Saturday, 7 March 2020

ಕೇರಳದಲ್ಲಿ ಒಂದೇ ಕುಟುಂಬದ 5 ಮಂದಿಗೆ ಕೊರೊನಾ ಸೋಂಕು

ತಿರುವನಂತಪುರಂ, ಮಾರ್ಚ್ 8: ಇಟಲಿಯಿಂದ ಕೇರಳಕ್ಕೆ ಬಂದ ಐದು ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದೆ. ಈ ಕುರಿತಂತೆ ಮಾಹಿತಿ ನೀಡಿದ ಆರೋಗ್ಯ ಸಚಿವೆ ಕೆ.ಕೆ ಶೈಲಜಾ, ಒಂದೇ ಕುಟುಂಬದ ಐವರಿಗೆ ಕೋವಿಡ್ 19 ಪಾಸಿಟಿವ್ ಎಂಬ ಅಂಶ ಬೆಳಕಿಗೆ ಬಂದಿದೆ. ಕೇರಳದ ಪಥನಂತ್ತಿಟ್ಟ ಜಿಲ್ಲೆಯ ಐವರ ಪೈಕಿ ಮೂವರು ಇಟಲಿಯಿಂದ ಇತ್ತೀಚೆಗೆ ಹಿಂತಿರುಗಿದ್ದಾರೆ. ಇನ್ನಿಬ್ಬರು ಅವರ ಸಂಬಂಧಿಕರಾಗಿದ್ದಾರೆ. ಫೆಬ್ರವರಿ 29 ರಂದು ವೆನಿಸ್‌ನಿಂದ ಕತಾರ್ ಏರ್‌ವೇಸ್ ವಿಮಾನದ ಮೂಲಕ ಕೇರಳಕ್ಕೆ ಆಗಮಿಸಿದ್ದರು. ಪ್ರಯಾಣ ಮಧ್ಯೆ ದೋಹಾದಲ್ಲಿ ಒಂದೂವರೆ ಗಂಟೆಗಳ ವಿಮಾನ ನಿಲುಗಡೆಯಾಗಿತ್ತು ಎಂದು ತಿಳಿದು ಬಂದಿದೆ.

ಶನಿವಾರದಂದು ಆಸ್ಪತ್ರೆಗೆ ಬರಲು ಹಿಂಜರಿಯುತ್ತಿದ್ದ ಈ ಐವರ ಮನ ಓಲೈಕೆ ಮಾಡಿ, ಪರೀಕ್ಷೆಗಳನ್ನು ಮಾಡಿದ ಬಳಿಕ ಪಾಸಿಟಿವ್ ಎಂದು ತಿಳಿದು ಬಂದಿದೆ. ಇದಕ್ಕೂ ಮುನ್ನ ಕೇರಳದಲ್ಲೇ ಮೊದಲ ಬಾರಿಗೆ ಮೂವರಿಗೆ ಕೊರೊನಾವೈರಸ್ ಪಾಸಿಟಿವ್ ಇರುವುದು ಪತ್ತೆಯಾಗಿತ್ತು. ವುಹಾನ್ ನಿಂದ ಬಂದ ಮೂವರಿಗೆ ಪಾಸಿಟಿವ್ ಎಂದು ತಿಳಿದು ಬಂದಿತ್ತು. ಆದರೆ, ಮೂವರು ಚಿಕಿತ್ಸೆ ಬಳಿಕ ಗುಣಮುಖರಾಗಿದ್ದರು.




SHARE THIS

Author:

0 التعليقات: