಂತಹ ಖತಮುಲ್ ಕುರ್-ಆನ್ ಮಜಿಲಿಸ್‌ಗೆ ಅಬ್ದರ‍್ರಹ್ಮಾನ್ ಅಹ್ಸನಿ ನೇತೃತ್ವ ನೀಡಲಿದ್ದಾರೆ. ಹಾಗೂ ಅಹ್ದಲಿಯ್ಯಾ; ಆಥ್ಮಿಯ ಮಜ್ಲಿಸ್‌ಗೆ   ಸಯ್ಯಿದ್ ಫಖ್ರುದ್ದೀನ್ ಹದ್ದಾದ್ ತಂಙಳ್ ರವರು ನೇತೃತ್ವ ನೀಡಲಿದ್ದಾರೆ

Friday, 25 September 2020

ಕೃಷಿ ಮಸೂದೆಗಳು ಈಸ್ಟ್ ಇಂಡಿಯಾ ಕಂಪನಿ  ಆಡಳಿತ ನೆನಪಿಸುತ್ತವೆ: ಪ್ರಿಯಾಂಕಾ ಗಾಂಧಿ

ಕೃಷಿ ಮಸೂದೆಗಳು ಈಸ್ಟ್ ಇಂಡಿಯಾ ಕಂಪನಿ ಆಡಳಿತ ನೆನಪಿಸುತ್ತವೆ: ಪ್ರಿಯಾಂಕಾ ಗಾಂಧಿ

 

ಕೃಷಿ ಮಸೂದೆಗಳು ಈಸ್ಟ್ ಇಂಡಿಯಾ ಕಂಪನಿ   ಆಡಳಿತ ನೆನಪಿಸುತ್ತವೆ: ಪ್ರಿಯಾಂಕಾ ಗಾಂಧಿ

ನವದೆಹಲಿ: ನರೇಂದ್ರ ಮೋದಿ ಸರ್ಕಾರದ ಕೃಷಿ ಮಸೂದೆಗಳು ಈಸ್ಟ್ ಇಂಡಿಯಾ ಕಂಪನಿ ಆಡಳಿತವನ್ನು ನೆನಪಿಸುವಂತಿವೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಟೀಕಿಸಿದ್ದಾರೆ.


ಹೊಸದಾಗಿ ಅನುಮೋದನೆ ಪಡೆಯಲಾಗಿರುವ ಮೂರು ಮಸೂದೆಗಳ ಬಗ್ಗೆ ಟ್ವೀಟ್ ಮಾಡಿರುವ ಅವರು, 'ರೈತರು ಕನಿಷ್ಠ ಬೆಂಬಲ ಬೆಲೆಯಿಂದ ವಂಚಿತರಾಗಲಿದ್ದಾರೆ' ಎಂದು ಉಲ್ಲೇಖಿಸಿದ್ದಾರೆ.

'ರೈತರು ತಮ್ಮದೇ ಕೃಷಿಭೂಮಿಗಳಲ್ಲಿ ಕಾರ್ಮಿಕರಾಗಲಿದ್ದಾರೆ. ಗುತ್ತಿಗೆ ಕೃಷಿ ಮೂಲಕ ಅವರನ್ನು ಗುಲಾಮರನ್ನಾಗಿಸಲು ಬಲವಂತಪಡಿಸಲಾಗುತ್ತದೆ. ಈ ರೀತಿ ಅನ್ಯಾಯ ಎಸಗಲು ನಾವು ಬಿಡುವುದಿಲ್ಲ' ಎಂದು ಪ್ರಿಯಾಂಕಾ ಹೇಳಿದ್ದಾರೆ.


BIG BREAKING : ಗಾನ ಗಂಧರ್ವ `ಎಸ್.ಪಿ.   ಬಾಲಸುಬ್ರಹ್ಮಣ್ಯಂ' ಇನ್ನಿಲ್ಲ

BIG BREAKING : ಗಾನ ಗಂಧರ್ವ `ಎಸ್.ಪಿ. ಬಾಲಸುಬ್ರಹ್ಮಣ್ಯಂ' ಇನ್ನಿಲ್ಲ

 

BIG BREAKING : ಗಾನ ಗಂಧರ್ವ `ಎಸ್.ಪಿ.     ಬಾಲಸುಬ್ರಹ್ಮಣ್ಯಂ' ಇನ್ನಿಲ್ಲಚೆನ್ನೈ : ಕರೋನ ಸೊಂಕಿನಿಂದ ಬಳಲುತ್ತಿದ್ದ ಬಹು ಭಾಷಾ ನಟ, ಖ್ಯಾತ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಚನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ವಿಧಿವಶರಾಗಿದ್ದಾರೆ.

ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತಿತ್ತು, ಆದರೆ ಅವರ ಶ್ವಾಸಕೋಶವು ತೀವ್ರ ಪ್ರಮಾಣದಲ್ಲಿ ಏರುಪೇರು ಉಂಟಾದ ಪರಿಣಾಮ ಅವರು ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದಾರೆ.

ಕೊರೋನಾ ವೈರಸ್ ಕಾರಣ ಆಗಸ್ಟ್ 5 ರಂದು ಎಸ್ಪಿಬಿ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ದಿನದಿಂದ ದಿನಕ್ಕೆ ಅವರ ಆರೋಗ್ಯ ಹದೆಗೆಟ್ಟಿದ್ದರಿಂದ ಆಗಸ್ಟ್ 13 ರ ಬಳಿಕ ಐಸಿಯುನಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಮೃತಪಟ್ಟಿದ್ದಾರೆ.

Thursday, 24 September 2020

ಮುಹಿಮಾತ್ ಕುಲ್ಲಿಯತುದ್ದಿರಾಸತುಲ್ ಇಸ್ಲಾಮಿಯಾದ ಮುರ‍್ರಿಸರಾದ ಮುಸ್ತಫ ಸಖಾಫಿ ವಲ್ಲಪುಝ ರವರ ತಂದೆ ಕುಂಙÂ ಹೈದರ್ ಎಂಬವರು ನಿಧನರಾದರು.

ಮುಹಿಮಾತ್ ಕುಲ್ಲಿಯತುದ್ದಿರಾಸತುಲ್ ಇಸ್ಲಾಮಿಯಾದ ಮುರ‍್ರಿಸರಾದ ಮುಸ್ತಫ ಸಖಾಫಿ ವಲ್ಲಪುಝ ರವರ ತಂದೆ ಕುಂಙÂ ಹೈದರ್ ಎಂಬವರು ನಿಧನರಾದರು.

 


ಮುಹಿಮಾತ್ ಕುಲ್ಲಿಯತುದ್ದಿರಾಸತುಲ್ ಇಸ್ಲಾಮಿಯಾದ ಮುರ‍್ರಿಸರಾದ ಮುಸ್ತಫ ಸಖಾಫಿ ವಲ್ಲಪುಝ ರವರ ತಂದೆ ಕುಂಙÂ ಹೈದರ್ ಎಂಬವರು ನಿಧನರಾದರು.

Wednesday, 23 September 2020

ನೆರೆ-ಹೊರೆಯ ರಾಷ್ಟ್ರಗಳ ಸಂಬಂಧವನ್ನು ಮೋದಿ ಸರ್ಕಾರ ಹಾಳು ಮಾಡಿದೆ: ರಾಹುಲ್ ಗಾಂಧಿ

ನೆರೆ-ಹೊರೆಯ ರಾಷ್ಟ್ರಗಳ ಸಂಬಂಧವನ್ನು ಮೋದಿ ಸರ್ಕಾರ ಹಾಳು ಮಾಡಿದೆ: ರಾಹುಲ್ ಗಾಂಧಿ


ನೆರೆ-ಹೊರೆಯ ರಾಷ್ಟ್ರಗಳ ಸಂಬಂಧವನ್ನು ಮೋದಿ ಸರ್ಕಾರ ಹಾಳು ಮಾಡಿದೆ: ರಾಹುಲ್ ಗಾಂಧಿ

ನವದೆಹಲಿ: ಹಲವು ದಶಕಗಳಿಂದ ಕಾಂಗ್ರೆಸ್‌ ಪಕ್ಷ ಭಾರತದೊಂದಿಗೆ ಬೆಸೆದಿದ್ದ ನೆರೆ- ಹೊರೆಯ ರಾಷ್ಟ್ರಗಳ ಬಾಂಧವ್ಯ ಹಾಗೂ ಸಂಬಂಧಗಳ ಜಾಲವನ್ನು ಪ್ರಧಾನಿ ನರೇಂದ್ರ ಮೋದಿ ನಾಶಪಡಿಸಿದ್ದಾರೆ' ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.


'ಬಾಂಗ್ಲಾದೇಶದೊಂದಿಗಿನ ಭಾರತದ ಸಂಬಂಧ ದುರ್ಬಲಗೊಳ್ಳುತ್ತಿದ್ದು, ಚೀನಾದೊಂದಿಗಿನ ಒಪ್ಪಂದಗಳು ಬಲಗೊಳ್ಳುತ್ತಿವೆ' ಎಂಬ 'ದಿ ಎಕನಾಮಿಸ್ಟ್‌' ಪತ್ರಿಕೆಯ ಸುದ್ದಿಯ ತುಣಕನ್ನು ಟ್ಯಾಗ್ ಮಾಡಿ, 'ನೆರೆ-ಹೊರೆಯಲ್ಲಿ ಸ್ನೇಹಿತರಿಲ್ಲದೇ ಜೀವಿಸುವುದು ತುಂಬಾ ಅಪಾಯ' ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.


'ನೆರೆಯ ರಾಷ್ಟ್ರಗಳೊಂದಿಗಿನ ಭಾರತದ ಬಾಂಧವ್ಯ ತುಂಬಾ ದುರ್ಬಲವಾಗಿದೆ' ಎಂದು ಮೋದಿ ಸರ್ಕಾರದ ವಿದೇಶಾಂಗ ನೀತಿಯನ್ನು ಕಾಂಗ್ರೆಸ್ ಟೀಕಿಸಿದೆ. ಸರ್ಕಾರ ಈ ಆರೋಪವನ್ನು ನಿರಾಕರಿಸಿದೆ ಮತ್ತು ಭಾರತದ ಸಂಬಂಧಗಳು ಹಲವಾರು ದೇಶಗಳೊಂದಿಗೆ ಗಾಢವಾಗಿವೆ ಮತ್ತು ಜಾಗತಿಕವಾಗಿ ಅದರ ಸ್ಥಾನವು ಬಲಗೊಂಡಿದೆ ಎಂದು ತಿಳಿಸಿದೆ.

 


ಕೋವಿಡ್‍-19: ಅಮೆರಿಕಾದಲ್ಲಿ 2 ಲಕ್ಷ ದಾಟಿದ  ಸಾವಿನ ಸಂಖ್ಯೆ

ಕೋವಿಡ್‍-19: ಅಮೆರಿಕಾದಲ್ಲಿ 2 ಲಕ್ಷ ದಾಟಿದ ಸಾವಿನ ಸಂಖ್ಯೆ

 

ಕೋವಿಡ್‍-19: ಅಮೆರಿಕಾದಲ್ಲಿ 2 ಲಕ್ಷ ದಾಟಿದ   ಸಾವಿನ ಸಂಖ್ಯೆ

ವಾಷಿಂಗ್ಟನ್: ಕೊರೋನಾವೈರಸ್ ಸೋಂಕಿನಿಂದ ವಿಶ್ವದಲ್ಲೇ ಅತಿಹೆಚ್ಚು ಬಾಧಿತ ದೇಶವಾದ ಅಮೆರಿಕದಲ್ಲಿ ಸಾವಿನ ಸಂಖ್ಯೆ 2,00,000 ದಾಟಿದೆ ಎಂದು ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾಲಯದ ಸೆಂಟರ್ ಫಾರ್ ಸಿಸ್ಟಮ್ಸ್ ಸೈನ್ಸ್ ಅಂಡ್ ಎಂಜಿನಿಯರಿಂಗ್ (ಸಿಎಸ್‌ಎಸ್‌ಇ)ನ ಮಾಹಿತಿ ವರದಿ ತಿಳಿಸಿದೆ.

ದೇಶದಲ್ಲಿ ಇದುವರೆಗೆ 68 ಲಕ್ಷ ಪ್ರಕರಣಗಳು ವರದಿಯಾಗಿದ್ದು, ಸಾವಿನ ಸಂಖ್ಯೆ 2,00,005ರಷ್ಟಿದೆ ಎಂದು ಸಿಎಸ್‌ಎಸ್‌ಇ ಮಾಹಿತಿ ತಿಳಿಸಿರುವುದಾಗಿ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ನ್ಯೂಯಾರ್ಕ್ ರಾಜ್ಯದಲ್ಲಿ 33,092 ಸಾವುಗಳು ವರದಿಯಾಗುವುದುರೊಂದಿಗೆ ದೇಶದಲ್ಲಿ ಸಾವಿನ ಸಂಖ್ಯೆ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿರುವ ನ್ಯೂಜೆರ್ಸಿ ರಾಜ್ಯದಲ್ಲಿ 16,069 ಸಾವುಗಳು ವರದಿಯಾಗಿವೆ.


Tuesday, 22 September 2020

 ನವೆಂಬರ್ 1ರಿಂದ ಕಾಲೇಜು ಶುರು: ಯುಜಿಸಿ ಪ್ರಸ್ತಾವಿತ ಮಾರ್ಗಸೂಚಿ ಪ್ರಕಟ

ನವೆಂಬರ್ 1ರಿಂದ ಕಾಲೇಜು ಶುರು: ಯುಜಿಸಿ ಪ್ರಸ್ತಾವಿತ ಮಾರ್ಗಸೂಚಿ ಪ್ರಕಟ


 ನವೆಂಬರ್ 1ರಿಂದ ಕಾಲೇಜು ಶುರು: ಯುಜಿಸಿ ಪ್ರಸ್ತಾವಿತ ಮಾರ್ಗಸೂಚಿ ಪ್ರಕಟ

ನವದೆಹಲಿ: ಕೋವಿಡ್ 19 ಕಾರಣಕ್ಕೆ ಮುಂದೂಡಲ್ಪಟ್ಟಿದ್ದ ಶೈಕ್ಷಣಿಕ ವರ್ಷದ ಕಾಲೇಜು ತರಗತಿ ನವೆಂಬರ್ 1ರಿಂದ ಶುರುವಾಗಲಿದೆ. ಈ ಸಂಬಂಧ ಯೂನಿವರ್ಸಿಟಿ ಗ್ರಾಂಟ್ಸ್ ಕಮಿಷನ್ ಪ್ರಸ್ತಾವಿತ ಮಾರ್ಗಸೂಚಿ ಪ್ರಕಟಿಸಿದೆ. ಇದರಂತೆ, ಅಕ್ಟೋಬರ್ 31ರ ಒಳಗೆ ಪ್ರಥಮ ವರ್ಷದ ಪದವಿ, ಸ್ನಾತಕೋತ್ತರ ಪದವಿ ತರಗತಿಗಳ ಅಡ್ಮಿಷನ್ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.

ನವೆಂಬರ್ 1ರಿಂದ ಕಾಲೇಜು ತರಗತಿಗಳು ಪ್ರಾರಂಭವಾಗಲಿದ್ದು, ಮೊದಲ ಸೆಮಿಸ್ಟರ್ ಪರೀಕ್ಷೆಗಳು ಮಾರ್ಚ್ 8 ರಿಂದ 23ರ ನಡುವೆ ನಡೆಯಲಿದೆ. ಎರಡನೇ ಸೆಮಿಸ್ಟರ್ ಏಪ್ರಿಲ್ 5ರಿಂದ ಆರಂಭವಾಗಲಿದ್ದು, ಪರೀಕ್ಷೆಗಳು ಆಗಸ್ಟ್​ನಲ್ಲಿ ನಡೆಯಲಿವೆ. ಹಾಗೆ, ಮೊದಲ ವರ್ಷದ ಕೋರ್ಸ್ ಆಗಸ್ಟ್ 30ಕ್ಕೆ ಪೂರ್ಣಗೊಳ್ಳಲಿದೆ.

ಇದೇ ವೇಳೆ, ಕರೊನಾ ಕಾರಣಕ್ಕೆ ಹಣಕಾಸು ತೊಂದರೆ ಅನುಭವಿಸುತ್ತಿರುವ ಪಾಲಕರ ಅನುಕೂಲಕ್ಕಾಗಿ, ಅವರೇನಾದರೂ ವಿದ್ಯಾರ್ಥಿಗಳ ಅಡ್ಮಿಷನ್ ಕ್ಯಾನ್ಸಲ್ ಮಾಡಿದರೆ ಅಥವಾ ಬೇರೆ ಕಾಲೇಜುಗಳಿಗೆ ಪ್ರವೇಶ ಬಯಸಿದರೆ, ಅವರು ಕಟ್ಟಿರುವ ಪೂರ್ಣಶುಲ್ಕವನ್ನು ಕಾಲೇಜು ಆಡಳಿತ ಮಂಡಳಿ ಹಿಂದಿರುಗಿಸಬೇಕು. ಆದರೆ, ಈ ವಿನಾಯಿತಿ ನವೆಂಬರ್ 30ರ ತನಕ ಮಾತ್ರ ಲಭ್ಯ ಎಂದು ಮಾರ್ಗಸೂಚಿ ತಿಳಿಸಿದೆ. ಇದನ್ನು ಕೇಂದ್ರ ಶಿಕ್ಷಣ ಸಚಿವ ಡಾ.ರಮೇಶ್ ಪೋಖ್ರಿಯಾಲ್ ನಿಶಂಕ್ ಅವರು ಟ್ವೀಟ್ ಮಾಡಿದ್ದಾರೆ.

 BIGG NEWS : ಸೆ.25ರ ಶುಕ್ರವಾರದಂದು  'ಕರ್ನಾಟಕ ಬಂದ್'

BIGG NEWS : ಸೆ.25ರ ಶುಕ್ರವಾರದಂದು 'ಕರ್ನಾಟಕ ಬಂದ್'


 BIGG NEWS : ಸೆ.25ರ ಶುಕ್ರವಾರದಂದು   'ಕರ್ನಾಟಕ ಬಂದ್'

ಬೆಂಗಳೂರು : ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ ವಿರೋಧಿ ಮಸೂಧೆಗಳನ್ನು ವಿರುದ್ಧ ರೈತರ ಸಂಘಗಳು ಸಿಡಿದೆದ್ದಿವೆ. ಸರ್ಕಾರದಗಳ ರೈತವಿರೋಧಿ ಮಸೂಧೆ ವಿರೋಧಿಸಿ, ಇದೇ ಸೆಪ್ಟೆಂಬರ್ 25ರ ಶುಕ್ರವಾರದಂದು ಕರ್ನಾಟಕ ಬಂದ್ ಗೆ ರೈತ ಸಂಘಟನೆಗಳು ಕರೆ ನೀಡಿವೆ. ಹೀಗಾಗಿ ಸೆ.25ರ ಶುಕ್ರವಾರದಂದು ಕರ್ನಾಟಕ ಬಂದ್ ಆಗಲಿದೆ ಎನ್ನಲಾಗುತ್ತಿದೆ.

ರೈತ ಸಂಘಟನೆಗಳು ರೈತರ ವಿರೋಧಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮಸೂಧೆ ಹಿಂತೆಗೆದುಕೊಳ್ಳುವಂತೆ ಆಗ್ರಹಿಸಿ, ಸೆ.25ರ ಶುಕ್ರವಾರದಂದು ಕರ್ನಾಟಕ ಬಂದ್ ಗೆ ಕರೆ ನೀಡಿವೆ. ಇಂತಹ ರೈತ ಸಂಘಟನೆಗಳು ಕರೆ ನೀಡಿರುವಂತ ಕರ್ನಾಟಕ ಬಂದ್ ಗೆ ಅನೇಕ ರೈತ ಪರ ಸಂಘಟನೆಗಳು ಬೆಂಬಲಿಸಿವೆ ಎನ್ನಲಾಗಿದೆ. ಹೀಗಾಗಿ ಸೆಪ್ಟೆಂಬರ್ 25ರ ಶುಕ್ರವಾರದಂದು ಕರ್ನಾಟಕ ಬಂದ್ ಆಗಲಿದ್ಯಾ ಎನ್ನುವ ಬಗ್ಗೆ ಕಾದು ನೋಡಬೇಕಿದೆ.

Monday, 21 September 2020

ಕಿಲ್ಲರ್ ಕೊರೊನಾಗೆ ರಾಜ್ಯದಲ್ಲಿ ಇಂದು 101   ಬಲಿ : 8023 ಕ್ಕೇರಿದ ಸಾವಿನ ಸಂಖ್ಯೆ

ಕಿಲ್ಲರ್ ಕೊರೊನಾಗೆ ರಾಜ್ಯದಲ್ಲಿ ಇಂದು 101 ಬಲಿ : 8023 ಕ್ಕೇರಿದ ಸಾವಿನ ಸಂಖ್ಯೆ

 

ಕಿಲ್ಲರ್ ಕೊರೊನಾಗೆ ರಾಜ್ಯದಲ್ಲಿ ಇಂದು 101     ಬಲಿ : 8023 ಕ್ಕೇರಿದ ಸಾವಿನ ಸಂಖ್ಯೆ

ಬೆಂಗಳೂರು : ಕಿಲ್ಲರ್ ಕೊರೊನಾಗೆ ರಾಜ್ಯದಲ್ಲಿ ಇಂದು 101 ಜನರು ಬಲಿಯಾಗಿದ್ದು, ಈ ಮೂಲಕ ಕೊರೊನಾ ಸಾವಿನ ಸಂಖ್ಯೆ 8023 ಕ್ಕೇರಿದೆ.

ಹೌದು, ರಾಜ್ಯದಲ್ಲಿ ಕೊರೊನಾ ಸೋಂಕು ತಾಂಡವವಾಡುತ್ತಿದ್ದು, ಇಂದು 101 ಜನರು ಸೋಂಕಿಗೆ ಬಲಿಯಾಗಿದ್ದು, ಈ ಮೂಲಕ ಕೊರೊನಾ ಸಾವಿನ ಸಂಖ್ಯೆ 8023 ಕ್ಕೆ ಏರಿಕೆಯಾಗಿದೆ.

ಬೆಂಗಳೂರಿನಲ್ಲಿ ಕೊರೊನಾ ಸೋಂಕಿಗೆ ಇಂದು 32 ಮಂದಿ ಸೋಂಕಿತರು ಬಲಿಯಾಗಿದ್ದು, ಇದುವರೆಗೆ ಬೆಂಗಳೂರಿನಲ್ಲಿ ಮೃತಪಟ್ಟ ಸೋಂಕಿತರ ಸಂಖ್ಯೆ 2657 ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ರಾಜ್ಯದಲ್ಲಿ ಕೊರೊನಾ ಮಹಾಸ್ಪೋಟವಾಗಿದ್ದು, ಇಂದು 8191 ಜನರಿಗೆ ಕೊರೊನಾ ಸೋಂಕು ಧೃಡವಾಗಿದೆ, ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 519537 ಕ್ಕೆ ಏರಿಕೆಯಾಗಿದೆ. ಐಸಿಯುನಲ್ಲಿ 811 ಮಂದಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ತಾಜ್‌ ಮಹಲ್ ವೀಕ್ಷಣೆ ಅವಕಾಶದೊಂದಿಗೆ ನಿಟ್ಟುಸಿರು ಬಿಟ್ಟ 465 ಛಾಯಾಗ್ರಾಹಕರು

ತಾಜ್‌ ಮಹಲ್ ವೀಕ್ಷಣೆ ಅವಕಾಶದೊಂದಿಗೆ ನಿಟ್ಟುಸಿರು ಬಿಟ್ಟ 465 ಛಾಯಾಗ್ರಾಹಕರು


ತಾಜ್‌ ಮಹಲ್ ವೀಕ್ಷಣೆ ಅವಕಾಶದೊಂದಿಗೆ ನಿಟ್ಟುಸಿರು ಬಿಟ್ಟ 465 ಛಾಯಾಗ್ರಾಹಕರು


ಆಗ್ರಾ: 'ಆರು ತಿಂಗಳ ಬಳಿಕ ಕೆಲ ನಿರ್ಬಂಧಗಳೊಂದಿಗೆ ಪ್ರವಾಸಿಗರಿಗೆ ತಾಜ್‌ಮಹಲ್ ವೀಕ್ಷಿಸಲು ಸೋಮವಾರದಿಂದ ಅವಕಾಶ ಕಲ್ಪಿಸಲಾಗಿದ್ದು, ಕೋವಿಡ್-19 ಲಾಕ್‌ಡೌನ್‌ನಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದ ಪರವಾನಗಿ ಪಡೆದ 450 ಕ್ಕೂ ಹೆಚ್ಚು ಛಾಯಾಗ್ರಾಹಕರು ಇದೀಗ ನಿಟ್ಟುಸಿರು ಬಿಡುವಂತಾಗಿದೆ.

ತಾಜ್ ಮಹಲ್‌ನ್ನು ವೀಕ್ಷಿಸಲು ಬರುವ ಪ್ರವಾಸಿಗರನ್ನೇ ಅವಲಂಬಿಸಿರುವ ಒಟ್ಟು 465 ಛಾಯಾಗ್ರಾಹಕರು ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸುತ್ತಾರೆ ಮತ್ತು ಅವರನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದ್ದು, ಪರ್ಯಾಯ ದಿನಗಳಲ್ಲಿ ಕಾರ್ಯನಿರ್ವಹಿಸುತ್ತಾರೆ. ಒಂದರಲ್ಲಿ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಮತ್ತು ಇನ್ನೊಂದು ಮಧ್ಯಾಹ್ನ 12.30 ರಿಂದ ಸೂರ್ಯಾಸ್ತದವರೆಗೆ ಪಾಳಿಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ.

ದಿನವೊಂದಕ್ಕೆ 5,000 ಪ್ರವಾಸಿಗರು ಭೇಟಿ ನೀಡಲು ಸರ್ಕಾರವು ಅನುಮತಿ ನೀಡಿದೆ. ಪ್ರತಿ ಪಾಳಿಯಲ್ಲಿ 2,500 ಪ್ರವಾಸಿಗರಿಗೆ ಪ್ರವೇಶಿಸಲು ಅವಕಾಶವಿದ್ದರೆ, ಆಗ್ರಾದ ಇತರ ಪಾರಂಪರಿಕ ತಾಣಗಳಲ್ಲಿ 1,000 ಪ್ರವಾಸಿಗರ ಭೇಟಿಗೆ ಅವಕಾಶ ನೀಡಲಾಗಿದೆ.

ಭಾರತೀಯ ಪುರಾತತ್ವ ಇಲಾಖೆಯ ಅಧಿಕಾರಿ, ಸೋಮವಾರದ ಮೊದಲ ಪಾಳಿಯಲ್ಲಿ 500ಕ್ಕೂ ಹೆಚ್ಚು ಪ್ರವಾಸಿಗರು ತಾಜ್‌ಗೆ ಭೇಟಿ ನೀಡಿದ್ದಾರೆ ಎಂದು ತಿಳಿಸಿದರು.


ಏಕಾಏಕಿ ಹರಡಿದ ವೈರಸ್‌ನಿಂದಾಗಿ ಹಲವು ಛಾಯಾಗ್ರಾಹಕರು ತೀವ್ರ ಹೊಡೆತಕ್ಕೆ ಸಿಲುಕಿದರು. ಅವರಲ್ಲಿ ಕೆಲವರು ಬೇರೆ ವ್ಯವಹಾರಗಳನ್ನು ಮಾಡಲು ಯತ್ನಿಸಿದರೂ ಕೂಡ, ನಮ್ಮಲ್ಲಿ ಹೆಚ್ಚಿನವರು ಛಾಯಾಗ್ರಹಣವನ್ನು ಹೊರತುಪಡಿಸಿ ಬೇರೇನು ತಿಳಿದಿಲ್ಲ ಎಂದು ಸಂಕಷ್ಟಕ್ಕೆ ಸಿಲುಕಿಕೊಂಡರು. ನಮ್ಮ ಉಳಿತಾಯವು ಕರಗಲು ಪ್ರಾರಂಭಿಸಿತ್ತು ಮತ್ತು ನಮ್ಮಲ್ಲಿ ಹೆಚ್ಚಿನವರು ಈಗ ಸಾಲಕ್ಕೆ ಗುರಿಯಾಗಿದ್ದಾರೆ. ನಮ್ಮ ಮಕ್ಕಳು ಮತ್ತು ಕುಟುಂಬಗಳನ್ನು ನಾವು ನೋಡಿಕೊಳ್ಳಲೇಬೇಕಾಗಿತ್ತು. ನಮಗೆ ಬೇರೆ ಯಾವ ಆಯ್ಕೆಗಳಿವೆ? ಎನ್ನುತ್ತಾರೆ ಪುರಾತತ್ವ ಪ್ರದೇಶಗಳ ಛಾಯಾಗ್ರಹಣ ಅಸೋಸಿಯೇಶನ್‌ನ ಅಧ್ಯಕ್ಷ ಸರ್ವೋತ್ತಮ್ ಸಿಂಗ್.


ಸ್ಮಾರ್ಟ್‌ಫೋನ್‌ಗಳು ಎಲ್ಲರಿಗೂ ಲಭ್ಯವಾದಾಗಿನಿಂದಲೂ ಛಾಯಾಗ್ರಾಹಕರ ವ್ಯವಹಾರ ಕುಸಿತ ಕಾಣುತ್ತಲೇ ಇದೆ. ಆದರೆ ಕೋವಿಡ್-19 ಬಿಕ್ಕಟ್ಟು ಅವರ ವೃತ್ತಿಗೆ ಮತ್ತಷ್ಟು ಹೊಡೆತವನ್ನು ನೀಡಿತು. ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ರೆಸ್ಟೋರೆಂಟ್‌ಗಳು, ಇ-ರಿಕ್ಷಾ ಚಾಲಕರು, ಕಾರ್ಮಿಕರು ಮುಂತಾದ ಇತರ ವೃತ್ತಿಗಳಲ್ಲಿ ತೊಡಗಿರುವವರಲ್ಲಿಯೂ ಕೂಡ ಪರಿಸ್ಥಿತಿ ಉತ್ತಮವಾಗಿಲ್ಲ.


ದೇಶದಾದ್ಯಂತ ಸಾಂಕ್ರಾಮಿಕ ರೋಗ ಕೋವಿಡ್-19 ಹೆಚ್ಚಾಗುತ್ತಿದ್ದ ಬೆನ್ನಲ್ಲೇ ಕೇಂದ್ರ ಸಂಸ್ಕೃತಿ ಸಚಿವಾಲಯದೊಂದಿಗೆ ಚರ್ಚಿಸಿದ ನಂತರ ಮಾರ್ಚ್ 17 ರಂದು ತಾಜ್ ಅನ್ನು ಮುಚ್ಚಲಾಯಿತು. ಕೋವಿಡ್ ಮಾರ್ಗಸೂಚಿಯಲ್ಲಿ ದಿನದಲ್ಲಿ ಕೇವಲ ಐದು ಸಾವಿರ ಪ್ರವಾಸಿಗರಿಗೆ ಮಾತ್ರ ವೀಕ್ಷಣೆಗೆ ಅವಕಾಶ ನೀಡಲಾಗಿದ್ದು, ಗುಂಪು ಛಾಯಾಚಿತ್ರಗಳನ್ನು ತೆಗೆಯಲು ಅವಕಾಶ ನೀಡಿಲ್ಲ.


ಪ್ರವಾಸಿಗರು ಸ್ಮಾರಕದ ಹಳಿ ಮತ್ತು ಗೋಡೆಗಳನ್ನು ಮುಟ್ಟದಂತೆ ಕಾವಲುಗಾರರು ಕಟ್ಟುನಿಟ್ಟಾಗಿ ನಿಗಾ ವಹಿಸುತ್ತಾರೆ ಮತ್ತು ಬಳಸಿದ ಟಿಶ್ಯು ಪೇಪರ್, ಮಾಸ್ಕ್‌ಗಳು, ಕೈಗವಸುಗಳು ಮತ್ತು ಶೂ ಕವರ್‌ಗಳನ್ನು ಕಸದ ಬುಟ್ಟಿಯಲ್ಲಿ ಎಸೆಯಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳುತ್ತಾರೆ.


ಪುರಾತತ್ವ ಇಲಾಖೆಯಡಿ ಬರುವ ದೇಶದ 3691 ಪಾರಂಪರಿಕ ತಾಣಗಳ ಪೈಕಿ ಹಲವು ಈಗಾಗಲೇ ಜುಲೈ 6ರಿಂದಲೇ ಪ್ರವೇಶಕ್ಕೆ ಮುಕ್ತವಾಗಿದ್ದು, ಆಗ್ರಾ ಫೋರ್ಟ್ ಮತ್ತು ತಾಜ್‌ ಮಹಲ್ ಕಂಟೈನ್‌ಮೆಂಟ್ ವಲಯದ ಅಡಿಯಲ್ಲಿದ್ದದ್ದರಿಂದ ಇದುವರೆಗೂ ಮುಚ್ಚಲಾಗಿತ್ತು.


ಕರೊನಾ ಗುಣಮುಖ, ಜಗತ್ತಿನಲ್ಲೇ ಭಾರತ   ಅತ್ಯಧಿಕ

ಕರೊನಾ ಗುಣಮುಖ, ಜಗತ್ತಿನಲ್ಲೇ ಭಾರತ ಅತ್ಯಧಿಕ

 

ಕರೊನಾ ಗುಣಮುಖ, ಜಗತ್ತಿನಲ್ಲೇ ಭಾರತ     ಅತ್ಯಧಿಕ


ನವದೆಹಲಿ: ಕರೊನಾ ಸೋಂಕಿತರ ಗುಣ ಪ್ರಮಾಣ ಭಾರತದಲ್ಲಿ ಶೇ. 80 ದಾಟಿದ್ದು, ಇದು ಜಗತ್ತಿನಲ್ಲೇ ಅತ್ಯಧಿಕ ಎಂದೆನಿಸಿಕೊಂಡಿದೆ. ಭಾರತದಲ್ಲಿ ಸತತ ಮೂರನೇ ದಿನ 90 ಸಾವಿರ ಮಂದಿ ಗುಣವಾಗಿದ್ದಾರೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ ಕರೊನಾ ಸೋಂಕಿನಿಂದ ಗುಣವಾದವರ ಪ್ರಮಾಣ ಮೇ 4ರಂದು ಶೇ. 27.52 ಇದ್ದಿದ್ದು, ಜುಲೈ 13ರಂದು ಶೇ. 63.02 ಆಗಿತ್ತು. ಈಗ ಸೆ. 21ರಂದು ಅದು ಶೇ. 80ಕ್ಕೆ ತಲುಪಿದೆ.

ಕಳೆದ 24 ಗಂಟೆಗಳಲ್ಲಿ 93,356 ಸೋಂಕಿತರು ಗುಣವಾಗಿದ್ದು, ಗುಣವಾದವರ ಒಟ್ಟು ಸಂಖ್ಯೆ 43,96,399 ತಲುಪಿದೆ. ಇಷ್ಟೊಂದು ಗುಣ ಪ್ರಮಾಣ ಜಗತ್ತಿನಲ್ಲೇ ಅತ್ಯಧಿಕ. ಇನ್ನು ಕೋವಿಡ್​-19 ದೇಶದಲ್ಲಿ ಪ್ರಕರಣಗಳ ಒಟ್ಟು ಸಂಖ್ಯೆ 5.49 ದಶಲಕ್ಷ ದಾಟಿದ್ದು, ಇದುವರೆಗೆ 87,882 ಮಂದಿ ಕರೊನಾಗೆ ಬಲಿ ಆಗಿದ್ದಾರೆ ಎಂದು ಕೇಂದ್ರ ಹೇಳಿದೆ. 

ಜ್ಯುವೆಲರಿ ಅಂಗಡಿಗೆ ನುಗ್ಗಿ ಮಾಲೀಕನ ಕಟ್ಟಿಹಾಕಿ 3.5 ಕೆಜಿ ಚಿನ್ನ ದರೋಡೆ..!

ಜ್ಯುವೆಲರಿ ಅಂಗಡಿಗೆ ನುಗ್ಗಿ ಮಾಲೀಕನ ಕಟ್ಟಿಹಾಕಿ 3.5 ಕೆಜಿ ಚಿನ್ನ ದರೋಡೆ..!


ಜ್ಯುವೆಲರಿ ಅಂಗಡಿಗೆ ನುಗ್ಗಿ ಮಾಲೀಕನ ಕಟ್ಟಿಹಾಕಿ 3.5 ಕೆಜಿ ಚಿನ್ನ ದರೋಡೆ..!


ಬೆಂಗಳೂರು, ಸೆ.21- ಆಭರಣಕೊಳ್ಳುವ ನೆಪದಲ್ಲಿ ಜ್ಯುವೆಲರಿ ಅಂಗಡಿಗೆ ಬಂದ ಇಬ್ಬರು ದರೋಡೆಕೋರರು ಅಂಗಡಿ ಮಾಲೀಕನಿಗೆ ಪಿಸ್ತೂಲು ತೋರಿಸಿ ಬೆದರಿಸಿ ಬಾಯಿಗೆ ಬಟ್ಟೆ ತುರುಕಿ, ಕೈ-ಕಾಲು ಕಟ್ಟಿಹಾಕಿ ಕೋಟ್ಯಂತರ ಮೌಲ್ಯದ ಮೂರೂವರೆ ಕೆಜಿ ಚಿನ್ನಾಭರಣವನ್ನು ದರೋಡೆ ಮಾಡಿ ಪರಾರಿಯಾಗಿರುವ ಘಟನೆ ಜಾಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.


ಇಲ್ಲಿನ ಎಂಇಎಸ್ ರಸ್ತೆಯಲ್ಲಿನ ಬಿಇಎಲ್ ಸರ್ಕಲ್‍ಸಮೀಪ ವಿನೋದ್ ಬ್ಯಾಂಕರ್ಸ್ ಆಯಂಡ್ ಜ್ಯುವೆಲರ್ಸ್ ಎಂಬ ಅಂಗಡಿ ಇದ್ದು, ನಿನ್ನೆ ಬೆಳಗ್ಗೆ ಅಂಗಡಿಯಲ್ಲಿ ಮಾಲೀಕ ರಾಹುಲ್ ಜೈನ್ ಇದ್ದರು. ಈ ಸಂದರ್ಭದಲ್ಲಿ ಬೈಕ್‍ನಲ್ಲಿ ಇಬ್ಬರು ಬಂದಿದ್ದಾರೆ.


ಆಭರಣ ಕೊಳ್ಳುವ ನೆಪದಲ್ಲಿ ಒಳಗೆ ಬಂದ ಇವರು ಸರ ಬೇಕೆಂದು ಕೇಳಿದ್ದಾರೆ. ಸರ ತೋರಿಸಿದಾಗ ಸರ ಬೇಡ ಉಂಗುರ ತೋರಿಸಿ ಎಂದು ಹೇಳಿದಾಗ ರಾಹುಲ್ ಜೈನ್ ಅವರು ಉಂಗುರ ತರಲು ಒಳಗೆ ಹೋಗುತ್ತಿದ್ದಂತೆ ಅವರನ್ನು ಹಿಂಬಾಲಿಸಿಕೊಂಡು ಹೋಗಿ ಪಿಸ್ತೂಲು ತೋರಿಸಿ ಬೆದರಿಸಿ ಅವರ ಬಾಯಿಗೆ ಬಟ್ಟೆ ತುರುಕಿ, ಕೈ-ಕಾಲು ಕಟ್ಟಿ ಹಾಕಿದ್ದಾರೆ.


ನಂತರ ಅಂಗಡಿಯಲ್ಲಿದ್ದ ಸುಮಾರು ಒಂದು ಕೋಟಿಗೂ ಹೆಚ್ಚು ಬೆಲೆ ಬಾಳುವ ಮೂರುವರೆ ಕೆಜಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಕೆಲ ಸಮಯದ ಬಳಿಕ ರಾಹುಲ್ ಜೈನ್ ಅವರು ಕೈ-ಕಾಲಿಗೆ ಕಟ್ಟಿದ ಕಟ್ಟನ್ನು ಬಿಚ್ಚಿಕೊಂಡು ಹೊರಗೆ ಬಂದು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.


ಸ್ಥಳಕ್ಕಾಗಮಿಸಿದ ಪೊಲೀಸರು ಅಂಗಡಿಯನ್ನು ಪರಿಶೀಲಿಸಿ ಸುತ್ತಮುತ್ತಲಿನ ಸಿಸಿ ಟಿವಿಯ ಪುಟೇಜ್ ಪಡೆದು ದರೋಡೆಕೋರರ ಪತ್ತೆಗೆ ಬಲೆ ಬೀಸಿದ್ದಾರೆ. ಜಾಲಹಳ್ಳಿ ಠಾಣೆ ಪೊಲೀಸರು ದರೋಡೆ ಪ್ರಕರಣ ದಾಖಲಿಸಿಕೊಂಡು ದರೋಡೆಕೋರರಿಗಾಗಿ ಶೋಧ ನಡೆಸುತ್ತಿದ್ದಾರೆ.

ನಿಲ್ಲದ ಮಳೆ : ಕರಾವಳಿ, ಉತ್ತರ ಕರ್ನಾಟಕದಲ್ಲಿ ಮತ್ತೆ ಪ್ರವಾಹ ಭೀತಿ

ನಿಲ್ಲದ ಮಳೆ : ಕರಾವಳಿ, ಉತ್ತರ ಕರ್ನಾಟಕದಲ್ಲಿ ಮತ್ತೆ ಪ್ರವಾಹ ಭೀತಿ

 

ನಿಲ್ಲದ ಮಳೆ : ಕರಾವಳಿ, ಉತ್ತರ ಕರ್ನಾಟಕದಲ್ಲಿ ಮತ್ತೆ ಪ್ರವಾಹ ಭೀತಿ


ಬೆಂಗಳೂರು,ಸೆ.21- ನಿಲ್ಲದ ಮಳೆಗೆ ಕರಾವಳಿ ತತ್ತರಗೊಂಡಿದೆ. ಉತ್ತರ ಕರ್ನಾಟಕದಲ್ಲಿ ಮತ್ತೇ ಪ್ರವಾಹದ ಭೀತಿ ಎದುರಾಗಿದೆ. ಭಾರೀ ಮಳೆಗೆ ನಿನ್ನೆ ಇಬ್ಬರು ಮೃತಪಟ್ಟಿದ್ದು ಇಂದು ತುಂಗಾಭದ್ರ ನದಿಯಲ್ಲಿ ಎತ್ತಿನಬಂಡಿ ಸಮೇತ ಇಬ್ಬರು ಕೊಚ್ಚಿಹೋಗಿದ್ದಾರೆ. ಕಲಬುರಗಿಯಲ್ಲಿ ಕಮಲಾಪುರ ತಾಲೂಕಿನ ಶ್ರೀಚಂದ ಗ್ರಾಮದಲ್ಲಿ ಯುವಕನೋರ್ವ ಬೈಕ್ ಸಮೇತ ಕೊಚ್ಚಿಹೋಗಿದ್ದಾನೆ.

ಹಾವೇರಿ ಜಿಲ್ಲೆ ರಾಣೇಬೆನ್ನೂರಿನ ಕೋಣನ ತಂಬಗಿಯ ನದಿ ಭಾಗದಲ್ಲಿ ಮರಳು ತುಂಬುತ್ತಿದ್ದ ಇಬ್ಬರು ಪ್ರವಾಹದ ಪಾಲಾಗಿದ್ದಾರೆ. ಸ್ಥಳಕ್ಕೆ ಧಾವಿಸಿರುವ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಇಬ್ಬರಿಗಾಗಿ ಶೋಧಕಾರ್ಯ ಮುಂದುವರೆಸಿದ್ದಾರೆ.

ಕಲಬುರಗಿ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ನದಿ, ಹಳ್ಳ-ಕೊಳ್ಳಗಳು ಉಕ್ಕಿ ಹರಿಯುತ್ತಿದ್ದು, ಹಲವಾರು ಅವಾಂತರಗಳಿಗೆ ಕಾರಣವಾಗಿದೆ. ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಯುವಕನ ಶವ ಪತ್ತೆಯಾಗಿದ್ದು ಮೃತ ಯುವಕನನ್ನು ಶ್ರೀಚಂದ ಗ್ರಾಮದ ಬೀರಶೆಟ್ಟಿ ಬೋಧನವಾದಿ(28) ಎಂದು ಗುರುತಿಸಲಾಗಿದೆ.

ನಿನ್ನೆ ಸಂಜೆ ಯುವಕ ಹಳ್ಳದಲ್ಲಿ ಕೊಚ್ಚಿ ಹೋಗಿದ್ದ. ಆತನ ಶವಕ್ಕಾಗಿ ನಿನ್ನೆ ರಾತ್ರಿಯಿಂದಲೂ ಅಗ್ನಿಶಾಮಕ ದಳ ಸಿಬ್ಬಂದಿ ಮತ್ತು ಪೊಲೀಸರಿಂದ ಶೋಧ ಕಾರ್ಯ ನಡೆದಿತ್ತು. ಕತ್ತಲಿನ ಕಾರಣಕ್ಕೆ ಶೋಧ ಕಾರ್ಯಕ್ಕೆ ಅಡಚಣೆ ಉಂಟಾಗಿತ್ತು. ಇಂದು ಬೆಳಿಗ್ಗೆ ಯುವಕನ ಶವ ಕೊಚ್ಚಿ ಹೋದ ಸ್ಥಳದ ಸಮೀಪದಲ್ಲಿಯೇ ಸಿಕ್ಕಿದೆ.

ಕೊಡಗಿನಲ್ಲಿ ರೆಡ್ ಅಲರ್ಟ್: ಕೊಡಗಿನಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು, ಮುಂದಿನ ಎರಡು ದಿನ ರೆಡ್ ಅಲರ್ಟ್ ಘೋಷಿಸಲಾಗಿದೆ. ಬೆಳಗ್ಗೆಯಿಂದ ಜಿಲ್ಲೆಯ ಹಲವೆಡೆ ಮಳೆ ಸುರಿಯುತ್ತಿದೆ. ಮಡಿಕೇರಿ, ಭಾಗಮಂಡಲ, ಚೇರಂಬಾಣೆ ತಲಕಾವೇರಿ ಸುತ್ತಮುತ್ತಲೂ ಮಳೆಯಾಗುತ್ತಿದೆ. ನಿನ್ನೆ ಸಂಜೆವರೆಗೆ ಸುರಿದ ಮಳೆಗೆ ಕಾವೇರಿ ನದಿ ಅಪಾಯ ಮಟ್ಟದಲ್ಲಿ ಹರಿಯುತ್ತಿದೆ.

ಭೀಮಾ ನದಿಯಲ್ಲಿಯೂ ಪ್ರವಾಹ ಭೀತಿ: ಕರ್ನಾಟಕ ಮತ್ತು ಮಹಾರಾಷ್ಟ್ರ ಭಾರಿ ಮಳೆ ಹಿನ್ನೆಲೆಯಲ್ಲಿ ಭೀಮಾ ನದಿ ಉಕ್ಕಿ ಹರಿಯುತ್ತಿದ್ದು ಪ್ರವಾಹ ಭೀತಿ ಎದುರಾಗಿದೆ. ಘತ್ತರಗಿ ಬಳಿ ಸೇತುವೆ ಮೇಲೆ ನೀರು ಹರಿಯುತ್ತಿರುವ ಪರಿಣಾಮ ಅಫಜಲಪುರ-ಜೇವರ್ಗಿ ರಸ್ತೆ ಸಂಚಾರ ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗಿದೆ. ಕಲಬುರ್ಗಿ, ಚಿಂಚೋಳಿ, ಸೇಡಂ ಮೊದಲಾದ ತಾಲೂಕುಗಳಲ್ಲಿ ಜನತೆ ತತ್ತರಿಸಿ ಹೋಗಿದ್ದಾರೆ. ಸೇಡಂನ ವಾಸವದತ್ತಾ ಸಿಮೆಂಟ್ ಕಾರ್ಖಾನೆ ಜಲಾವೃತಗೊಂಡಿದೆ.


ಅಪಾಯಮಟ್ಟದಲ್ಲಿ ನದಿಗಳು: ಕಾಫಿನಾಡು ಚಿಕ್ಕಮಗಳೂರಿನಲ್ಲಿಯೂ ಮಳೆಯ ಆರ್ಭಟ ಮುಂದುವರೆದಿದೆ. ಮೂಡಿಗೆರೆ, ಕೊಪ್ಪ, ಎನ್‍ಆರ್ ಪುರ, ಶೃಂಗೇರಿ, ಕಳಸ, ಕುದುರೆಮುಖ, ಕೆರೆಕಟ್ಟೆ, ಕಿಗ್ಗಾ ಭಾಗದಲ್ಲಿ ಭಾರೀ ಮಳೆಯಾಗುತ್ತಿದೆ. ತುಂಗಾ, ಭದ್ರಾ, ಹೇಮಾವತಿ ನದಿಗಳು ಅಪಾಯ ಮಟ್ಟದಲ್ಲಿ ತುಂಬಿ ಹರಿಯುತ್ತಿವೆ.


ಉಡುಪಿಯಲ್ಲಿ ಜನಜೀವನ ಅಸ್ತವ್ಯಸ್ಥ: ಉಡುಪಿ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ಥಗೊಂಡಿದ್ದು, ಸ್ವರ್ಣನದಿ ಉಕ್ಕಿ ಹರಿಯುತ್ತಿದ್ದು ಉಡುಪಿಯಲ್ಲಿರುವ ಮಾಜಿ ಸಚಿವ ದಿವಂಗತ ವಸಂತ ಸಾಲಿಯಾನ ಅವರ ನಿವಾಸವೂ ಜಲಾವೃತವಾಗಿದ್ದು, ಕುಟುಂಬ ಸದಸ್ಯರು ಮೊದಲ ಮಹಡಿಯಲ್ಲಿ ಕುಳಿತು ಪ್ರವಾಹ ಇಳಿಮುಖವಾಗುವ ನಿರೀಕ್ಷೆಯಲ್ಲಿದ್ದಾರೆ.


ಮಂಗಳೂರಿನಲ್ಲಿ ಮೀನು ಹಿಡಿಯಲು ಸಮುದ್ರಕ್ಕೆ ಇಳಿದ ಮೂರು ದೋಣಿಗಳು ಅಲೆಯ ಹೊಡೆತಕ್ಕೆ ಸಿಲುಕಿಕೊಂಡಿವೆ. ಮಲ್ಪೆ ಬೀಚ್ ಸಮೀಪ ಮೂರು ದೋಣಿಗಳು ಅಲೆಯ ಅಬ್ಬರದಲ್ಲಿ ಸಿಲುಕಿದ್ದು ದೋಣಿಯಲ್ಲಿದ್ದವರು ಪರದಾಡುತ್ತಿದ್ದಾರೆ. ಅವರನ್ನು ರಕ್ಷಿಸುವ ಕಾರ್ಯ ಮುಂದುವರೆದಿದೆ.


ತುಂಗಾಭದ್ರ ಡ್ಯಾಂನಿಂದ ದೊಡ್ಡ ಪ್ರಮಾಣದಲ್ಲಿ ನೀರನ್ನು ಹೊರಬಿಡುತ್ತಿರುವ ಹಿನ್ನಲೆಯಲ್ಲಿ ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ. ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಯಲ್ಲೂ ಮಳೆಯ ಅಬ್ಬರಕ್ಕೆ ಹೊಲ, ಗದ್ದೆಗಳು ಜಲಾವೃತಗೊಂಡಿದ್ದು ಹಲವೆಡೆ ಸೇತುವೆಗಳು ಮುಳುಗಡೆಯಾಗಿರುವುದರಿಂದ ಸಂಪರ್ಕ ಕಡಿತಗೊಂಡಿದೆ.


ನಲುಗಿಹೋದ ರಾಯಚೂರು: ಬಿಸಿಲು ನಾಡು ರಾಯಚೂರಿನಲ್ಲಿ ಮಳೆಯ ಆರ್ಭಟ ಮುಂದುವರೆದಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಜನ ಅಕ್ಷರಶಃ ನಲುಗಿಹೋಗಿದ್ದಾರೆ. ಕಳೆದ 40 ವರ್ಷಗಳಲ್ಲಿ ಅತ್ಯಧಿಕ ಮಳೆ ಈ ಬಾರಿ ರಾಯಚೂರು ಜಿಲ್ಲೆಯಲ್ಲಾಗಿದೆ. ಮಹಾಮಳೆಗೆ ಅನೇಕ ಗ್ರಾಮಗಳು ನಲುಗಿ ಹೋಗಿವೆ.


ಅದರಲ್ಲೂ ರಾಯಚೂರು ತಾಲೂಕಿನ ಇಡಪನೂರು ಗ್ರಾಮ ಅತ್ಯಧಿಕ ಬಾಧಿತವಾದ ಗ್ರಾಮವಾಗಿದೆ. ನಾಲ್ಕು ದಿನಗಳ ಹಿಂದೆ ಸುರಿದ ಮಳೆಗೆ ಗ್ರಾಮದಲ್ಲಿ ನೀರು ನುಗ್ಗಿದೆ. ಗ್ರಾಮದಲ್ಲಿ 500 ಕ್ಕೂ ಅಧಿಕ ಮನೆಗಳು ಕುಸಿದು ಬಿದ್ದಿವೆ. ಸಮುದ್ರದಂತೆ ಹರಿದ ಮಳೆ ನೀರಿಗೆ ಗ್ರಾಮದ ಸಂಪರ್ಕಕ್ಕೆ ಇದ್ದ ಸೇತುವೆಯೊಂದು ಕೊಚ್ಚಿಕೊಂಡು ಹೋಗಿದೆ.


ಈ ಸೇತುವೆ ಮಿಡಗಲದಿನ್ನಿ ಮಾರ್ಗವಾಗಿ ಯರಗೇರಾ ಮತ್ತು ರಾಯಚೂರಿಗೆ ಹೋಗಿ ಬರಲು ಸಂಪರ್ಕ ಕಲ್ಪಿಸುತ್ತಿತ್ತು. ಮಹಾಮಳೆಗೆ ಸೇತುವೆ ಕೊಚ್ಚಿಕೊಂಡು ಹೋಗಿದ್ದರಿಂದ ಗ್ರಾಮಸ್ಥರು ನಡುಗಡ್ಡೆಯಲ್ಲಿ ಇರುವಂತಾಗಿದೆ.


ಕೊಡಗಿನಲ್ಲಿ ವರುಣ ಆರ್ಭಟ; ಕರಡಿಗೂಡು ಗ್ರಾಮಸ್ಥರಿಗೆ ಪ್ರವಾಹ ಭೀತಿ

ಕೊಡಗಿನಲ್ಲಿ ವರುಣ ಆರ್ಭಟ; ಕರಡಿಗೂಡು ಗ್ರಾಮಸ್ಥರಿಗೆ ಪ್ರವಾಹ ಭೀತಿ


ಕೊಡಗಿನಲ್ಲಿ ವರುಣ ಆರ್ಭಟ; ಕರಡಿಗೂಡು ಗ್ರಾಮಸ್ಥರಿಗೆ ಪ್ರವಾಹ ಭೀತಿ


ಕೊಡಗು: ಜಿಲ್ಲೆಯಲ್ಲಿ ವರುಣನ ಆರ್ಭಟ ಮುಂದುವರಿದಿದ್ದು, ಕರಡಿಗೂಡು ಗ್ರಾಮದ ಜನರಿಗೆ ಮತ್ತೆ ಪ್ರವಾಹದ ಭೀತಿ ಎದುರಾಗಿದೆ.


ಜಿಲ್ಲೆಯ ಎಲ್ಲೆಡೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗುತ್ತಿದ್ದು, ಜನ ಜೀವನ ಅಸ್ತವ್ಯಸ್ಥಗೊಂಡಿದೆ. ಕಳೆದ ಆಗಸ್ಟ್​ ತಿಂಗಳಿನಲ್ಲಿ ಉಂಟಾದ ಪ್ರವಾಹದಲ್ಲಿ ವಿರಾಜಪೇಟೆ ತಾಲೂಕಿನ ಕರಡಿಗೂಡು ಗ್ರಾಮ ಜಲಾವೃತಗೊಂಡಿತ್ತು. ಈಗ ಮತ್ತೆ ಜಿಲ್ಲೆಯಲ್ಲಿ ಎಡಬಿಡದೇ ಮಳೆ ಸುರಿಯುತ್ತಿದ್ದು, ಜನರಿಗೆ ಪ್ರವಾಹ ಆತಂಕ ಎದುರಾಗಿದೆ.

 

ಸರ್ಕಾರದ ವಿರುದ್ಧ ಸಿಡಿದೆದ್ದ ರೈತರು. ಮಳೆಯಲ್ಲೇ ಬೃಹತ್​ ಪ್ರತಿಭಟನೆ

ಸರ್ಕಾರದ ವಿರುದ್ಧ ಸಿಡಿದೆದ್ದ ರೈತರು. ಮಳೆಯಲ್ಲೇ ಬೃಹತ್​ ಪ್ರತಿಭಟನೆ

 

ಸರ್ಕಾರದ ವಿರುದ್ಧ ಸಿಡಿದೆದ್ದ ರೈತರು. ಮಳೆಯಲ್ಲೇ ಬೃಹತ್​ ಪ್ರತಿಭಟನೆ

ಬೆಂಗಳೂರು: ಕರೊನಾ ಭೀತಿ ನಡುವೆಯೂ ರಾಜ್ಯ ವಿಧಾನಮಂಡಲದ ಮುಂಗಾರು ಅಧಿವೇನ ಆಂಭವಾಗಿದೆ. ಈ ವೇಳೆ ರಾಜ್ಯ ಸರ್ಕಾರದ ವಿರುದ್ಧ 30ಕ್ಕೂ ಹೆಚ್ಚು ಸಂಘಟನೆಗಳು ಸಿಡಿದೆದ್ದು ಬೀದಿಗಳಿದು ಪ್ರತಿಭಟಿಸುತ್ತಿವೆ.

ಭೂ ಸುಧಾರಣೆ, ಎಪಿಎಂಸಿ ಕಾಯ್ದೆ ಸುಗ್ರೀವಾಜ್ಞೆ, ವಿದ್ಯುತ್​ ಕಾಯ್ದೆ ತಿದ್ದುಪಡಿ ವಿರೋಧಿಸಿ ಕೋಡಿಹಳ್ಳಿ ಚಂದ್ರಶೇಖರ್​ ಮತ್ತು ಕುರುಬೂರು ಶಾಂತಕುಮಾರ್​ ನೇತೃತ್ವದಲ್ಲಿ ವಿಧಾನಸೌಧ ಚಲೋ ಹಮ್ಮಿಕೊಳ್ಳಲಾಗಿದೆ. ಮೆಜೆಸ್ಟಿಕ್​ ಬಳಿಯ ರೈಲ್ವೆ ನಿಲ್ದಾಣದಿಂದ ಹೊರಟ ಬೃಹತ್​ ಪ್ರತಿಭಟನಾ ಮೆರವಣಿಗೆಗೆ ರಾಜ್ಯದ 32 ಸಂಘಟನೆಗಳು ಸಾಥ್​ ನೀಡಿವೆ.

ಭೂ ಸುಧಾರಣೆ, ಎಪಿಎಂಸಿ ಕಾಯ್ದೆ ಸುಗ್ರೀವಾಜ್ಞೆ, ವಿದ್ಯುತ್​ ಕಾಯ್ದೆ ತಿದ್ದುಪಡಿ ವಿರೋಧಿಸಿ ಬೆಂಗಳೂರಿನಲ್ಲಿ ಮಳೆಯನ್ನೂ ಲೆಕ್ಕಿಸದೆ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕುತ್ತಿರುವ ಅನ್ನದಾತರು, ಈ ಮೂರು ಕಾಯ್ದೆಯನ್ನೂ ಕೈಬಿಡಬೇಕು ಎಂದು ಆಗ್ರಹಿಸುತ್ತಿದ್ದಾರೆ. ರೈತರ ಹೋರಾಟಕ್ಕೆ ಸರ್ಕಾರ ಮಣಿಯಬೇಕು. ಒಂದು ವೇಳೆ ರೈತರಿಗೆ ಮಾರಕವಾಗಿರುವ ಬಿಲ್​ಗಳನ್ನು ಮಂಡಿಸದ್ದೇ ಆದಲ್ಲಿ ಕಾನೂನು ಭಂಗ, ಜೈಲ್​ ಭರೋ ಚಳವಳಿಯನ್ನೂ ಮಾಡಲು ಸಿದ್ಧರಿದ್ದೇವೆ ಎಂದು ರೈತ ಮುಖಂಡರು ಎಚ್ಚರಿಸಿದರು.

ಮಧ್ಯಾಹ್ನ 12.50ರ ಸುಮಾರಿಗೆ ರೈತರ ಪ್ರತಿಭಟನಾ ರ್ಯಾಲಿ ರೇಸ್​ಕೊರ್ಸ್​ ರಸ್ತೆ ದಾಟಿತ್ತು. ಮೆಜೆಸ್ಟಿಕ್​, ಫ್ರೀಡಂ ಪಾರ್ಕ್, ಆನಂದರಾವ್​ ಸರ್ಕರ್​, ರೇಸ್​ಕೋರ್ಸ್​ ರಸ್ತೆಯಲ್ಲಿ ಟ್ರಾಫಿಕ್​ ಜಾಮ್​ ಉಂಟಾಗಿತ್ತು. ಪ್ರತಿಭಟನಾ ಮೆರವಣಿಗೆಯಲ್ಲಿ ಸಾವಿರಾರು ಜನ ಜಮಾಯಿಸಿದ್ದರಿಂದ ಎಲ್ಲೆಡೆ ಪೊಲೀಸ್​ ಬಂದೋಬಸ್ತ್ ಏರ್ಪಡಿಸಲಾಗಿದೆ.

ಭಿವಂಡಿ ಕಟ್ಟಡ ದುರಂತದಲ್ಲಿ 10 ಮಂದಿ     ಸಾವು  : ಸಂತಾಪ ಸೂಚಿಸಿದ ಪ್ರಧಾನಿ,    ರಾಷ್ಟ್ರಪತಿ

ಭಿವಂಡಿ ಕಟ್ಟಡ ದುರಂತದಲ್ಲಿ 10 ಮಂದಿ ಸಾವು : ಸಂತಾಪ ಸೂಚಿಸಿದ ಪ್ರಧಾನಿ, ರಾಷ್ಟ್ರಪತಿ

 

ಭಿವಂಡಿ ಕಟ್ಟಡ ದುರಂತದಲ್ಲಿ 10 ಮಂದಿ         ಸಾವು   : ಸಂತಾಪ ಸೂಚಿಸಿದ ಪ್ರಧಾನಿ,       ರಾಷ್ಟ್ರಪತಿ

ನವದೆಹಲಿ: ಭಾರಿ ಮಳೆಯಿಂದಾಗಿ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಭಿವಂಡಿ ಮೂರು ಅಂತಸ್ತಿನ ಕಟ್ಟಡ ಕುಸಿದು 10 ಮಂದಿ ಸಾವನ್ನಪ್ಪಿರುವ ದುರಂತಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಸಂತಾಪ ಸೂಚಿಸಿದ್ದಾರೆ.

ಈ ಬಗ್ಗೆ ಟ್ವೀಟ್​ ಮಾಡಿರುವ ಪಿಎಂ ಮೋದಿ, 'ಮಹಾರಾಷ್ಟ್ರದ ಭಿವಂಡಿಯಲ್ಲಿ ಕಟ್ಟಡ ಕುಸಿತ ವಿಚಾರ ಕೇಳಿ ನೋವಾಗಿದೆ. ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸುತ್ತಾ, ಗಾಯಾಳುಗಳ ಶೀಘ್ರ ಚೇತರಿಕೆಗಾಗಿ ಪ್ರಾರ್ಥಿಸುತ್ತೇನೆ. ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲಾ ನೆರವು ನೀಡಲಾಗುತ್ತಿದೆ' ಎಂದು ಹೇಳಿದ್ದಾರೆ.

ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಟ್ವೀಟ್​ ಮಾಡಿ 'ಭಿವಂಡಿಯಲ್ಲಿ ಕಟ್ಟಡ ಕುಸಿತ ಘಟನೆಯಲ್ಲಿ ಜನರು ಪ್ರಾಣ ಕಳೆದುಕೊಂಡಿರುವುದು ಬಹಳ ದುಃಖಕರ ಸಂಗತಿ . ಈ ನೋವಿನ ಸಂದರ್ಭದಲ್ಲಿ ನನ್ನ ಪ್ರಾರ್ಥನೆಗಳು ಸಂತ್ರಸ್ತರಿಗೆ ಮುಡಿಪು. ಗಾಯಾಳುಗಳು ಆದಷ್ಟು ಬೇಗ ಗುಣಮುಖರಾಗಲಿ ಎಂದು ಬೇಡಿಕೊಳ್ಳುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.


Sunday, 20 September 2020

ಜಂಇಯ್ಯತುಲ್ ಮುಅಲ್ಲಿಮೀನ್ ಉಪಾದ್ಯಕ್ಷರಾದ ಆದಂ ಸಖಾಫಿ ನಿಧನರಾದರು

ಜಂಇಯ್ಯತುಲ್ ಮುಅಲ್ಲಿಮೀನ್ ಉಪಾದ್ಯಕ್ಷರಾದ ಆದಂ ಸಖಾಫಿ ನಿಧನರಾದರು

 

ಜಂಇಯ್ಯತುಲ್ ಮುಅಲ್ಲಿಮೀನ್ ಉಪಾದ್ಯಕ್ಷರಾದ ಆದಂ ಸಖಾಫಿ ನಿಧನರಾದರು


ಪುತ್ತಿಗೆ ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಕಾಸರಗೋಡು ಮಾಜಿ ಅದ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿ ಹಾಗೂ ಪ್ರಮುಖ ಪಂಡಿತರು ಆದ ಆದಂ ಸಖಾಫಿ ಪಳ್ಳಪ್ಪಾಡಿ (53) ನಿಧನರಾದರು.ಸೋಮವಾರ ಬೆಳಿಗ್ಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅಂತ್ಯಸAಸ್ಕಾರ ಮಧ್ಯಾನ್ಹ ಪುತ್ತಿಗೆ ಮುಹಿಮ್ಮಾತ್‌ನಲ್ಲಿ.

1998 ರಿಂದ ಮುಹಿಮ್ಮಾತ್ ಮದ್ರಸದ ಪ್ರಧಾನಾಧ್ಯಪಕರಾದ ಆದಂ ಸಖಾಫಿ ಪ್ರಸ್ತುತ ಮುಹಿಮ್ಮಾತ್ ಜನರಲ್‌ಬೋಡಿ ಸದಸ್ಯರು,ಎಸ್ ಜೆ ಎಂ ಪುತ್ತಿಗೆ ರೇಂಜ್ ಅಧ್ಯಕ್ಷರು ಆಗಿದ್ದರು.


ಕುಂಬೋಲ್ ಪಾಂಬಕೋಯ ನಗರ್,ಮಂಗಳೂರು ಕಿನ್ಯ,ಆರಿಕ್ಕಾಡಿ ವಲಿಯ ಪಳ್ಳಿ,ಸುಳ್ಯ ಗಾಂಧಿ ನಗರ ಮುಂತಾದ ಸ್ಥಳಗಳಲ್ಲಿ ಮುಖ್ಯ ಅಧ್ಯಾಪಕರಾಗಿ ಸೇವೆಸಲ್ಲಿಸಿದ್ದರು.


ಅವರಿಗೆ ಪತ್ನಿ ತಾಹಿರಾ ಸುಲಿಯಾ , ಮಕ್ಕಳಾದ ತಮೀಮ್ (14), ಸಲೀಮ್ ಅಬ್ದುಲ್ಲಾ (11), ಫಾತಿಮಾ ತಸ್ತೀಮ್ (10), ಅಮಿನಾ ಶುಹೈಮಾ (5), ಮಹಮ್ಮದ್ ಸುಲೈಮ್ (10 ತಿಂಗಳು), ಸಹೋದರಿಯರಾದ ಆಯೆಷಾ ಮತ್ತು ಮರಿಯುಮ್ಮ,ಆಸಿಯ ಇದ್ದಾರೆ.

ಕಾಂತಪುರ ಎ ಪಿ ಅಬೂಬಕ್ಕರ್ ಮುಸ್ಲಿಯಾರ್,ಸಯ್ಯಿದ್ ಅಲಿ ಬಾಫಖಿ ತಂಙಳ್,ಸಯ್ಯಿದ್ ಕೆ ಎಸ್ ಆಟಕ್ಕೋಯ ತಂಙಳ್ ಕುಂಬೋಲ್,ಸಯ್ಯಿದ್ ಇಬ್ರಾಹೀಂ ಪೂಕುಂಞÂ ತಂಙಳ್ ಕಲ್ಲಕಟ್ಟ,ಸಯ್ಯಿದ್ ಪಿ ಎಸ್ ಆಟಕ್ಕೋಯ ತಂಙಳ್ ಬಾಹಸನ್,ಬಿ ಎಸ್ ಅಬ್ದುಲ್ಲಾ ಕುಂಞÂ ಪೈಝಿ,ಸಯ್ಯಿದ್ ಮುನೀರುಲ್ ಅಹ್ದಲ್ ತಂಙಳ್ ಮುಂತಾದವರು ಸಂತಾಪ ಪಟ್ಟರು.

ಮುಹಿಮ್ಮಾತ್ ಜನರಲ್‌ಬೋಡಿ ಅಂಗ ಹಾಗೂ ದೀರ್ಘಕಾಲ ಸದರ್ ಉಸ್ತಾದರಾದ ಆದಮ್ ಸಕಾಫಿ ಇಹಲೋಕ ತ್ಯಜಿಸಿದರು

ಮುಹಿಮ್ಮಾತ್ ಜನರಲ್‌ಬೋಡಿ ಅಂಗ ಹಾಗೂ ದೀರ್ಘಕಾಲ ಸದರ್ ಉಸ್ತಾದರಾದ ಆದಮ್ ಸಕಾಫಿ ಇಹಲೋಕ ತ್ಯಜಿಸಿದರು

 

ಮುಹಿಮ್ಮಾತ್ ಜನರಲ್‌ಬೋಡಿ ಅಂಗ ಹಾಗೂ ದೀರ್ಘಕಾಲ ಸದರ್ ಉಸ್ತಾದರಾದ ಆದಮ್ ಸಕಾಫಿ ಇಹಲೋಕ ತ್ಯಜಿಸಿದರು

 ಕೇಂದ್ರ ಸರಕಾರ ರೈತರ ಭವಿಷ್ಯ ಅಳಿಸಿ ಹಾಕುತ್ತಿದೆ: ಮಲ್ಲಿಕಾರ್ಜುನ ಖರ್ಗೆ

ಕೇಂದ್ರ ಸರಕಾರ ರೈತರ ಭವಿಷ್ಯ ಅಳಿಸಿ ಹಾಕುತ್ತಿದೆ: ಮಲ್ಲಿಕಾರ್ಜುನ ಖರ್ಗೆ

 

ಕೇಂದ್ರ ಸರಕಾರ ರೈತರ ಭವಿಷ್ಯ ಅಳಿಸಿ ಹಾಕುತ್ತಿದೆ: ಮಲ್ಲಿಕಾರ್ಜುನ ಖರ್ಗೆ


ಬೆಂಗಳೂರು, ಸೆ. 20: ವಿರೋಧದ ನಡುವೆಯೂ ರಾಜ್ಯಸಭೆಯಲ್ಲಿ ಕೃಷಿ ಮಸೂದೆಗಳು ಅಂಗೀಕಾರವಾಗಿದ್ದು, ಕೇಂದ್ರ ಸರಕಾರ ರೈತರ ಭವಿಷ್ಯ ಅಳಿಸಿ ಹಾಕುತ್ತಿದೆ ಎಂದು ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಕೇಂದ್ರದ ವಿರುದ್ಧ ಕಿಡಿಕಾರಿದ್ದಾರೆ.


ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಪ್ರತಿ ಬಾರಿ ಪ್ರಧಾನಿ ನರೇಂದ್ರ ಮೋದಿ ತಮ್ಮ ಸರಕಾರದ ಹೊಸ ಯೋಜನೆಗಳು ನವ ಭಾರತ ನಿರ್ಮಾಣಕ್ಕೆ ನಾಂದಿ ಹಾಡುತ್ತದೆ ಎಂದು ಹೇಳುತ್ತಾರೆ. ಆದರೆ ನೋಟು ರದ್ದತಿ, ಜಿಎಸ್‍ಟಿ, ಮೇಕ್ ಇನ್ ಇಂಡಿಯಾ, ಗರೀಬ್ ಕಲ್ಯಾಣ ಯೋಜನೆಯಂತೆ ಮತ್ತಷ್ಟು ಕತ್ತಲೆಗೆ ತಳ್ಳುತ್ತವೆ. ಇದೀಗ ಕೃಷಿ ಮಸೂದೆ ಮೂಲಕ ಪಿಎಂ ಮೋದಿ ಭಾರತದ ರೈತರನ್ನು ಸಂಕಷ್ಟಕ್ಕೆ ನೂಕುತ್ತಿದ್ದಾರೆ ಎಂದು ಹೇಳಿದ್ದಾರೆ.


ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ (ಎಪಿಎಂಸಿ) ಭವಿಷ್ಯದ ಬಗ್ಗೆ ಮತ್ತು ರೈತರು ತಮ್ಮ ಉತ್ಪನ್ನಗಳಿಗೆ ಹೇಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‍ಪಿ) ಪಡೆಯುತ್ತಾರೆ ಎಂಬುದರ ಬಗ್ಗೆ ಪ್ರತಿಭಟನಾ ನಿರತ ರೈತರಿಗೆ ಮನವರಿಕೆ ಮಾಡಲು ಬಿಜೆಪಿ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ರೈತರ ಭವಿಷ್ಯವನ್ನು ಅಳಿಸಿಹಾಕಲು ಬಿಜೆಪಿಯವರು ತಮ್ಮ ಬಹುಮತವನ್ನು ಬಳಸಿಕೊಳ್ಳುತ್ತಿದ್ದಾರೆ. ಇದು ನಮ್ಮ ಕೃಷಿ ಆರ್ಥಿಕತೆಗೆ ಹಾನಿಕಾರಕವಾಗಿದೆ ಎಂದು ತಿಳಿಸಿದ್ದಾರೆ.


ರೈತರ ಕಣ್ಣಲ್ಲಿ ರಕ್ತ ಸುರಿಯುವಂತೆ ಮಾಡುತ್ತಿದೆ ಮೋದಿ ಸರ್ಕಾರ: ರಾಹುಲ್​ ಗಾಂಧಿ ಟ್ವೀಟ್​

ರೈತರ ಕಣ್ಣಲ್ಲಿ ರಕ್ತ ಸುರಿಯುವಂತೆ ಮಾಡುತ್ತಿದೆ ಮೋದಿ ಸರ್ಕಾರ: ರಾಹುಲ್​ ಗಾಂಧಿ ಟ್ವೀಟ್​

 

ರೈತರ ಕಣ್ಣಲ್ಲಿ ರಕ್ತ ಸುರಿಯುವಂತೆ ಮಾಡುತ್ತಿದೆ ಮೋದಿ ಸರ್ಕಾರ: ರಾಹುಲ್​ ಗಾಂಧಿ ಟ್ವೀಟ್​

\ನವದೆಹಲಿ: ಕರೊನಾ ಸೋಂಕು ನಿಯಂತ್ರಣ, ಚೀನಾ ಗಡಿ ಬಿಕ್ಕಟ್ಟು ಸೇರಿ ಹಲವು ವಿಷಯಗಳಲ್ಲಿ ರಾಹುಲ್​ ಗಾಂಧಿಯವರು ಕೇಂದ್ರ ಸರ್ಕಾರ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸುತ್ತಲೇಬಂದಿದ್ದಾರೆ.

ಹಾಗೇ ಇಂದು 2 ಪ್ರಮುಖ ಕೃಷಿ ಮಸೂದೆಗಳು ಪಾಸ್​ ಆಗುತ್ತಿದ್ದಂತೆ ಮತ್ತೊಮ್ಮೆ ಕೇಂದ್ರದ ವಿರುದ್ಧ ಕಿಡಿಕಾರಿದ್ದಾರೆ. ಕೇಂದ್ರ ಸರ್ಕಾರ ರೈತರ ವಿರುದ್ಧ ಡೆತ್​ ವಾರೆಂಟ್​ ಹೊರಡಿಸಿದ್ದು, ಇದು ಪ್ರಜಾಪ್ರಭುತ್ವಕ್ಕೇ ಅವಮಾನ ಎಂದು ಹೇಳಿದ್ದಾರೆ. ರೈತರು ತಮ್ಮ ಕೃಷಿ ಕ್ಷೇತ್ರದಲ್ಲಿ ಬಂಗಾರವನ್ನು ಬೆಳೆಯುತ್ತಾರೆ. ಆದರೆ ಮೋದಿ ಸರ್ಕಾರ ರೈತರು ರಕ್ತ ಕಣ್ಣೀರು ಸುರಿಸುವಂತೆ ಮಾಡುತ್ತಿದೆ ಎಂದು ರಾಹುಲ್​ ಗಾಂಧಿ ಟ್ವೀಟ್ ಮಾಡಿದ್ದಾರೆ.

'ರೈತರ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಮಸೂದೆ-2020'ಹಾಗೂ 'ರೈತ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಖಾತರಿಯ ಒಪ್ಪಂದ ಮತ್ತು ಕೃಷಿ ಸೇವಾ ಮಸೂದೆ-2020' ಈ ಎರಡೂ ಮಸೂದೆಗಳು ಕೃಷಿ ವಿರೋಧಿಯಾಗಿವೆ. ಕೃಷಿ ಕ್ಷೇತ್ರಕ್ಕೆ ಕಪ್ಪುಚುಕ್ಕೆಯಂತೆ ಎಂದು ಹೇಳಿದ್ದ ರಾಹುಲ್​ ಗಾಂಧಿ ಇದೀಗ ಮತ್ತೆ ಕೇಂದ್ರ ಸರ್ಕಾರವನ್ನು ದೂಷಿಸಿದ್ದಾರೆ. ಮೋದಿ ಸರ್ಕಾರ ರೈತರನ್ನು ಬಂಡವಾಳಶಾಹಿಗಳ ಗುಲಾಮರನ್ನಾಗಿಸುತ್ತಿದೆ ಎಂದೂ ಆರೋಪಿಸಿದ್ದಾರೆ. (ಏಜೆನ್ಸೀಸ್​)


ಕೊರೊನಾ ಅಟ್ಟಹಾಸಕ್ಕೆ ರಾಜ್ಯ ಶೇಕ್ : ಬೆಂಗಳೂರಿನಲ್ಲಿ ಇಂದು 3322 ಪಾಸಿಟಿವ್ ಕೇಸ್ ಪತ್ತೆ

ಕೊರೊನಾ ಅಟ್ಟಹಾಸಕ್ಕೆ ರಾಜ್ಯ ಶೇಕ್ : ಬೆಂಗಳೂರಿನಲ್ಲಿ ಇಂದು 3322 ಪಾಸಿಟಿವ್ ಕೇಸ್ ಪತ್ತೆ

 


ಕೊರೊನಾ ಅಟ್ಟಹಾಸಕ್ಕೆ ರಾಜ್ಯ  ಶೇಕ್ : ಬೆಂಗಳೂರಿನಲ್ಲಿ ಇಂದು 3322 ಪಾಸಿಟಿವ್ ಕೇಸ್ ಪತ್ತೆ

ಬೆಂಗಳೂರು : ರಾಜ್ಯದ ರಾಜಧಾನಿಯಲ್ಲಿ ಕೊರೋನಾ ಸ್ಪೋಟ ಇಂದು ಕೂಡ ಮುಂದುವರೆದಿದೆ. ಬೆಂಗಳೂರಿನಲ್ಲಿ ಇಂದು 3322 ಜನರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 194760 ಕ್ಕೆ ಏರಿಕೆಯಾಗಿದೆ..

ಬೆಂಗಳೂರಿನಲ್ಲಿ ಕೊರೊನಾ ಸೋಂಕಿಗೆ ಇಂದು 32 ಮಂದಿ ಸೋಂಕಿತರು ಬಲಿಯಾಗಿದ್ದು, ಇದುವರೆಗೆ ಬೆಂಗಳೂರಿನಲ್ಲಿ ಮೃತಪಟ್ಟ ಸೋಂಕಿತರ ಸಂಖ್ಯೆ 2657 ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಕಿಲ್ಲರ್ ಕೊರೊನಾಗೆ ರಾಜ್ಯದಲ್ಲಿ ಇಂದು 101 ಜನರು ಬಲಿಯಾಗಿದ್ದು, ಈ ಮೂಲಕ ಕೊರೊನಾ ಸಾವಿನ ಸಂಖ್ಯೆ 8023 ಕ್ಕೇರಿದೆ. ರಾಜ್ಯದಲ್ಲಿ ಕೊರೊನಾ ಮಹಾಸ್ಪೋಟವಾಗಿದ್ದು, ಇಂದು 8191 ಜನರಿಗೆ ಕೊರೊನಾ ಸೋಂಕು ಧೃಡವಾಗಿದೆ, ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 519537 ಕ್ಕೆ ಏರಿಕೆಯಾಗಿದೆ. ಐಸಿಯುನಲ್ಲಿ 811 ಮಂದಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.ಭಾರತೀಯ ಸೇನೆಯಿಂದ ಪೂರ್ವ ಲಡಾಖ್ ನ ಎಲ್‌ಎಸಿ ಬಳಿ ಆರು ಬೆಟ್ಟ ಪ್ರದೇಶಗಳು ವಶಕ್ಕೆ

ಭಾರತೀಯ ಸೇನೆಯಿಂದ ಪೂರ್ವ ಲಡಾಖ್ ನ ಎಲ್‌ಎಸಿ ಬಳಿ ಆರು ಬೆಟ್ಟ ಪ್ರದೇಶಗಳು ವಶಕ್ಕೆ

 


ಭಾರತೀಯ ಸೇನೆಯಿಂದ ಪೂರ್ವ ಲಡಾಖ್ ನ ಎಲ್‌ಎಸಿ ಬಳಿ ಆರು ಬೆಟ್ಟ ಪ್ರದೇಶಗಳು ವಶಕ್ಕೆ

ಹೊಸದಿಲ್ಲಿ : ಪೂರ್ವ ಲಡಾಖ್ ವಲಯದಲ್ಲಿ ಚೀನಾ ಸೇನೆಯೊಂದಿಗಿನ ಸಂಘರ್ಷದ ಸಂದರ್ಭದಲ್ಲಿ ಭಾರತೀಯ ಸೇನೆ ಕಳೆದ ಮೂರು ವಾರಗಳಲ್ಲಿ ಗಡಿ ನಿಯಂತ್ರಣ ರೇಖೆಯ ಆರು ಪ್ರಮುಖ ಬೆಟ್ಟಪ್ರದೇಶಗಳನ್ನು ಆಕ್ರಮಿಸಿಕೊಂಡಿದೆ.

'ಆಗಸ್ಟ್ 29ರಿಂದ ಸೆಪ್ಟೆಂಬರ್ ಎರಡನೇ ವಾರದವರೆಗೆ ಭಾರತೀಯ ಸೇನೆ ಆರು ಹೊಸ ಎತ್ತರಗಳನ್ನು ಆಕ್ರಮಿಸಿಕೊಂಡಿದೆ. ನಮ್ಮ ಸೈನಿಕರು ಆಕ್ರಮಿಸಿಕೊಂಡಿರುವ ಹೊಸ ಬೆಟ್ಟದ ವೈಶಿಷ್ಟ್ಯಗಳೆಂದರೆ ಮಾಗರ್ ಬೆಟ್ಟ, ಗುರುಂಗ್ ಹಿಲ್, ರೆಸೆಹೆನ್ ಲಾ, ರೆಜಾಂಗ್ ಲಾ, ಮೊಖ್ಪರಿ ಮತ್ತು ಫಿಂಗರ್ 4 ಸಮೀಪದ ಚೀನಾ ಸ್ಥಾನಗಳ ಮೇಲೆ ಪ್ರಾಬಲ್ಯ ಹೊಂದಿರುವ ಎತ್ತರದ ಪ್ರದೇಶಗಳು ಎಂದು ಕೇಂದ್ರ ಸರ್ಕಾರದ ಉನ್ನತ ಮೂಲಗಳಿಂದ ತಿಳಿದು ಬಂದಿದೆ.


Saturday, 19 September 2020

 ಡ್ರಗ್ಸ್ ಪ್ರಕರಣ: 'ABCD' ಸಿನಿಮಾ ಖ್ಯಾತಿಯ ನಟ ಮತ್ತು ಡ್ಯಾನ್ಸರ್ ಕಿಶೋರ್ ಶೆಟ್ಟಿ ಬಂಧನ

ಡ್ರಗ್ಸ್ ಪ್ರಕರಣ: 'ABCD' ಸಿನಿಮಾ ಖ್ಯಾತಿಯ ನಟ ಮತ್ತು ಡ್ಯಾನ್ಸರ್ ಕಿಶೋರ್ ಶೆಟ್ಟಿ ಬಂಧನ


 ಡ್ರಗ್ಸ್ ಪ್ರಕರಣ: 'ABCD' ಸಿನಿಮಾ ಖ್ಯಾತಿಯ ನಟ ಮತ್ತು ಡ್ಯಾನ್ಸರ್ ಕಿಶೋರ್ ಶೆಟ್ಟಿ ಬಂಧನ

ಡ್ರಗ್ಸ್ ಮಾರಾಟ ಮಾಡುತ್ತಿದ್ದ ಖ್ಯಾತ ಡ್ಯಾನ್ಸರ್ ಮತ್ತು ನಟ ಕಿಶೋರ್ ಶೆಟ್ಟಿ ಸೇರಿದಂತೆ ಇಬ್ಬರನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರು ಮುಂಬೈಯಿಂದ ಡ್ರಗ್ಸ್ ತಂದು ಮಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದರು ಎಂದು ಮಂಗಳೂರು ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ತಿಳಿಸಿದ್ದಾರೆ.

ಬಂಧಿತರಿಂದ ಮಾದಕ ವಸ್ತು MDMA, ಬೈಕ್, ಮೊಬೈಲ್ ಸೇರಿದಂತೆ 1 ಲಕ್ಷ ಮೌಲ್ಯದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. 'ಈ ಪ್ರಕರಣದಲ್ಲಿ ಇನ್ನೂ ಕೆಲವು ಆರೋಪಿಗಳಿದ್ದು, ಇವರ ಚೈನ್ ಲಿಂಕ್ ಬಗ್ಗೆ ಸಂಪೂರ್ಣ ತನಿಖೆ ನಡೆಸುತ್ತಿದ್ದೇವೆ, ಇಬ್ಬರ ಮೇಲೆ ಮಾದಕ ವಸ್ತು ಮಾರಾಟ ಮತ್ತು ಸೇವನೆ ಎರಡು ಪ್ರಕರಣ ದಾಖಲಿಸಿದ್ದೇವೆ' ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ಬಂಧಿತ ಆರೋಪಿ ಸುರತ್ಕಲ್ ಕಾನ ನಿವಾಸಿ ಅಕೀಲ್ ನೌಶೀಲ್(28) ಈ ಹಿಂದೆ ವಿದೇಶದಲ್ಲಿ ಸೇಫ್ಟಿ ಆಫೀಸರ್ ಆಗಿ ಕೆಲಸ ಮಾಡುತ್ತಿದ್ದ. ಒಂದು ವರ್ಷದ ಹಿಂದೆ ಊರಿಗೆ ಹಿಂತಿರುಗಿದ್ದಾನೆ. ಕಿಶೋರ್ ಶೆಟ್ಟಿ ಡ್ಯಾನ್ಸರ್ ಮತ್ತು ನೃತ್ಯ ನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದಾನೆ. ಅಕೀಲ್ ನೌಶೀಲ್ ಜೊತೆ ಸೇರಿ ಬೆಂಗಳೂರು ಮತ್ತು ಮುಂಬೈಯಿಂದ ಮಾದಕ ವಸ್ತು ತಂದು ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಕಿಶೋರ್ ಶೆಟ್ಟಿ ಅದ್ಭುತ ಡ್ಯಾನ್ಸರ್ ಜೊತೆಗೆ ನಟ ಕೂಡ ಹೌದು. ಬಾಲಿವುಡ್ ನ ಸೂಪರ್ ಹಿಟ್ 'ABCD' ಸಿನಿಮಾದಲ್ಲಿ ಕಿಶೋರ್ ನಟಿಸಿದ್ದಾರೆ. ಕಿಶೋರ್ ಸಾಕಷ್ಟು ಹುಡುಗಿಯರಿಗೆ ಡ್ರಗ್ಸ್ ನೀಡಿ ಪಾರ್ಟಿ ಮಾಡುತ್ತಿದ್ದ ಎನ್ನುವ ಆರೋಪ ಕೇಳಿ ಬಂದಿದೆ. ಸ್ಯಾಂಡಲ್ ವುಡ್ ಮತ್ತು ಬಾಲಿವುಡ್ ಜೊತೆ ನಂಟಿರುವ ಕಿಶೋರ್ ನನ್ನು ಪೊಲೀಸರು ವಿಚಾರಣೆ ಮಾಡುತ್ತಿದ್ದು, ಯಾರ ಹೆಸರುಗಳನ್ನು ಬಹಿರಂಗಪಡಿಸಲಿದ್ದಾರೆ ಎನ್ನುವ ಕು

ಪತ್ರಕರ್ತನನ್ನು ಗೂಢಚರ್ಯೆಗೆ ಬಳಸಿದ ಚೀನಾ ಮತ್ತು ನೇಪಾಳಿ ಪ್ರಜೆಗಳ ಬಂಧನ

ಪತ್ರಕರ್ತನನ್ನು ಗೂಢಚರ್ಯೆಗೆ ಬಳಸಿದ ಚೀನಾ ಮತ್ತು ನೇಪಾಳಿ ಪ್ರಜೆಗಳ ಬಂಧನ

 

ಪತ್ರಕರ್ತನನ್ನು ಗೂಢಚರ್ಯೆಗೆ ಬಳಸಿದ ಚೀನಾ ಮತ್ತು ನೇಪಾಳಿ ಪ್ರಜೆಗಳ ಬಂಧನ

ನದೆಹಲಿ: ಪತ್ರಕರ್ತರೊಬ್ಬರು ಶಾಮೀಲಾಗಿರುವ ಗೂಢಚರ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಚೀನಾ ಮತ್ತು ಓರ್ವ ನೇಪಾಳಿ ನಾಗರಿಕರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ಸೆ.14ರಂದು ಫ್ರೀಲಾನ್ಸ್ ಪತ್ರಕರ್ತ ರಾಜೀವ್ ಶರ್ಮಾ ಅವರನ್ನು ದೆಹಲಿ ಪೊಲೀಸ್ ಇಲಾಖೆಯ ವಿಶೇಷ ಘಟಕವು ಬಂಧಿಸಿತ್ತು. ರಾಜೀವ್ ಶರ್ಮಾ ಬಂಧನದ ಬೆನ್ನಿಗೇ ಚೀನಾ ಮೂಲದ ಮಹಿಳೆ ಮತ್ತು ನೇಪಾಳದ ನಾಗರಿಕನನ್ನು ಬಂಧಿಸಲಾಗಿತ್ತು.

ನಕಲಿ ಕಂಪನಿಗಳ ಅಕೌಂಟ್‌ನಿಂದ ಈ ಪತ್ರಕರ್ತನಿಗೆ ಚೀನಾ ಮತ್ತು ನೇಪಾಳದ ಬಂಧಿತ ನಾಗರಿಕರು ದೊಡ್ಡಮೊತ್ತದ ಹಣ ಪಾವತಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಬೈಲ್‌ ಫೋನ್, ಲ್ಯಾಪ್‌ಟಾಪ್ ಮತ್ತು ಇತರ ಸೂಕ್ಷ್ಮ ದಾಖಲೆಗಳನ್ನು ಅವರಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ದಿ ಟ್ರಿಬ್ಯೂನ್, ಯುನೈಟೆಡ್ ನ್ಯೂಸ್ ಆಫ್ ಇಂಡಿಯಾ, ಫ್ರೀ ಪ್ರೆಸ್ ಜರ್ನಲ್, ಸಕಾಳ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳೊಂದಿಗೆ ಕಾರ್ಯನಿರ್ವಹಿಸಿದ್ದ ಶರ್ಮಾ ಅವರ ಮೇಲೆ ಇಸ್ರೇಲ್‌ನ ವಿವಾದಿತ ಸ್ಪೈವೇರ್ ಪೆಗಾಸಸ್ ಬಳಸಿ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಈ ಹಿಂದೆ ಸುದ್ದಿಯಾಗಿತ್ತು.

ನವದೆಹಲಿಯ ಪಿತಾಂಪುರ ಪ್ರದೇಶದ ನಿವಾಸಿ ಶರ್ಮಾ, ಕಳೆದ ಎರಡು ದಶಕಗಳಿಂದ ವಿದೇಶಾಂಗ ವ್ಯವಹಾರಗಳ ಬಗ್ಗೆ ವರದಿ ಮಾಡುತ್ತಿದ್ದರು. ರಕ್ಷಣಾ ಇಲಾಖೆಗೆ ಸಂಬಂಧಿಸಿದ ಕ್ರೋಢೀಕೃತ (ಕ್ಲಾಸಿಫೈಡ್) ಮಾಹಿತಿಯನ್ನು ಅವರು ಹೊಂದಿದ್ದರು ಎಂದು ದೆಹಲಿ ಪೊಲೀಸ್‌ ವಕ್ತಾರರು ಶುಕ್ರವಾರ ರಾತ್ರಿ ಹೇಳಿದರು.ಬಂಧನ ಕುರಿತು ಹೆಚ್ಚಿನ ಮಾಹಿತಿ ನೀಡಲು ದೆಹಲಿ ಪೊಲೀಸರು ನಿರಾಕರಿಸಿದ್ದಾರೆ. 'ಸೂಕ್ತಕಾಲದಲ್ಲಿ ಎಲ್ಲ ಮಾಹಿತಿ ಹಂಚಿಕೊಳ್ಳಲಾಗುವುದು' ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಸಂಚಾರಕ್ಕಿಲ್ಲ ನಿರ್ಬಂಧ

ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಸಂಚಾರಕ್ಕಿಲ್ಲ ನಿರ್ಬಂಧ

 

ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಸಂಚಾರಕ್ಕಿಲ್ಲ ನಿರ್ಬಂಧ


ನವದೆಹಲಿ, ಸಪ್ಟೆಂಬರ್.18: ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಸಂಚಾರಕ್ಕೆ ನಿರ್ಬಂಧ ವಿಧಿಸಿದ ಕೆಲವು ಗಂಟೆಗಳಲ್ಲೇ ದುಬೈ ವಿಮಾನಯಾನ ಪ್ರಾಧಿಕಾರವು ತನ್ನ ಆದೇಶವನ್ನು ಹಿಂಪಡೆದುಕೊಂಡಿದೆ. ಶನಿವಾರದಿಂದ ಏರ್ ಇಂಡಿಯಾ ಎಕ್ಸ್ ಪ್ರಸ್ ವಿಮಾನಗಳು ಎಂದಿನಂತೆ ಸಂಚರಿಸಲಿವೆ ಎಂದು ಪ್ರಾಧಿಕಾರವು ಸ್ಪಷ್ಟಪಡಿಸಿದೆ.

ಶುಕ್ರವಾರ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನಗಳ ಸಂಚಾರಕ್ಕೆ ದುಬೈ ನಾಗರಿಕ ವಿಮಾನಯಾನ ಪ್ರಾಧಿಕಾರವು ಆಕ್ಟೋಬರ್.2ರವರೆಗೂ ನಿರ್ಬಂಧ ವಿಧಿಸಿತ್ತು. ಕೊರೊನಾವೈರಸ್ ಸೋಂಕು ತಗುಲಿರುವ ಬಗ್ಗೆ ವರದಿಯಿದ್ದರೂ ಇಬ್ಬರು ಸೋಂಕಿತರನ್ನು ಪ್ರಯಾಣಿಸಲು ಅನುಮತಿ ನೀಡಲಾಗಿತ್ತು.

ಕೋವಿಡ್ ನಿಯಮ ಉಲ್ಲಂಘನೆ: ಏರ್ ಇಂಡಿಯಾ ವಿಮಾನ ಸಂಚಾರ ಅಮಾನತು ಮಾಡಿದ ದುಬೈ

ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನದಲ್ಲಿ ಇಂಥ ಎರಡು ಪ್ರತ್ಯೇಕ ಪ್ರಕರಣಗಳು ವರದಿಯಾಗಿದ್ದವು. ಈ ಹಿನ್ನೆಲೆ ವಿಮಾನಯಾನ ಸಂಸ್ಥೆಯ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳುವುದಕ್ಕಾಗಿ ಸಂಚಾರಕ್ಕೆ ನಿರ್ಬಂಧ ವಿಧಿಸಲು ತೀರ್ಮಾನಿಸಲಾಗಿತ್ತು.

ನಿರ್ಬಂಧ ವಿಧಿಸುವುದಕ್ಕೆ ಕಾರಣವೇನು?:

ಪ್ರಯಾಣಿಕರೊಬ್ಬರು ಜೈಪುರದ ಲ್ಯಾಬೊರೇಟರಿ ಒಂದರಲ್ಲಿ ಕೊರೊನಾ ವೈರಸ್ ತಪಾಸಣೆಗೆ ಒಳಪಟ್ಟಿದ್ದರು. ಸೆ. 2ರಂದು ಅವರ ಪರೀಕ್ಷೆ ವರದಿ ಬಂದಿದ್ದು, ಅದರಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿತ್ತು. ಹೀಗಿದ್ದರೂ ಅವರನ್ನು ಏರ್ ಇಂಡಿಯಾ ವಿಮಾನ ಐಎಕ್ಸ್ 1135ನಲ್ಲಿ ಸೆ. 4ರಂದು ದುಬೈಗೆ ಪ್ರಯಾಣಿಸಲು ಅವಕಾಶ ನೀಡಲಾಗಿತ್ತು. ಹೀಗೆ ಕೋವಿಡ್ ಸೋಂಕು ಇರುವ ವ್ಯಕ್ತಿಗಳನ್ನು ಎರಡನೆಯ ಬಾರಿಗೆ ಏರ್ ಇಂಡಿಯಾ ಕರೆದೊಯ್ದಿರುವುದನ್ನು ದುಬೈ ಅಧಿಕಾರಿಗಳು ಪತ್ತೆ ಮಾಡಿದ್ದರು.


ಕುರುಬರನ್ನು ಎಸ್‌ಟಿಗೆ ಸೇರಿಸಿ: ಹಾಲುಮತ ಮಹಾಸಭಾ ಹಕ್ಕೊತ್ತಾಯ

ಕುರುಬರನ್ನು ಎಸ್‌ಟಿಗೆ ಸೇರಿಸಿ: ಹಾಲುಮತ ಮಹಾಸಭಾ ಹಕ್ಕೊತ್ತಾಯ

 

ಕುರುಬರನ್ನು ಎಸ್‌ಟಿಗೆ ಸೇರಿಸಿ: ಹಾಲುಮತ ಮಹಾಸಭಾ ಹಕ್ಕೊತ್ತಾಯ

ಮೈಸೂರು: ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿ ಎಂದು ಹಾಲುಮತ ಮಹಾಸಭಾದ ಕಾನೂನು ಸಲಹೆಗಾರ ರಾಮಕೃಷ್ಣ ಶನಿವಾರ ಇಲ್ಲಿ ಒತ್ತಾಯಿಸಿದರು.

ಪ್ರಸ್ತುತ ಕುರುಬ ಸಮುದಾಯ ಪ್ರವರ್ಗ 2 ಎ ನಲ್ಲಿ ಬರುತ್ತಿದೆ. ಇಲ್ಲಿ 108 ಜಾತಿಗಳಿವೆ. ರಾಜ್ಯದಲ್ಲಿ ಮೂರನೇ ಹೆಚ್ಚು ಜನಸಂಖ್ಯೆ ಹೊಂದಿರುವ ಜಾತಿಯಾದರೂ; ರಾಜಕೀಯ, ಶೈಕ್ಷಣಿಕ, ಆರ್ಥಿಕವಾಗಿ ಹಿಂದುಳಿದಿದೆ. ಆದ್ದರಿಂದ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸಬೇಕು ಎಂದು ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

ಪರಿಶಿಷ್ಟ ಪಂಗಡಕ್ಕೆ ಶೇ 3ರ ಮೀಸಲಾತಿಯಿದೆ. ಈ ಮೀಸಲಾತಿಯನ್ನು ಶೇ 9ಕ್ಕೆ ಹೆಚ್ಚಿಸಬೇಕು ಎಂದು ಇದೇ ಸಂದರ್ಭ ತಮ್ಮ ಹಕ್ಕೊತ್ತಾಯ ಮಂಡಿಸಿದರು.

ಜಾತಿ ಜನಗಣತಿ ವರದಿ ಮಂಡಿಸಿ: 'ಎಲ್ಲರಿಗೂ ಸಾಮಾಜಿಕ ನ್ಯಾಯ ಸಿಗಲಿ. ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಅವಧಿಯಲ್ಲಿ ನಡೆಸಿದ ಜಾತಿ ಜನಗಣತಿ ವರದಿಯನ್ನು ಈ ಅಧಿವೇಶನದಲ್ಲೇ ಸರ್ಕಾರ ಮಂಡಿಸಲಿ' ಎಂದು ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ಅಧ್ಯಕ್ಷ ಕೆ.ಎಸ್.ಶಿವರಾಮು ಒತ್ತಾಯಿಸಿದರು.

'ಜನಸಂಖ್ಯೆ ಆಧಾರಿತ, ಆರ್ಥಿಕ, ಶೈಕ್ಷಣಿಕ ಪ್ರಗತಿ ಆಧಾರಿತ ವೈಜ್ಞಾನಿಕ ಮೀಸಲಾತಿ ಜಾರಿಗೊಳಿಸಲಿ ಎಂಬುದೇ ನಮ್ಮ ಬೇಡಿಕೆಯಾಗಿದೆ' ಎಂದು ತಿಳಿಸಿದರು.

ಮೈಸೂರು ಹಾಲುಮತ ಮಹಾಸಭಾದ ಸಮೃದ್ಧಿ ಸುರೇಶ್, ಡಾ.ಭರತ್, ಪುರುಷೋತ್ತಮ್, ಸಂಘಟನಾ ಕಾರ್ಯದರ್ಶಿ ಈಶ್ವರ್ ಪತ್ರಿಕಾಗೋಷ್ಠಿಯಲ್ಲಿದ್ದರು.

Friday, 18 September 2020

ಕೇಂದ್ರದ ಕೃಷಿ ಮಸೂದೆ ವಿರೋಧಿಸಿ ಸಚಿವ ಸ್ಥಾನಕ್ಕೆ ಹರ್‌ಸಿಮ್ರತ್‌ ಕೌರ್ ರಾಜೀನಾಮೆ

ಕೇಂದ್ರದ ಕೃಷಿ ಮಸೂದೆ ವಿರೋಧಿಸಿ ಸಚಿವ ಸ್ಥಾನಕ್ಕೆ ಹರ್‌ಸಿಮ್ರತ್‌ ಕೌರ್ ರಾಜೀನಾಮೆ

 


ಕೇಂದ್ರದ ಕೃಷಿ ಮಸೂದೆ ವಿರೋಧಿಸಿ ಸಚಿವ ಸ್ಥಾನಕ್ಕೆ ಹರ್‌ಸಿಮ್ರತ್‌ ಕೌರ್ ರಾಜೀನಾಮೆ


ದೆಹಲಿ: ಕೇಂದ್ರದ ಕೃಷಿ ಮಸೂದೆ ವಿರೋಧಿಸಿ ಸಚಿವೆ ಹರ್‌ಸಿಮ್ರತ್‌ ಕೌರ್ ಬಾದಲ್ ಗುರುವಾರ ಮೋದಿ ಸಂಪುಟ ತ್ಯಜಿಸಿದ್ದಾರೆ.ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರದಿಂದ ಆಹಾರ ಸಂಸ್ಕರಣ ಖಾತೆ ಸಚಿವೆ, ಶಿರೋಮಣಿ ಅಕಾಲಿ ದಳದ ನಾಯಕಿ ಹರ್‌ಸಿಮ್ರತ್‌ ಕೌರ್‌ ಬಾದಲ್‌ ರಾಜೀನಾಮೆ ನೀಡಿದ್ದಾರೆ. ಕೌರ್ ರಾಜೀನಾಮೆಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಶುಕ್ರವಾರ (ಸೆಪ್ಟೆಂಬರ್ 18, 2020) ಸ್ವೀಕರಿಸಿರುವುದಾಗಿ ವರದಿ ತಿಳಿಸಿದೆ.

ಹರ್ ಸಿಮ್ರತ್ ಕೌರ್ ರಾಜೀನಾಮೆಯಿಂದ ಸ್ಥಾನ ತೆರವಾದ ನಿಟ್ಟಿನಲ್ಲಿ ಆಹಾರ ಸಂಸ್ಕರಣ ಖಾತೆಯ ಹೆಚ್ಚುವರಿ ಹೊಣೆಯನ್ನು ನರೇಂದ್ರ ಸಿಂಗ್ ತೋಮರ್ ವಹಿಸಿಕೊಳ್ಳಬೇಕೆಂದು ರಾಷ್ಟ್ರಪತಿ ನಿರ್ದೇಶನ ನೀಡಿದ್ದಾರೆ.

ಕೇಂದ್ರದ ರೈತ ವಿರೋಧಿ ಕ್ರಮವನ್ನು ವಿರೋಧಿಸಿ ಸಚಿವೆ ಹರ್‌ಸಿಮ್ರತ್‌ ಕೌರ್‌ ಸಂಪುಟವನ್ನು ತೊರೆಯುವುದಾಗಿ ಶಿರೋಮಣಿ ಅಕಾಲಿ ದಳದ ಅಧ್ಯಕ್ಷ ಸುಖ್ಬೀರ್ ಸಿಂಗ್ ಬಾದಲ್ ಲೋಕಸಭೆಯಲ್ಲಿ ಘೋಷಿಸಿದ ಬೆನ್ನಲ್ಲೇ ಹರ್‌ಸಿಮ್ರತ್‌ ಕೌರ್‌ ತಮ್ಮ ರಾಜೀನಾಮೆಯನ್ನು ಮೋದಿ ಅವರಿಗೆ ಸಲ್ಲಿಸಿದ್ದಾರೆ.

ಪಕ್ಷದ ವಕ್ತಾರ ಹರ್‌ಚರಣ್‌ ಬೈನ್ಸ್‌ ಅವರು ಈ ವಿಚಾರವನ್ನೂ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಕೇಂದ್ರವು ಸಂಸತ್ತಿನಲ್ಲಿ ಮಂಡಿಸಿದ ಮೂರು ಕೃಷಿ ಮಸೂದೆಗಳನ್ನು ವಿರೋಧಿಸಿ ಅವರು ಕೇಂದ್ರ ಸಚಿವ ಸಂಪುಟದಿಂದ ಹೊರಬಂದಿದ್ದಾರೆ ಎಂದು ಹರ್‌ಚರಣ್‌ ತಿಳಿಸಿದ್ದಾರೆ.

ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕಾ ಸಚಿವರಾದ ಕೌರ್ ಅವರು ಮೋದಿ ಸರ್ಕಾರದಲ್ಲಿದ್ದ ಏಕೈಕ ಶಿರೋಮಣಿ ಅಕಾಲಿದಳ ಪ್ರತಿನಿಧಿಯಾಗಿದ್ದರು.

'ಕೇಂದ್ರದ ರೈತ ವಿರೋಧಿ ಶಾಸನಗಳನ್ನು ವಿರೋಧಿಸಿ ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ರೈತರು, ಮಕ್ಕಳು ಮತ್ತು ಸೋದರಿಯರ ಪರವಾದ ನನ್ನ ನಿಲುವಿನ ಬಗ್ಗೆ ನನಗೆ ಹೆಮ್ಮೆ ಇದೆ,' ಎಂದು ಹರ್‌ಸಿಮ್ರತ್‌ ಕೌರ್‌ ಟ್ವೀಟ್‌ ಮಾಡಿದ್ದಾರೆ.

2019ರಲ್ಲಿ 2ನೇ ಬಾರಿಗೆ ಅಧಿಕಾರ ವಹಿಸಿಕೊಂಡ ಬಳಿಕ ಮೋದಿ ನೇತೃತ್ವದ ಸರಕಾರದಿಂದ ರಾಜೀನಾಮೆ ನೀಡುತ್ತಿರುವ ಮೊದಲ ಸಚಿವೆ ಕೌರ್‌.

Dailyhunt

ಹಲವು ತಿಂಗಳ ನಂತರ ಪ್ರಧಾನಿ ಭೇಟಿಯಾದ ಮುಖ್ಯಮಂತ್ರಿ ಬಿಎಸ್ ವೈ, ಸಂಪುಟ ವಿಸ್ತರಣೆಗೆ ಅನುಮತಿ ಕೋರಿಕೆ

ಹಲವು ತಿಂಗಳ ನಂತರ ಪ್ರಧಾನಿ ಭೇಟಿಯಾದ ಮುಖ್ಯಮಂತ್ರಿ ಬಿಎಸ್ ವೈ, ಸಂಪುಟ ವಿಸ್ತರಣೆಗೆ ಅನುಮತಿ ಕೋರಿಕೆ

 

ಹಲವು ತಿಂಗಳ ನಂತರ ಪ್ರಧಾನಿ ಭೇಟಿಯಾದ ಮುಖ್ಯಮಂತ್ರಿ ಬಿಎಸ್ ವೈ, ಸಂಪುಟ ವಿಸ್ತರಣೆಗೆ ಅನುಮತಿ ಕೋರಿಕೆಬೆಂಗಳೂರು: ಹಲವು ತಿಂಗಳ ವಿಫಲ ಪ್ರಯತ್ನ ಮತ್ತು ಮುಂದೂಡಿಕೆಗಳ ನಂತರ ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾದರು.


ಪಾರ್ಲಿಮೆಂಟ್ ಹೌಸ್ ನಲ್ಲಿ 15 ನಿಮಿಷಗಳ ಭೇಟಿಯ ಅಂತ್ಯದಲ್ಲಿ ನವೆಂಬರ್ 19 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಟೆಕ್ ಶೃಂಗಸಭೆಯ ವರ್ಚುಯಲ್ ಉದ್ಘಾಟನೆಗೆ ಆಹ್ವಾನಿಸಿದರು.


ನಾನಾ ಅಭಿವೃದ್ಧಿ ಯೋಜನೆಗಳಿಗೆ ಸಂಬಂಧಿಸಿದಂತೆ ಕೇಂದ್ರ ಸಚಿವರಾದ ಪ್ರಕಾಶ್ ಜಾವಡೇಕರ್, ಗಜೇಂದ್ರ ಸಿಂಗ್ ಶೇಖಾವತ್ ಮತ್ತು ಧರ್ಮೇಂದ್ರ ಪ್ರಧಾನ್ ಅವರನ್ನು ಯಡಿಯೂರಪ್ಪ ಭೇಟಿಯಾದರು.ಇಂದು ಸಂಜೆ ಸಂಪುಟ ವಿಸ್ತರಣೆ ಸಂಬಂಧ ಚರ್ಚಿಸಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಅವರನ್ನು ಯಡಿಯೂರಪ್ಪ ಭೇಟಿಯಾಗುವ ನಿರೀಕ್ಷೆಯಿದೆ.


ಕೋವಿಡ್-19 ನಿರ್ಬಂಧದ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿಗಳ ಭೇಟಿ ವೇಳೆಯಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್ ಮಾತ್ರ ಯಡಿಯೂರಪ್ಪ ಅವರ ಜೊತೆಯಲ್ಲಿದ್ದರು. ಭೇಟಿ ವೇಳೆಯಲ್ಲಿ ಪ್ರವಾಹ ಪರಿಹಾರ, ಕುಡಿಯುವ ನೀರಿನ ಯೋಜನೆಗಳನ್ನು ಇತ್ಯರ್ಥಪಡಿಸುವಂತೆ ಮಹತ್ವದ ಚರ್ಚೆ ನಡೆಸಿದ್ದಾರೆ. ಸಂಪುಟ ವಿಸ್ತರಣೆಗೆ ಪ್ರಧಾನಿ ಬಳಿ ಅನುಮೋದಿ ಕೋರಿರುವ ಮುಖ್ಯಮಂತ್ರಿ, ಜೆ. ಪಿ. ನಡ್ಡಾ ಅವರೊಂದಿಗೆ ಮುಂದಿನ ಚರ್ಚೆ ನಡೆಸಲಿದ್ದಾರೆ.


ಅಮಿತ್ ಶಾ ಅವರ ಅನುಪಸ್ಥಿತಿಯಲ್ಲಿ ಕೇಂದ್ರ ನಾಯಕರು, ಸಂಪುಟದಲ್ಲಿ ಹೊಸ ಮುಖಗಳಿಗೆ ಮಣೆಹಾಕಲಿದ್ದಾರೆಯೇ ಅಥವಾ ಸಂಪುಟದಲ್ಲಿ ಹೆಚ್ಚುವರಿ ಸ್ಥಾನಗಳನ್ನು ಕಲ್ಪಿಸಲಿದ್ದಾರೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.


ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಿಂದ ಅನುದಾನವನ್ನು ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಪ್ರಧಾನಿ ಬಳಿ ಮನವಿ ಮಾಡಿಕೊಂಡಿದ್ದಾರೆ. ರಾಜ್ಯ ಪ್ರವಾಹ ನಿರ್ವಹಣಾ ನಿಧಿ ಅಥವಾ ರಾಷ್ಟ್ರೀಯ ನಿರ್ವಹಣಾ ನಿಧಿಯಲ್ಲಿನ ನಿಯಮಗಳನ್ನು ಪರಿಷ್ಕರಿಸಿ ಸಂಕಷ್ಟಕ್ಕೊಳಗಾಗಿರುವ ಜನರಿಗೆ ಅನುದಾನ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಕೋರಿದ್ದಾರೆ. ಕೃಷ್ಣಾ ಹಾಗೂ ಭದ್ರಾ ಮೇಲ್ದಂಡೆ ಯೋಜನೆಗಳನ್ನು ರಾಷ್ಟ್ರೀಯ ಯೋಜನೆಗಳಾಗಿ ಘೋಷಿಸುವಂತೆ ಪ್ರಧಾನಿಯನ್ನು ಮುಖ್ಯಮಂತ್ರಿ ಒತ್ತಾಯಿಸಿದ್ದಾರೆ ಎಂದು ಮುಖ್ಯಮಂತ್ರಿಗಳ ಕಾರ್ಯಾಲಯ ಹೇಳಿಕೆಯಲ್ಲಿ ತಿಳಿಸಿದೆ.


ಮೇಕೆದಾಟು ಮತ್ತು ಕಳಸಾ- ಬಂಡೂರಿ ನಾಲಾ ಕುಡಿಯುವ ನೀರಿನ ಯೋಜನೆಯನ್ನು ಪರಿಹರಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆಯೂ ಪ್ರಧಾನಿ ಬಳಿ ಯಡಿಯೂರಪ್ಪ ಮನವಿ ಮಾಡಿಕೊಂಡಿರುವುದಾಗಿ ವರದಿಯಾಗಿದೆ.

ಡ್ರಗ್ಸ್​ ಕೇಸ್​; ಅಕುಲ್​ ಜತೆಗೆ ಪ್ರಭಾವಿ ರಾಜಕಾರಣಿಯ ಪುತ್ರ ಸೇರಿ ಮೂವರಿಗೆ ಸಿಸಿಬಿ ನೋಟಿಸ್​

ಡ್ರಗ್ಸ್​ ಕೇಸ್​; ಅಕುಲ್​ ಜತೆಗೆ ಪ್ರಭಾವಿ ರಾಜಕಾರಣಿಯ ಪುತ್ರ ಸೇರಿ ಮೂವರಿಗೆ ಸಿಸಿಬಿ ನೋಟಿಸ್​

 


ಡ್ರಗ್ಸ್​ ಕೇಸ್​; ಅಕುಲ್​ ಜತೆಗೆ ಪ್ರಭಾವಿ ರಾಜಕಾರಣಿಯ ಪುತ್ರ ಸೇರಿ ಮೂವರಿಗೆ ಸಿಸಿಬಿ ನೋಟಿಸ್​

ಬೆಂಗಳೂರು: ಸ್ಯಾಂಡಲ್​ವುಡ್​ಗೆ ಡ್ರಗ್ಸ್​ ನಶೆ ನಂಟಿನ ಪ್ರಕರಣದಲ್ಲಿ ಹಲವರ ನಂಟಿನ ವ್ಯಾಪ್ತಿ ವಿಸ್ತರಿಸಿಕೊಳ್ಳುತ್ತಲೇ ಇದ್ದು, ಇಂದು ಮತ್ತೆ ಮೂವರಿಗೆ ಸಿಸಿಬಿ ನೋಟಿಸ್​ ನೀಡಿದೆ.


ಈಗಾಗಲೇ 'ಮಾದಕ' ನಟಿಯರಾದ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಮೊನ್ನೆಯಷ್ಟೇ ತಾರಾದಂಪತಿ ಐಂದ್ರಿತಾ ರೇ ಮತ್ತು ದಿಗಂತ್​ಗೆ ಸಿಸಿಬಿ ಬುಲಾವ್​ ನೀಡಿತ್ತು. ಮೊದಲ ಸುತ್ತಿನ ವಿಚಾರಣೆ ಎದುರಿಸಿರುವ ಗುಳಿಕೆನ್ನೆಯ ಜೋಡಿಗೆ ಮತ್ತೊಮ್ಮೆ ಸಮನ್ಸ್​ ಕೊಡುವುದಾಗಿ ಸಿಸಿಬಿ ಪೊಲೀಸರು ಹೇಳಿ ಕಳುಹಿಸಿದ್ದರು. ಇದೀಗ ಕಿರುತೆರೆಯ ಖ್ಯಾತ ನಿರೂಪಕ ಅಕುಲ್​ ಬಾಲಾಜಿ, ನಟ ಸಂತೋಷ್​ ಕುಮಾರ್​, ಮಾಜಿ ಶಾಸಕ ಆರ್​.ವಿ.ದೇವರಾಜ್​ ಪುತ್ರ ಆರ್​.ವಿ. ಯುವರಾಜ್​ ಅವರಿಗೆ ನೋಟಿಸ್​ ನೀಡಲಾಗಿದೆ. ಸಿಸಿಬಿ ಕಚೇರಿಗೆ ವಕೀಲರ ಜೊತೆ ಬಂದ ಐಂದ್ರಿತಾ-ದಿಗಂತ್​

ಡ್ರಗ್ಸ್​ ಮಾಫಿಯಾದ ಜಾಡು ಹಿಡಿದು ತನಿಖೆ ಚುರುಕುಗೊಳಿಸಿರುವ ಸಿಸಿಬಿ ಪೊಲೀಸರು ಹಲವರ ಬೆನ್ನಹಿಂದೆ ಬಿದ್ದಿದ್ದಾರೆ. ಈಗಾಗಲೇ ಸಿಸಿಬಿ ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ಕಾಟನ್​ಪೇಟೆ ಪ್ರಕರಣದ ಪ್ರಮುಖ ಆರೋಪಿಗಳಾದ ಡ್ರಗ್ಸ್​ ಪೆಡ್ಲರ್​ಗಳು ವಿಚಾರಣೆ ವೇಳೆ ಮಹತ್ತರದ ವಿಚಾರಗಳನ್ನು ಬಾಯ್ಬಿಟ್ಟಿದ್ದಾರೆ. ಈ ಮೇರೆಗೆ ಅಕುಲ್​ ಬಾಲಾಜಿ, ಸಂತೋಷ್​ ಕುಮಾರ್​, ಯುವರಾಜ್​ ಆರ್​.ವಿ. ಅವರನ್ನೂ ವಿಚಾರಣೆಗೆ ಒಳಪಡಿಸುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗೆ 10 ಗಂಟೆಗೆ ಸಿಸಿಬಿ ಕಚೇರಿಗೆ ಹಾಜರಾಗುವಂತೆ ನೋಟಿಸ್​ ಜಾರಿ ಮಾಡಲಾಗಿದೆ.

ಸಿಸಿಬಿ ಪೊಲೀಸರ ಮೊಬೈಲ್​ನಿಂದಲೇ ಡ್ರಗ್ಸ್​ ಪೆಡ್ಲರ್ ವೈಭವ್​ ಕಾಲ್​ ಮಾಡಿದ್ದು ಆ ಹೆಣ್ಣಿಗೆ…

'ನಾವಿಬ್ಬರೂ ಒಟ್ಟಿಗೆ ಡ್ರಗ್ಸ್​ ಸೇವಿಸುತ್ತಿದ್ದೆವು, ಬಿಎಂಡಬ್ಲ್ಯು ಕಾರಿನಲ್ಲೇ ಹೋಟೆಲ್​ಗೆ ಕರೆದೊಯ್ಯುತ್ತಿದ್ದೆ…'

'ರಾಗಿಣಿಗೆ ನಾನೇ ಡ್ರಗ್ಸ್​ ಕೊಡುತ್ತಿದ್ದೆ… ಡ್ರಗ್ಸ್​ ಅಡಗಿಸಿಟ್ಟಿರುವ ಜಾಗವನ್ನೂ ತೋರಿಸುವೆ'


ಸಿಸಿಬಿಯಿಂದ ಅಕುಲ್ ಬಾಲಾಜಿ, ಸಂತೋಷ್ ಕುಮಾರ್ ಹಾಗೂ ಆರ್ ಬಿ ಯುವರಾಜ್ ಗೆ ನೋಟಿಸ್

ಸಿಸಿಬಿಯಿಂದ ಅಕುಲ್ ಬಾಲಾಜಿ, ಸಂತೋಷ್ ಕುಮಾರ್ ಹಾಗೂ ಆರ್ ಬಿ ಯುವರಾಜ್ ಗೆ ನೋಟಿಸ್

 


ಸಿಸಿಬಿಯಿಂದ ಅಕುಲ್ ಬಾಲಾಜಿ, ಸಂತೋಷ್ ಕುಮಾರ್ ಹಾಗೂ ಆರ್ ಬಿ ಯುವರಾಜ್ ಗೆ ನೋಟಿಸ್


ಬೆಂಗಳೂರು : ಈಗಾಗಲೇ ಹಲವರನ್ನು ಸಿಸಿಬಿ ಡ್ರಗ್ಸ್ ಪ್ರಕರಣದಲ್ಲಿ ಬಂಧಿಸಲ್ಪಟ್ಟು, ವಿಚಾರಣೆಯನ್ನೂ ನಡೆಸುತ್ತಿದೆ. ಇದರ ಬೆನ್ನಲ್ಲೇ, ಟಿವಿ ಆಂಕರ್ ಅಕುಲ್ ಬಾಲಾಜಿ ಸೇರಿದಂತೆ ಮೂವರಿಗೆ ಪ್ರಕರಣದಲ್ಲಿ ಸಿಸಿಬಿ ನೋಟಿಸ್ ಜಾರಿ ಮಾಡಿದೆ. ಈ ಮೂಲಕ ಅಕುಲ್ ಬಾಲಾಜಿಗೂ ಬಿಗ್ ಶಾಕ್ ನೀಡಿದೆ.ಈ ಬಿಲ್ ನೋಡಿ ಕೊರೋನಾ ಸೋಂಕಿತರ ಕುಟುಂಬದ ಸದಸ್ಯರಿಗೆ ಫುಲ್‌ ಶಾಕ್.!

ನಟಿ ಸಂಜನಾ, ನಟಿ ರಾಗಿಣಿ ದ್ವಿವೇದಿ ಸೇರಿದಂತೆ ಅನೇಕರನ್ನು ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಬಂಧಿಸಿ, ವಿಚಾರಣೆ ನಡೆಸಿದೆ. ಅಲ್ಲದೇ ನಟಿ ರಾಗಿಣಿ ಸೇರಿದಂತೆ ಇತರೆ ಆರೋಪಿಗಳು ಜೈಲು ಸೇರಿದ್ದಾರೆ.

ಇದೀಗ ಇದೇ ಪ್ರಕರಣದಲ್ಲಿ, ಸಿಸಿಬಿಯಿಂದ ಅಕುಲ್ ಬಾಲಾಜಿ, ಸಂತೋಷ್ ಕುಮಾರ್ ಹಾಗೂ ಆರ್ ಬಿ ಯುವರಾಜ್ ಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದೆ. ಈ ಮೂಲಕ ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣ ಮತ್ತೊಂದು ಟ್ವಿಸ್ಟ್ ಪಡೆದುಕೊಂಡಿದೆ.

Thursday, 17 September 2020

ಅಮಿತ್ ಶಾ ಏಮ್ಸ್ನಿಂದ ಡಿಸ್ಚಾರ್ಜ್

ಅಮಿತ್ ಶಾ ಏಮ್ಸ್ನಿಂದ ಡಿಸ್ಚಾರ್ಜ್

 


ಅಮಿತ್ ಶಾ ಏಮ್ಸ್ನಿಂದ ಡಿಸ್ಚಾರ್ಜ್


ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ದೆಹಲಿಯ ಏಮ್ಸ್ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದು, ಸೋಮವಾರಿದಂದ ಲೋಕಸಭಾ ಅಧಿವೇಶನದಲ್ಲಿ ಪಾಲ್ಗೊಳ್ಳಲಿದ್ದಾರೆ.


ಕೊರೊನಾ ವೈರಸ್ ಸೋಂಕಿಗೆ ಆರಂಭದಲ್ಲಿ ಒಳಗಾಗಿದ್ದ 55 ವರ್ಷದ ಅಮಿತ್ ಶಾ ಚಿಕಿತ್ಸೆ ನಂತರ ಪದೇಪದೆ ಆಸ್ಪತ್ರೆಗೆ ದಾಖಲಾಗುತ್ತಿದ್ದು, ಕೊರೊನಾ ಪೂರ್ವ ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದರು.

ನಾಳೆ ಬೆಳಿಗ್ಗೆ ಸಿಎಂ ಯಡಿಯೂರಪ್ಪ ಪ್ರಧಾನಿ ನರೇಂದ್ರ ಮೋದಿ ಭೇಟಿ

ನಾಳೆ ಬೆಳಿಗ್ಗೆ ಸಿಎಂ ಯಡಿಯೂರಪ್ಪ ಪ್ರಧಾನಿ ನರೇಂದ್ರ ಮೋದಿ ಭೇಟಿ

 

ನಾಳೆ ಬೆಳಿಗ್ಗೆ ಸಿಎಂ ಯಡಿಯೂರಪ್ಪ ಪ್ರಧಾನಿ ನರೇಂದ್ರ ಮೋದಿ ಭೇಟಿ


ಬೆಂಗಳೂರು : ಮಹತ್ವದ ಬೆಳವಣಿಗೆ ಎನ್ನುವಂತೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ನಾಳೆ ಬೆಳಿಗ್ಗೆ, ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಲಿದ್ದಾರೆ. ಪಿಎಂ ಭೇಟಿಯಾಗಲಿರುವ ಸಿಎಂ, ರಾಜ್ಯದ ನೆರೆ ನಿರ್ವಹಣೆ ಸೇರಿದಂತೆ ಹಲವು ವಿಚಾರಗಳ ಕುರಿತಂತೆ ಮಾತುಕತೆ ನಡೆಸಲಿದ್ದಾರೆ.

ರಾಜ್ಯದ ವಿವಿಧ ಸಮಸ್ಯೆಗಳು ಸೇರಿದಂತೆ ಹಲವು ವಿಚಾರಗಳ ಕುರಿತು ಮಾತುಕತೆ ನಡೆಸುವ ಸಂಬಂಧ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು, ನಾಳೆ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಲಿದ್ದಾರೆ. ನಾಳೆ ಬೆಳಿಗ್ಗೆ 10.45ಕ್ಕೆ ಪಿಎಂ ಮೋದಿಯವರನ್ನು ಭೇಟಿಯಾಗರುವ ಸಿಎಂ ಯಡಿಯೂರಪ್ಪ, ನೆರೆ ಪರಿಹಾರ ಕಾಮಗಾರಿ ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ.ಪ್ರಧಾನಿ ನರೇಂದ್ರ ಮೋದಿಯವರ ಭೇಟಿಯ ಬಳಿಕ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿ ಮಾಡಲಿರುವಂತ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು, ರಾಜ್ಯ ಸಚಿವ ಸಂಪುಟ ವಿಸ್ತರಣೆ ಸೇರಿದಂತೆ ಹಲವು ವಿಚಾರಗಳ ಬಗ್ಗೆಯೂ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.

ರಿಯಾ ಚಕ್ರವರ್ತಿಯ ಮಾಜಿ ವ್ಯವಸ್ಥಾಪಕ ಮತ್ತು ಪ್ರತಿಭಾ ವ್ಯವಸ್ಥಾಪಕರನ್ನು ಎನ್‌ಸಿಬಿ ಸಮನ್ಸ್ ಮಾಡುತ್ತದೆ

ರಿಯಾ ಚಕ್ರವರ್ತಿಯ ಮಾಜಿ ವ್ಯವಸ್ಥಾಪಕ ಮತ್ತು ಪ್ರತಿಭಾ ವ್ಯವಸ್ಥಾಪಕರನ್ನು ಎನ್‌ಸಿಬಿ ಸಮನ್ಸ್ ಮಾಡುತ್ತದೆ

 


ರಿಯಾ ಚಕ್ರವರ್ತಿಯ ಮಾಜಿ ವ್ಯವಸ್ಥಾಪಕ ಮತ್ತು ಪ್ರತಿಭಾ ವ್ಯವಸ್ಥಾಪಕರನ್ನು ಎನ್‌ಸಿಬಿ ಸಮನ್ಸ್ ಮಾಡುತ್ತದೆ

ಮುಂಬೈ: ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿಗೆ ಸಂಬಂಧಿಸಿದ ಮಾದಕವಸ್ತು ಪ್ರಕರಣದ ತನಿಖೆ ನಡೆಸುತ್ತಿರುವ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಮಂಗಳವಾರ ರಿಯಾ ಚಕ್ರವರ್ತಿಯ ಮಾಜಿ ವ್ಯವಸ್ಥಾಪಕ ಶ್ರುತಿ ಮೋದಿ ಮತ್ತು ಪ್ರತಿಭಾ ವ್ಯವಸ್ಥಾಪಕ ಜಯ ಸಹಾ ಅವರನ್ನು ಕರೆಸಿದೆ. ತನಿಖೆ. ಮೋದಿಯವರು ಮತ್ತು ಸಹಾ ಅವರನ್ನು ಬುಧವಾರ ಬಲ್ಲಾರ್ಡ್ ಪಿಯರ್‌ನಲ್ಲಿರುವ ಎನ್‌ಸಿಬಿಯ ಕಚೇರಿಯಲ್ಲಿ ಹಾಜರುಪಡಿಸುವಂತೆ ಕೇಳಿಕೊಳ್ಳಲಾಗಿದೆ. ರಿಯಾ ಅವರ ವಾಟ್ಸಾಪ್ ಚಾಟ್‌ಗಳ ಆಧಾರದ ಮೇಲೆ ಇವರಿಬ್ಬರನ್ನು ಕರೆಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಅವರ ಹೆಸರುಗಳು ಈ ಚಾಟ್‌ಗಳಲ್ಲಿ ಕಂಡುಬರುತ್ತವೆ ಮತ್ತು ಅಧಿಕಾರಿಗಳು ಅವರು ಮಾದಕವಸ್ತು ಪ್ರಕರಣದಲ್ಲಿ ಏನಾದರೂ ಪಾತ್ರ ವಹಿಸಿದ್ದಾರೆಯೇ ಎಂದು ಕಂಡುಹಿಡಿಯಲು ಬಯಸಿದ್ದರು. ಮುಂಬೈ ಪೊಲೀಸರು ಈ ಹಿಂದೆ ರಜಪೂತರ ಆತ್ಮಹತ್ಯೆ ಪ್ರಕರಣದಲ್ಲಿ ತಮ್ಮ ಹೇಳಿಕೆಗಳನ್ನು ದಾಖಲಿಸಿದ್ದರು. ಸಿಬಿಐ, ತನಿಖೆಯನ್ನು ವಹಿಸಿಕೊಂಡ ನಂತರ ಇಬ್ಬರನ್ನೂ ಪ್ರಶ್ನಿಸಿತ್ತು. ಸಂಬಂಧಿತ ಬೆಳವಣಿಗೆಯೊಂದರಲ್ಲಿ, ಎನ್‌ಸಿಬಿ ರಜಪೂತ್‌ನ ಸ್ನೇಹಿತ ಸೂರ್ಯದೀಪ್ ಮಲ್ಹೋತ್ರಾ ಮತ್ತು ಗೋವಾ ಕ್ರಿಸ್ ಕೋಸ್ಟಾದಿಂದ ಡ್ರಗ್ ಪೆಡ್ಲರ್‌ನನ್ನು ವಿಡಿಯೋಕಾನ್ಫರೆನ್ಸಿಂಗ್ ಮೂಲಕ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಹಾಜರುಪಡಿಸಿತು. ಸೆಪ್ಟೆಂಬರ್ 18 ರವರೆಗೆ ಮಲ್ಹೋತ್ರಾ ಅವರನ್ನು ಎನ್‌ಸಿಬಿ ಕಸ್ಟಡಿಯಲ್ಲಿ ಮತ್ತು ಸೆಪ್ಟೆಂಬರ್ 17 ರವರೆಗೆ ಕೋಸ್ಟಾ ಅವರನ್ನು ಬಂಧಿಸಲಾಯಿತು. ಮ್ಯಾನೇಜ್ಮೆಂಟ್ ಪದವೀಧರರಾದ ಮಲ್ಹೋತ್ರಾ ರಜಪೂತ್ ಅವರ ಮನೆಯಿಂದ ಬೀಳಿಸುತ್ತಿದ್ದರು ಮತ್ತು ಗಾಂಜಾವನ್ನು ಧೂಮಪಾನ ಮಾಡುತ್ತಿದ್ದರು ಮತ್ತು ರಿಯಾ ಮತ್ತು ಅವಳ ಸಹೋದರ ಶೋಯಿಕ್ ಅವರ ಆದೇಶದ ಮೇರೆಗೆ ರಜಪೂತ ನಟನಿಗೆ ವ್ಯವಸ್ಥೆ ಮಾಡಿದರು.


ಅಧಿಕಾರಿಗಳು ಹೇಳಿದರು. ಕೋಸ್ಟಾ ಸಹ-ಆರೋಪಿ ಕರಮ್‌ಜೀತ್ ಆನಂದ್ ಅಲಿಯಾಸ್ ಕೆಜೆ ಅವರಿಂದ drugs ಷಧಿಗಳನ್ನು ಖರೀದಿಸಿ ಗೋವಾದಲ್ಲಿ ಸರಬರಾಜು ಮಾಡುತ್ತಿದ್ದರು ಎಂದು ಅವರು ಹೇಳಿದರು. ಎನ್‌ಸಿಬಿ ನಟರಾದ ಸಾರಾ ಅಲಿ ಖಾನ್ ಮತ್ತು ರಕುಲ್ ಪ್ರೀತ್ ಸಿಂಗ್ ಮತ್ತು ಡಿಸೈನರ್ ಸಿಮೋನೆ ಖಂಬಟ್ಟಾ ಅವರನ್ನು ಈ ವಾರ ಕರೆಸಿಕೊಳ್ಳುವ ಸಾಧ್ಯತೆಯಿದೆ. ರಿಯಾ ಅವರ ವಿಚಾರಣೆ.

ಆರಾಧನಾ ಕೇಂದ್ರಗಳಲ್ಲಿ ' ಪ್ರಸಾದ'ದ ರೂಪದಲ್ಲಿ ಗಾಂಜಾ ಬಳಕೆ ?

ಆರಾಧನಾ ಕೇಂದ್ರಗಳಲ್ಲಿ ' ಪ್ರಸಾದ'ದ ರೂಪದಲ್ಲಿ ಗಾಂಜಾ ಬಳಕೆ ?

 


ಆರಾಧನಾ ಕೇಂದ್ರಗಳಲ್ಲಿ ' ಪ್ರಸಾದ'ದ ರೂಪದಲ್ಲಿ ಗಾಂಜಾ ಬಳಕೆ ?

ಬೆಂಗಳೂರು , ಸೆ . 15 : ರಾಜ್ಯದಲ್ಲಿ ಮಾದಕ ವಸ್ತುಗಳ ( ಗಾಂಜಾ ) ಜಾಲದಲ್ಲಿ ಚಿತ್ರ ನಟಿಯರು , ಕೆಲ ರಾಜಕೀಯ ಮುಖಂಡರ ಹೆಸರುಗಳು ಕೇಳಿ ಬರುತ್ತಿವೆ . ಈ ಮಧ್ಯ ಸೂಫಿ , ಸಿದ್ಧ , ಅವಧೂತ ಪರಂಪರೆಯ ಕೆಲ ಸೌಹಾರ್ದ ತಾಣಗಳು , ಕೆಲ ದೇವಸ್ಥಾನಗಳ ಜಾತ್ರೆಗಳಲ್ಲಿ ಬೈರಾಗಿಗಳು , ಸಾಧು - ಸಂತರು ಸೇರಿದಂತೆ ಕೆಲಭಕ್ತರು ' ನಿಷೇಧದ ನಡುವೆಯೂ ಗಾಂಜಾವನ್ನು ಪ್ರಸಾದದ ರೂಪದಲ್ಲಿ ಬಳಕೆ ಮಾಡುವ ಪರಿಪಾಠ ಇಂದಿಗೂ ಚಾಲ್ತಿಯಲ್ಲಿದೆ . ರಾಜ್ಯದ ಅತ್ಯಂತ ಪುರಾತನ ಮತ್ತು ಪ್ರಸಿದ್ಧವಾಗಿರುವ ಸೂಫಿ , ಅವಧೂತ , ನಾಥ , ಸಿದರು ಸೇರಿದಂತೆ ಶರಣ ಚಳವಳಿಯ ಮುಂದುವರಿದ ಭಾಗವಾಗಿರುವ ಹಲವು ಶ್ರದ್ಯಾ ಕೇಂದ್ರಗಳು , ಆರಾಧನಾ ಸ್ಥಳಗಳಲ್ಲಿ ದೇವಸ್ಕಾನಗಳಲ್ಲಿ ಕಲ ಸಾಧಕರು ಭಂಗಿ ಸೊಪ್ಪು ( ಗಾಂಜಾ ) ನ್ನು ಬಳಕೆ ಮಾಡುತ್ತಿದ್ದರು ಎಂದು ಹೇಳಲಾಗುತ್ತದೆ . ಹಾವೇರಿ ಜಿಲ್ಲೆಯ ' ಮೈಲಾರ ಲಿಂಗನ ಕಾರ್ಣಿಕ'ಕ್ಕೆ ಬರುವ ಗೊರವಯ್ಯಗಳು , ಕೊಡೇಕಲ್ ಬಸವಣ್ಣ , ಬಳ್ಳಾರಿಯ ಸಿಳಗುರಿಕೆ , ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ತಿಂತಿಣಿ ಮೌನೇಶ್ವರ ದೇವಳಕ್ಕೆ ಆಗಮಿಸುವ ಸಾಧುಗಳು , ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಚಿಕ್ಕಲ್ಲೂರು ಸಿದ್ದಪಾಜಿ - ಮಂಟೇಸ್ವಾಮಿ ಜಾತ್ರೆ , ಚಾಮರಾಜನಗರ ಕೊಳ್ಳೇಗಾಲ ತಾಲೂಕಿನ ಮಲೆಮಹದೇಶ್ವರನ ಕೆಲ ಭಕ್ತಾಧಿಗಳು , ಅವಧೂತ ಪರಂಪರೆಯ ಸಿದ್ಧಾರೂಢ ಮಠದ ಸಾಧು - ಸಂತರು , ಚಿತ್ರದುರ್ಗ ಜಿಲ್ಲೆ ಕೊಳಾಳು ಗ್ರಾಮದಲ್ಲಿರುವ ಕೆಂಚಾವಧೂತನ ಆರಾಧಕರು , ಅದೇ ಜಿಲ್ಲೆ ಚಳ್ಳಕೆರೆ ತಾಲೂಕಿನ ಪವಾಡ ಪುರುಷನೆಂಬ ನಂಬಿಕೆಯುಳ್ಳ ತಿಪ್ಪೇರುದ್ರ ಸ್ವಾಮಿ ದೇವಸ್ಥಾನದಲ್ಲಿ ನಡೆದುಕೊಳ್ಳುವ ಕೆಟ್ಟ ಜಂಗಮರು - ಸಾಧುಗಳ ಗಾಂಜಾ ಸೇವನೆ ಗುಟ್ಟಿನ ಸಂಗತಿಯೇನಲ್ಲ . ಆದರೆ , ಈ ಸಾಧು , ಸಂತರು , ಭಕ್ತರು ಹಾಗೂ ಭೈರಾಗಿಗಳಿಗೆ ' ಗಾಂಜಾ ' ಎಲ್ಲಿಂದ ಬರುತ್ತದೆ ಎಂಬುದು ನಿಗೂಢವಾಗಿದೆ . ಕೆಲವು ಕಡೆಗಳು ಈ ಸಾಧು - ಸಂತರು ಕಾಡು - ಮೇಡುಗಳಲ್ಲಿ ಗಾಂಜಾದ ಬೀಜಗಳನ್ನು ಎಸೆದು ಬೆಳೆದ ಗಾಂಜಾ ಗಿಡಗಳನ್ನು ತಮಗೆ ಬೇಕಾದಾಗ ಕಿತ್ತು ತಂದು ಅದರ ಸೊಪ್ಪನ್ನು ಬಳಕೆ ಮಾಡುತ್ತಾರೆಂದು ಹೇಳಲಾಗುತ್ತದೆ . ಮೈಲಾರ ಲಿಂಗನ ಭಕ್ತರು ` ದೇವರಿಗೆ ಅರ್ಪಿಸಲು ಒಂದೆರಡು ಗಾಂಜಾ ಗಿಡಗಳನ್ನು ಬೆಳೆದರೆ ತಪ್ಪೇನಿಲ್ಲ ' ಎಂಬ ನಂಬಿಕೆ ಇಂದಿಗೂ ಭಕ್ತರಲ್ಲಿದೆ ಎಂದು ಮೂಲಗಳು ತಿಳಿಸಿವೆ .

ಡ್ರಗ್ ಸರಬರಾಜು ಮಾಡುತ್ತಿದ್ದ ಆರೋಪ ಆಫ್ರಿಕಾ ಪ್ರಜೆ ಬಂಧನ

ಡ್ರಗ್ ಸರಬರಾಜು ಮಾಡುತ್ತಿದ್ದ ಆರೋಪ ಆಫ್ರಿಕಾ ಪ್ರಜೆ ಬಂಧನ


ಡ್ರಗ್ ಸರಬರಾಜು ಮಾಡುತ್ತಿದ್ದ ಆರೋಪ ಆಫ್ರಿಕಾ ಪ್ರಜೆ ಬಂಧನ

ಬೆಂಗಳೂರು , ಸೆ .16 : ಪಾರ್ಟಿಗಳಲ್ಲಿ ವಿವಿಧ ಜನರಿಗೆ ಡ್ರಗ್ಸ್ ಸರಬರಾಜು ಮಾಡುತ್ತಿದ್ದ ಮತ್ತೊಬ್ಬ ಆಫ್ರಿಕಾದ ಮೂಲದ ವಡ್ಡರ್ ನೂಬ್ಬನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು , ವಿಚಾರಣೆಗೆ ಒಳಪಡಿಸಿದ್ದಾರೆ . ಬಂಧಿತನನ್ನು ಆಫ್ರಿಕಾ ಮೂಲದ ಬೆನಾಲ್ ಉಡನ್ನಾ ಎಂದು ಗುರುತಿಸಲಾಗಿದೆ . ಆರೋಪಿಯಿಂದ 12 ಗ್ರಾಂ ಕೊಕೇನ್ ವಶಪಡಿಸಿಕೊಳ್ಳಲಾಗಿದೆ . ಮೊದಲಿಗೆ ಬ್ಲಾಕೀ , ಕೋಕ್ ಹಾಗೂ ಜಾನ್ ಎಂಬ ಮೂವರು ಡ್ರಗ್ ಪಡ್ಡರ್ ಗಳು ಇರುವುದಾಗಿ ತಿಳಿದು ಬಂದಿತ್ತು . ಆದರೆ , ಬಂಧಿತ ಆರೋಪಿ ಬೆನಾಲ್ ಉಡಾನೇ ಈ ಮೂರು ಹೆಸರುಗಳಲ್ಲಿ ಡ್ರಗ್ಸ್ ಪೂರೈಸುತ್ತಿರುವ ಮಾಹಿತಿ ವಿಚಾರಣೆ ವೇಳೆ ಲಭ್ಯವಾಗಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ . ಡ್ರಗ್ಸ್ ಸರಬರಾಜು ಪ್ರಕರಣದಲ್ಲಿ ಈಗಾಗಲೇ ಆಫ್ರಿಕಾದ ಸೆನೆಗಲ್‌ನ ಡಕಾರ್‌ ಸಿಟಿಯ ಲೂಮ್ ಪಪ್ಪರ್ ಎಂಬ ಡುಗ್ ಪಡ್ಕರ್ ನನ್ನು ಬಂಧಿಸಲಾಗಿದೆ .

ಪ್ರಧಾನಿಯ 70 ನೇ ಹುಟ್ಟುಹಬ್ಬ ಸಾಮಾಜಿಕ ಜಾಲತಾಣದಲ್ಲಿ ' ರಾಷ್ಟ್ರೀಯ ನಿರುದ್ಯೋಗ ದಿನ ' ಟ್ರೆಂಡಿಂಗ್

ಪ್ರಧಾನಿಯ 70 ನೇ ಹುಟ್ಟುಹಬ್ಬ ಸಾಮಾಜಿಕ ಜಾಲತಾಣದಲ್ಲಿ ' ರಾಷ್ಟ್ರೀಯ ನಿರುದ್ಯೋಗ ದಿನ ' ಟ್ರೆಂಡಿಂಗ್

 


ಪ್ರಧಾನಿಯ 70 ನೇ ಹುಟ್ಟುಹಬ್ಬ ಸಾಮಾಜಿಕ ಜಾಲತಾಣದಲ್ಲಿ ' ರಾಷ್ಟ್ರೀಯ ನಿರುದ್ಯೋಗ ದಿನ ' ಟ್ರೆಂಡಿಂಗ್

ಹೊಸದಿಲ್ಲಿ : ಇಂದು ಪ್ರಧಾನಿ ನರೇಂದ್ರ ಮೋದಿ ತಮ್ಮ 70 ನೇ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ . ಈ ದಿನವನ್ನು ಸಾಮಾಜಿಕ ಜಾಲತಾಣಿಗರು ವಿಶಿಷ್ಟವಾಗಿ , ಅಂದರೆ ರಾಷ್ಟ್ರೀಯ ನಿರುದ್ಯೋಗ ದಿನವನ್ನಾಗಿ ಆಚರಿಸುತ್ತಿದ್ದಾರೆ . ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಪ್ರಮಾಣವನ್ನು ವಿರೋಧಿಸಿ ಹಾಗೂ ನಿರುದ್ಯೋಗಿ ಯುವಜನತೆಗೆ ಬೆಂಬಲವಾಗಿ ನಿಲ್ಲುವ ಸಲುವಾಗಿ ರಾಷ್ಟ್ರೀಯ ನಿರುದ್ಯೋಗ ದಿನ ಅಥವಾ ರಾಷ್ಟ್ರೀಯ ಬೇರೊಜಾರ್ ದಿವಸ್ ಇಂದು ಟ್ವಿಟರಲ್ಲಿ ಟ್ರೆಂಡಿಂಗ್ ಆಗಿದೆ . ಅಂತೆಯೇ ರಾಷ್ಟ್ರೀಯ ಬೇರೊಜಾರ್ ಸಪ್ತಾಹ ಕೂಡ ಇಂದು ಅಂತ್ಯವಾಗುತ್ತಿದೆ . ಈ ವಾರದಾದ್ಯಂತ ಯುವಜನತೆ ತಾವು ಎದುರಿಸುತ್ತಿರುವ ಸಮಸ್ಯೆಗಳ ಕುರಿತಂತೆ ಸರಕಾರಕ್ಕೆ ವಿವಿಧ ರೀತಿಯಲ್ಲಿ ಮನವರಿಕೆ ಮಾಡಲು ಪ್ರಯತ್ನಿಸಿದೆ . #NationalUnemploymentDay ಹ್ಯಾಶ್ ಟ್ಯಾಗ್ ನಡಿ 20 ಲಕ್ಷಕ್ಕೂ ( 2.3 ಮಿಲಿಯನ್ ) ಹೆಚ್ಚು ಟೀಟ್ ಗಳನ್ನು ಮಾಡಲಾಗಿದೆ .

Wednesday, 16 September 2020

ಮೋದಿ ಬರ್ಥ್‌ಡೇ ಕೇಕ್:700 ಅಡಿ ಉದ್ದ , 7000 ಕೆಜಿ ತೂಕ

ಮೋದಿ ಬರ್ಥ್‌ಡೇ ಕೇಕ್:700 ಅಡಿ ಉದ್ದ , 7000 ಕೆಜಿ ತೂಕ

 


ಮೋದಿ ಬರ್ಥ್‌ಡೇ ಕೇಕ್:700 ಅಡಿ ಉದ್ದ , 7000 ಕೆಜಿ ತೂಕ


ಸೂರತ್‌: ಪ್ರಧಾನಿ ನರೇಂದ್ರ ಮೋದಿ ಇಂದು ( 17 ಸೆಪ್ಟೆಂಬರ್‌) 69ನೇ ವಸಂತಕ್ಕೆ ಕಾಲಿಡುತ್ತಿದ್ದು, ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಲು ಸೂರತ್‌ನ ಬೇಕರಿಂದು ಬೃಹತ್‌ ಕೇಕ್‌ ತಯಾರಿಸಿದೆ. ಬರೋಬ್ಬ್ರರಿ 700 ಅಡಿ ಉದ್ದದ ಹಾಗೂ 7000 ಕೆಜಿ ತೂಕದ ಬೃಹತ್ ಕೇಕ್‌ ಇದಾಗಿದ್ದು, ನಗರದ 700 ಮಂದಿ ಪ್ರಾಮಾಣಿಕ ವ್ಯಕ್ತಿಗಳು ಈ ಕೇಕನ್ನು ಕತ್ತರಿಸಲಿದ್ದಾರೆ. ಈ ಕುರಿತು ಸೂರತ್‌ನ ಬ್ರೆಡ್‌ಲೈನರ್‌ ಬೇಕರಿಯ ಮಾಲೀಕರು ತಿಳಿಸಿದ್ದಾರೆ.

ಸೂರತ್‌ನ ಬ್ರೆಡ್‌ಲೈನರ್‌ ಬೇಕರಿಯು ಪ್ರತಿವರ್ಷವೂ ಮೋದಿ ಜನ್ಮದಿನಕ್ಕೆ ಬೃಹತ್‌ ಕೇಕ್‌ ತಯಾರಿಸುವ ಸಂಪ್ರದಾಯ ನಡೆಸಿಕೊಂಡು ಬಂದಿದೆ. ತಯಾರಿಸಿದ ಬೃಹತ್‌ ಕೇಕನ್ನು ಬಡ ಮಕ್ಕಳಿಗೆ ಹಂಚುತ್ತದೆ. ಈ ಬಾರಿ "ಭ್ರಷ್ಟಾಚಾರ' ಘೋಷವಾಕ್ಯದೊಂದಿಗೆ ಬೃಹತ್‌ ಕೇಕ್‌ ತಯಾರಿಸುತ್ತಿದೆ. ಈ ಕೇಕ್‌ ವಿಶ್ವದಾಖಲೆ ಬರೆಯಲಿದ್ದು, ಮತ್ತು ಭ್ರಷ್ಟಾಚಾರ ಮುಕ್ತ ಭಾರತ ನಿರ್ಮಾಣಕ್ಕೆ ಜಾಗೃತಿ ಮೂಡಿಸಲಿದೆ ಎಂದು ಭೆಕರಿಯ ಕೇಕ್‌ ತಯಾರಕರಾದ ನಿತಿನ್‌ ಪಟೇಲ್‌ ಹೇಳಿದ್ದಾರೆ.


ಸೂರತ್‌ನ ಮತ್ತೊಂದು ಬೇಕರಿಯಾದ ಅತುಲ್‌ ಬೇಕರಿಯು ಬಡಕಟ್ಟು ಪ್ರದೇಶಗಳಲ್ಲಿರುವ ಸುಮಾರು 370 ಶಾಲೆಗಳ 12,000 ಮಕ್ಕಳಿಗೆ ಆಹಾರ ಪೊಟ್ಟಣಗಳನ್ನು ವಿತರಿಸುವುದಾಗಿ ಘೋಷಣೆ ಮಾಡಿದೆ. ಅಪೌಷ್ಟಿಕತೆ ಮುಕ್ತ ಭಾರತ ನಿರ್ಮಾಣ ನಮ್ಮ ಪ್ರಧಾನಿಯ ಗುರಿಯಾಗಿದೆ. ಅವರ ಕನಸಿನ ಸಾಕಾರಕ್ಕೆ ನಮ್ಮದೊಂದು ಅಳಿಲು ಸೇವೆ ಎಂದು ಅತುಲ್‌ ಬೇಕರಿ ಮಾಲೀಕ ಅತುಲ್‌ ವೆಕಾರಿಯಾ ತಿಳಿಸಿದ್ದಾರೆ.

ಬಾಬರಿ ಮಸೀದಿ ದ್ವಂಸ ಪ್ರಕಟಣ; ಸೆಪ್ಟೆಂಬರ್ ರಂದು ತೀರ್ಪು

ಬಾಬರಿ ಮಸೀದಿ ದ್ವಂಸ ಪ್ರಕಟಣ; ಸೆಪ್ಟೆಂಬರ್ ರಂದು ತೀರ್ಪು

 


ಬಾಬರಿ ಮಸೀದಿ ದ್ವಂಸ ಪ್ರಕಟಣ; ಸೆಪ್ಟೆಂಬರ್ ರಂದು ತೀರ್ಪು

ಬಾಬರಿ ಮಸೀದಿ ಧ್ವಂಸ ಪ್ರಕರಣ : ಡಿಸೆಂಬರ್ 30 ರಂದು              ತೀರ್ಪು               
ಹೊಸದಿಲ್ಲಿ , ಸೆ .16 : 28 ವರ್ಷಗಳ ಹಳೆಯ ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದ ತೀರ್ಪು ಸೆಪ್ಟಂಬರ್ 30 ರಂದು ಹೊರ ಬರದೆ . ಅಯೋಧ್ಯೆ ಕ್ರಿಮಿನಲ್ ಸಂಚು ಪ್ರಕರಣದ ತೀರ್ಪಿಗೆ ಬುಧವಾರ ದಿನ ನಿಗದಿಪಡಿಸಿರುವ ಲಕ್ಕೋದ ವಿಶೇಷ ಸಿಬಿಐ ನ್ಯಾಯಾಲಯದ ನ್ಯಾಯಾಧೀಶ ಸುರೇಂದ್ರ ಕುಮಾರ್ ಯಾದವ್ ಅಂದೇ ತೀರ್ಪನ್ನು ಪ್ರಕಟಿಸಲಿದ್ದು , ಅಡ್ವಾಣಿ ಸಹಿತ 32 ಆರೋಪಿಗಳು ನ್ಯಾಯಾಲಯದಲ್ಲಿ ಹಾಜರಿರುವಂತೆ ಸೂಚಿಸಿದ್ದಾರೆ . ಮಾಜಿ ಉಪ ಪ್ರಧಾನಮಂತ್ರಿ ಅಡ್ವಾಣಿ , ಬಿಜೆಪಿ ದಿಗ್ಗಜರಾದ ಮುರಳಿ ಮನೋಹರ ಜೋಶಿ , ಕಲ್ಯಾಣ್ ಸಿಂಗ್ ಹಾಗೂ ಉಮಾಭಾರತಿ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ .

ಎಲ್ಲ 32 ಆರೋಪಿಗಳ ಹೇಳಿಕೆಗಳನ್ನು ದಾಖಲಿಸಿಕೊಂಡ ನ್ಯಾಯಾಲಯ ಈ ತಿಂಗಳಾರಂಭದಲ್ಲಿ ಎಲ್ಲ ಪುಕ್ರಿಯೆಗಳನ್ನು ಪೂರ್ಣಗೊಳಿಸಿತ್ತು . ವಕೀಲ ಕೆ.ಕೆ. ಮಿಶ್ರಾ 32 ಆರೋಪಿಗಳ ಪೈಕಿ 25 ಮಂದಿಯನ್ನು ಪ್ರತಿನಿಧಿಸಿದರು . 

Tuesday, 15 September 2020

ದೇಶದಲ್ಲಿ 50 ಲಕ್ಷ ದಾಟಿದ ಸೊಂಕಿತರ ಸಂಖ್ಯೆ: ಒಂದೇ ದಿನದಲ್ಲಿ 1,290 ಜನರು ಬಲಿ

ದೇಶದಲ್ಲಿ 50 ಲಕ್ಷ ದಾಟಿದ ಸೊಂಕಿತರ ಸಂಖ್ಯೆ: ಒಂದೇ ದಿನದಲ್ಲಿ 1,290 ಜನರು ಬಲಿ

 


ದೇಶದಲ್ಲಿ 50 ಲಕ್ಷ ದಾಟಿದ ಸೊಂಕಿತರ ಸಂಖ್ಯೆ: ಒಂದೇ ದಿನದಲ್ಲಿ 1,290 ಜನರು ಬಲಿ

ನವದೆಹಲಿ: ದೇಶದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ತ್ವರಿತಗತಿಯಲ್ಲಿ ಏರಿಕೆ ಕಾಣುತ್ತಿದ್ದು, ಕಳೆದ 24 ಗಂಟೆಗಳಲ್ಲಿ 901,123 ಹೊಸ ಪ್ರಕರಣಗಳು ಪತ್ತೆಯಾಗಿದೆ. ಮಾತ್ರವಲ್ಲದೆ ಸೊಂಕಿನಿಂದು ಸುಮಾರು 1,290 ಜನರು ಪ್ರಾಣ ತ್ಯೆಜಿಸಿದ್ದಾರೆ.

ಭಾರತದಲ್ಲಿ ಇದೀಗ ಒಟ್ಟು ಸೋಂಕಿತರ ಸಂಖ್ಯೆ 50ಲಕ್ಷದ ಗಡಿ ದಾಟಿದ್ದು, ಅಂಕಿ ಅಂಶಗಳ ಪ್ರಕಾರ 50,202,360 ಜನರು ವೈರಾಣು ಪೀಡಿತರಾಗಿದ್ದಾರೆ. ಇದರಲ್ಲಿ ಸುಮಾರು 39,42,361 ಜನರು ಗುಣಮುಖರಾಗಿದ್ದು, 9,95,933 ಸಕ್ರೀಯ ಪ್ರಕರಣಗಳಿವೆ.

ದೇಶದಲ್ಲಿ 78.28% ಚೇತರಿಕೆ ಪ್ರಮಾಣವಿದ್ದು ಇದೊಂದು ಅಶಾದಾಯಕ ಬೆಳವಣಿಗೆಯಾಗಿದೆ.   ಜಗತ್ತಿನ ಇತರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಮೃತರ ಪ್ರಮಾಣ 1.64% ನಷ್ಟಿದೆ.

ಮಹಾರಾಷ್ಟ್ರದಲ್ಲಿ ಕೋವಿಡ್ ಆರ್ಭಟ ಮುಂದುವರೆದಿದೆ. ಈ ರಾಜ್ಯವೊಂದರಲ್ಲೆ ಸುಮಾರು 17 ಸಾವಿರ ಪ್ರಕರಣಗಳು ಪ್ರತಿದಿನ ಪತ್ತೆಯಾಗುತ್ತಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 10.7ಲಕ್ಷಕ್ಕೆ ತಲುಪಿದೆ. ಮಹಾರಾಷ್ಟ್ರ ಹೊರತುಪಡಿಸಿದರೆ ಆಂಧ್ರಪ್ರದೇಶ, ತಮಿಳುನಾಡು, ಕರ್ನಾಟಕ, ಉತ್ತರ ಪ್ರದೇಶದಲ್ಲಿ ಸೊಂಕಿತರ ಸಂಖ್ಯೆ ದ್ವಿಗುಣವಾಗುತ್ತಿದೆ.

ಈ ನಾಲ್ಕು ರಾಜ್ಯಗಳಲ್ಲಿ 60.3% ಸಕ್ರೀಯ ಪ್ರಕರಣಗಳಿವೆ.  37% ರಷ್ಟು ಮರಣ ಪ್ರಮಾಣ ಮಹಾರಾಷ್ಟ್ರವೊಂದರಲ್ಲೇ ದಾಖಲಾಗುತ್ತಿವೆ.

ಪಾಕ್ ನಿಂದ ಕದನವಿರಾಮ ಉಲ್ಲಂಘಿಸಿ ಗುಂಡಿನ ದಾಳಿ: ಭಾರತೀಯ ಯೋಧ ಹುತಾತ್ಮ !

ಪಾಕ್ ನಿಂದ ಕದನವಿರಾಮ ಉಲ್ಲಂಘಿಸಿ ಗುಂಡಿನ ದಾಳಿ: ಭಾರತೀಯ ಯೋಧ ಹುತಾತ್ಮ !


 ಪಾಕ್ ನಿಂದ ಕದನವಿರಾಮ ಉಲ್ಲಂಘಿಸಿ ಗುಂಡಿನ ದಾಳಿ: ಭಾರತೀಯ ಯೋಧ ಹುತಾತ್ಮ !

 

ಜಮ್ಮುಕಾಶ್ಮೀರ: ಗಡಿನಿಯಂತ್ರಣ ರೇಖೆಯ ಬಳಿ(ಎಲ್ಒಸಿ) ಪಾಕಿಸ್ತಾನ ಸೇನೆ ಕದನವಿರಾಮ ಉಲ್ಲಂಘಿಸಿ ಗುಂಡಿನ ದಾಳಿ ನಡೆಸಿದ್ದರಿಂದ ಭಾರತೀಯ ಯೋಧರೊಬ್ಬರು ಹುತಾತ್ಮರಾಗಿದ್ದಾರೆ. ಮಾತ್ರವಲ್ಲದೆ ಅಧಿಕಾರಿಯೊಬ್ಬರು ಸೇರಿದಂತೆ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆಂದು ವರದಿಯಾಗಿದೆ.


ಜಮ್ಮು ಕಾಶ್ಮೀರದ ರಜೌರಿ ಜಿಲ್ಲೆಯ ಗಡಿನಿಯಂತ್ರಣ ರೇಖೆಯ ಬಳಿ ಪಾಕ್ ಸೇನೆ ಮಂಗಳವಾರ (15-9-2020)ರಾತ್ರಿ ಗುಂಡಿನ ದಾಳಿ ನಡೆಸಿದೆ.  ಮಂಗಳವಾರ ಮಧ್ಯಾಹ್ನ ಕೂಡ ಪಾಕಿಸ್ಥಾನ ಸೇನೆ ಸುಂದರ್ ಬಾನಿ ಸೆಕ್ಟರ್ ನ ಎಲ್ಓಸಿ ಉದ್ದಕ್ಕೂ ಶೆಲ್ ದಾಳಿ ಮತ್ತು ಗುಂಡಿನ ದಾಳಿ ನಡೆಸಿತ್ತು. ಇದಕ್ಕೆ ಭಾರತೀಯ ಸೇನೆಯ ತಕ್ಕ ಪ್ರತ್ಯುತ್ತರ ನೀಡಿದರೂ ಅಧಿಕಾರಿ ಸೇರಿದಂತೆ ಮೂವರು ಸೈನಿಕರು ಗಾಯಗೊಂಡಿದ್ದರು.  ಇದೀಗ ಗಾಯಗೊಂಡ ಯೋಧರು ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.


ಈ ವರ್ಷದಲ್ಲಿ (ಜನವರಿ 1 ರಿಂದ ಸೆಪ್ಟೆಂಬರ್ 7 ರವರೆಗೆ) ಜಮ್ಮು ಪ್ರದೇಶದ ನಿಯಂತ್ರಣ ರೇಖೆಯಲ್ಲಿ 3,186 ಬಾರಿ ಕದನ ವಿರಾಮ ಉಲ್ಲಂಘನೆ ನಡೆದಿದೆ ಎಂದು ಕೇಂದ್ರ ಸೆಪ್ಟೆಂಬರ್ 14 ರಂದು ತಿಳಿಸಿತ್ತು. ಇದಲ್ಲದೆ, ಈ ವರ್ಷ (ಜನವರಿ 1 ರಿಂದ ಆಗಸ್ಟ್ 31 ರವರೆಗೆ) ಜಮ್ಮು ಪ್ರದೇಶದ ಇಂಡೋ-ಪಾಕ್ ಅಂತರರಾಷ್ಟ್ರೀಯ ಗಡಿಯಲ್ಲಿ 242 ಗಡಿಯಾಚೆಗಿನ ಗುಂಡಿನ ದಾಳಿಗಳು ಸಂಭವಿಸಿವೆ.